ಲೋಕಸಭಾ ಚುನಾವಣೆ: ರಾಜಕಾರಣಿಗಳಿಗೆ ಮಹದಾಯಿ ಹೋರಾಟಗಾರರು ಕೊಟ್ಟ ಖಡಕ್ ಎಚ್ಚರಿಕೆಯೇನು?
ಹುಬ್ಬಳ್ಳಿ, ಫೆಬ್ರವರಿ 26: ಉತ್ತರ ಕರ್ನಾಟಕದ ಜೀವನಾಡಿ ಈ ಮಹದಾಯಿ ನದಿ ನೀರು. ವರ್ಷಗಳಿಂದಲೂ ರೈತರು ಈ ಯೋಜನೆ ಜಾರಿಗೆ ನಿರಂತರ ಹೋರಾಟ ಮಾಡುತ್ತಲೆ ಬಂದಿದ್ದಾರೆ. ಆದರೆ ರಾಜಕಾರಣಿಗಳು ಅಧಿಕಾರಕ್ಕಾಗಿ ಕೇವಲ ಭರವಸೆ ನೀಡಿದ್ದಾರೆ, ಹೊರತು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುತ್ತಿಲ್ಲ. ಈ ಬಗ್ಗೆ ದೂರಿರುವ ರೈತರು, ಲೋಕಸಭಾ ಚುನಾವಣೆ ಸಂಬಂಧ ರಾಜಕಾರಣಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಲೋಕಸಭಾ ಚುನಾವಣೆ ಒಳಗಾಗಿ ಮಹದಾಯಿ ಯೋಜನೆ ಜಾರಿ ಆಗಬೇಕು ಇಲ್ಲದಿದ್ದರೆ. ಲೋಕಸಭಾ ಚುನಾವಣೆಗೆ ಸಂಬಂಧ ಈ ಭಾಗದೊಳಕ್ಕೆ ನಿಮ್ಮ ವಾಹನಗಳನ್ನು ಬರದಂತೆ ತಡೆಯುತ್ತೇವೆ. ಮತ ಬಹಿಷ್ಕಾರ ಮಾಡುತ್ತೇವೆ ಎಂದು ಮಹದಾಯಿ ಹೋರಾಟಗಾರರು ಎಚ್ಚರಿಕೆ ನೀಡಿದರು.

ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸಕ್ಕೆ ಮನವಿ ಮಾಡಲು ಹೋರಾಟಗಾರರು ಸೋಮವಾರ ತೆರಳಿದ್ದರು.
ಸಮಜಾಯಿ ಕೊಡಲು ಮುಂದಾದ ಸಚಿವರ ವಿರುದ್ಧ ಕಿಡಿ
ಈ ಸಂದರ್ಭದಲ್ಲಿ ಸಚಿವರು ಮಹದಾಯಿ ಯೋಜನೆ ಜಾರಿಗೆ ಕ್ಲೀರನ್ಸ್ ಕೊಡಲಾಗಿದೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಈ ವೇಳೆ ಮಲ್ಲಪ್ರಭಾ ಕಳಸಾ ಬಂಡೂರಿ ಮಹದಾಯಿ ರೈತ ಹೋರಾಟ ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಸುಭಾಷಚಂದ್ರಗೌಡ ಪಾಟೀಲ್ ಮತ್ತು ರೈತ ನಾಯಕ ಶಿವಣ್ಣ ಹುಬ್ಬಳ್ಳಿ ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಬ್ಯಾಂಕ್ ಗಳಲ್ಲಿ ಕಟಬಾಕಿ ರೈತರಿಗೆ ಸಾಲ ಸಿಗಬೇಕು. ರೈತರ ಅನೇಕ ಬೇಡಿಕೆ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರು, ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಟ್ಟರೆ ನಾಳೆ ಕಾಮಗಾರಿ ಆರಂಭ ಮಾಡುವುದಾಗಿ ತಿಳಿಸಿದ್ದಾರೆ.
ಕೊಟ್ಟ ಭರವಸೆಯಂತೆ ನಡೆದುಕೊಂಡಿಲ್ಲ
ನಿಮ್ಮ ನಿಲುವು ಏನು ಇದಕ್ಕೂ ಪೂರ್ವದಲ್ಲಿ ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪರವಾನಗಿ ಕೊಡಿಸುವ ಭರವಸೆ ನೀಡಿದ್ದರು.
