• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋಲಿನ ಭಯದಿಂದ ಬಿಜೆಪಿಗೆ ಬಸವರಾಜ ಹೊರಟ್ಟಿ ಸೇರ್ಪಡೆ: ಸಲೀಂ ಅಹ್ಮದ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಮೇ 25: ಬಸವರಾಜ ಹೊರಟ್ಟಿ ಅವರು ಅಧಿಕಾರ ದಾಹದಿಂದ ಮತ್ತೆ ಸಭಾಪತಿ ಆಗಬೇಕು ಎಂಬ ಆಸೆಯಿಂದ ಬಿಜೆಪಿ ಸೇರಿದ್ದಾರೆ. ಸೋಲಿನ ಭಯದಿಂದ ಹೊರಟ್ಟಿ ಅವರು ಬಿಜೆಪಿ ಸೇರಿದ್ದಾರೆ ಎಂಬ ಸಂದೇಶ ಈಗಾಗಲೇ ಶಿಕ್ಷಕರಿಗೆ ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಏಳು ಬಾರಿ ಸೆಕ್ಯುಲರಿ ಪಾರ್ಟಿಯಿಂದ ಹೊರಟ್ಟಿ ಸ್ಪರ್ಧೆ ಮಾಡಿದ್ದರಿಂದ ಜ್ಯಾತ್ಯಾತೀತ ಮತಗಳು ಅವರಿಗೆ ಹೋಗಿದ್ದವು ಆದರೆ ಪ್ರಸಕ್ತ ವರ್ಷ ಶಿಕ್ಷಕರು ಬದಲಾವಣೆ ಬಯಸಿದ್ದಾರೆ ಕಳೆದ 40 ವರ್ಷಗಳಿಂದ ಶಿಕ್ಷಕರ ಕ್ಷೇತ್ರದಲ್ಲಿ ಗುರಿಕಾರ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.

ಹುಬ್ಬಳ್ಳಿ ಬೈಪಾಸ್ ಅಪಘಾತ ಘಟನೆ, ಸರಕಾರ ಗಂಭೀರ: ಸಚಿವ ಹಾಲಪ್ಪಹುಬ್ಬಳ್ಳಿ ಬೈಪಾಸ್ ಅಪಘಾತ ಘಟನೆ, ಸರಕಾರ ಗಂಭೀರ: ಸಚಿವ ಹಾಲಪ್ಪ

ಎರಡು ವರ್ಷಗಳಿಂದ ಶಿಕ್ಷಕರಿಗೆ ಅನ್ಯಾಯ

ಅವರ ಮೇಲೆ ಯಾವುದೇ ಕಳಂಕ ಇಲ್ಲ. ಬಿಜೆಪಿಯಿಂದ ಶಿಕ್ಷಕರು ಭ್ರಮನಿರಸರಾಗಿದ್ದಾರೆ . ಯಾತಕ್ಕಾಗಿ ಬಿಜೆಪಿಗೆ ಮತ ಹಾಕಬೇಕು ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ . ಬೆಲೆ ಏರಿಕೆ , ಭ್ರಷ್ಟಾಚಾರ ಅಥವಾ ಜನ ವಿಶ್ವಾಸ ಇಲ್ಲದ ಪಕ್ಷಕ್ಕೆ ಮತ ಹಾಕಬೇಕಾ ಎಂಬ ಹಲವಾರು ಪ್ರಶ್ನೆಗಳು ಶಿಕ್ಷಕರ ತಲೆಯಲ್ಲಿವೆ ಎಂದರು. ಕಳೆದ ಎರಡು ವರ್ಷಗಳಿಂದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ . ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ . ಶಿಕ್ಷಕರ ನೇಮಕಾತಿ , ಪೊಲೀಸ್ ನೇಮಕಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇದನ್ನೆಲ್ಲ ಶಿಕ್ಷಕರು ಅರ್ಥ ಮಾಡಿಕೊಳ್ಳುತ್ತಾರೆ . ಈ ಬಾರಿ ಗುರಿಕಾರ ಅವರು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.

ಬಿಜೆಪಿಯಲ್ಲಿ ಭ್ರಷ್ಟಾಚಾರ ಮಾತ್ರ ವೃದ್ಧಿ:

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಾಧನೆ ಶೂನ್ಯವಾಗಿದ್ದು, ಆಪರೇಶನ್ ಕಮಲದೊಂದಿಗೆ ಉದಯವಾದ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದ್ದು, ಭ್ರಷ್ಟಾಚಾರ ಮಾತ್ರ ವೃದ್ಧಿಯಾಗಿದೆ. ಸರ್ಕಾರದ ಶೇ.40 ಕಮಿಷನ್ ನಿಂದಾಗಿ ರಾಜ್ಯದ ಜತೆ ತಲೆತಗ್ಗಿಸುವಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆರೋಪಿಸಿದರು.

ಶತಮಾನ ಪೂರೈಸಿದ ಸರ್ಕಾರಿ ಶಾಲೆ; ಸೀಟುಗಳಿಗೆ ಭಾರೀ ಬೇಡಿಕೆಶತಮಾನ ಪೂರೈಸಿದ ಸರ್ಕಾರಿ ಶಾಲೆ; ಸೀಟುಗಳಿಗೆ ಭಾರೀ ಬೇಡಿಕೆ

ಬಿಜೆಪಿ ಲೂಟಿಕೋರರ ಸರ್ಕಾರವಾಗಿದೆ, ಜನತೆ ಬದಲಾವಣೆ ಬಯಸಿದ್ದು, ಆ ನಿಟ್ಟಿನಲ್ಲಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಹಾಗೂ ಹೋರಾಟದ ಕಾರ್ಯವನ್ನು ಕಾಂಗ್ರೆಸ್ ಮಾಡಲಿದೆ. ಬಸವರಾಜು ಗುರಿಕಾರ ಅವರು ನಿರಂತರವಾಗಿ ಈ ಕ್ಷೇತ್ರದ ಪ್ರಮಾಣಿಕವಾಗಿ ಕೆಲಸ ಮಾಡಿದ್ದಾರೆ. ಈ ಸಲ ಅವರನ್ನು ಜನರು ಆಯ್ಕೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

(ಒನ್ಇಂಡಿಯಾ ಸುದ್ದಿ)

   Virat Kohli ಕ್ಯಾಪ್ಟನ್ ಆದಾಗ ಏನ್ ಮಾಡಿದ್ರು ಗೊತ್ತಾ! | #cricket | Oneindia Kannada
   English summary
   MLC Salim Ahmed has criticised Basavaraj Horatti for joining BJP. He said, Horatti has joined BJP fearing defeat and aspiring to become Parishat Chairman.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X