ನಮ್ಮ ಸ್ಥಳೀಯ ಶಾಸಕ ಎನ್ ಎಚ್ ಕೋನರಡ್ಡಿ ಟೆಂಡರ್ ಕರೆದು ಕೆಲಸ ಆರಂಭಿಸುವ ಭರವಸೆ ನೀಡಿದ್ದರು. ಇಬ್ಬರು ಮಾತಿಗೆ ತಪ್ಪಿದ್ದಲ್ಲದೇ ಮಾತಿಗೆ ಮಾತು ತಪ್ಪಿದ್ದೀರಿ ಎಂದು ಜೋಶಿ ಅವರಿಗೆ ಎಚ್ಚರಿಕೆ ನೀಡಿದರು.ಲೋಕಸಭಾ ಚುನಾವಣಾ ಮುನ್ನ ಶಾಸಕ ಕೋನರಡ್ಡಿ ಹಾಗೂ ತಾವು ಕೋಡಿಕೊಂಡು ಮಹದಾಯಿ ಯೋಜನೆ ಆರಂಭಕ್ಕೆ ಪರವಾನಗಿ ಕೊಡಲಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಚುನಾವಣಾ ಪೂರ್ವದಲ್ಲಿ ಪರವಾಗಿ ಕೊಡಸದಿದ್ದರೆ ಹೋರಾಟ ಮಾಡುತ್ತೇವೆ. ತಾವು ಚುನಾವಣಾ ಪ್ರಚಾರಕ್ಕೆ ವಾಹನ ಬಿಡಲ್ಲ ರೈತ ಕುಲಕ್ಕೆ ನೀರು ಸಿಗಬೇಕು. ನಮ್ಮ ಹೋರಾಟಕ್ಕೆ ಬೆಂಬಲ ಬೇಕು. ಇದರ ಜೊತೆಗೆ ರೈತರ ಸಾಲ ಮೇಲೆ ಬ್ಯಾಂಕ್ ನಲ್ಲಿ ಕಟ್ ಬಾಕಿ ತೆಗೆದು ಹಾಕಬೇಕು. ರೈತರಿಗೆ ಸರಳವಾಗಿ ಸಾಲ ಸಿಗಬೇಕು ಎಂದು ಒತ್ತಾಯಿಸಿದರು.
ಮತ ಹಾಕದಿರಲು ನಿರ್ಧಾರ?
ರೈತ ನಾಯಕ ಶಿವಣ್ಣ ಹುಬ್ಬಳ್ಳಿ ಅವರು ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯನ್ನು ಲೋಕಸಭಾ ಚುನಾವಣಾ ಮುನ್ನ ಆರಂಭ ಮಾಡದಿದ್ದರೆ ನೈತಿಕ ಹೊಣೆ ಹೊತ್ತು ನಾವೆಲ್ಲಾ ಲೋಕಸಭಾ ಚುನಾವಣೆಗೆ ಮತ ಹಾಕುವುದನ್ನು ಬಿಡಲು ನಿರ್ಧರಿಸಬೇಕಾಗುತ್ತದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿದರೆ ಕೇಂದ್ರದ್ದೆ ತಪ್ಪು ಎನ್ನುತ್ತಾರೆ. ನಿನ್ನೆ 72 ಸಾವಿರ ಮರಗಳನ್ನು ಕಡಿದು ಗೋವಾಗೆ ಕೊಡೋಕೆ ತಯಾರಾಗಿದ್ದಾರೆ. ಯೋಜನೆ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಆದೇಶ ಬಂತು ಆದರು ಸಹ ವಿಜೆಯೋತ್ಸವ ಮಾಡಿದರು ಪಟಾಕಿ ಹಚ್ಚಿದರು. ಆದರೆ ಇವತ್ತಿನವರೆಗು ಏನೇನು ಪ್ರಗತಿ ಆಗಿಲ್ಲ ಎಂದು ಅವರು ವಿವರಿಸಿದರು.
ರೈತರಿಗೆ ಪರಿಹಾರ ಬೇಡ, ಯೋಜನೆ ಜಾರಿ ಮಾಡಿ
ಪ್ರಹ್ಲಾದ್ ಜೋಶಿ ಅವರು ರಾಜಕೀಯದಲ್ಲಿ ಇದ್ದು 20 ವರ್ಷ ಆಯಿತು. ಪ್ರತಿ ವರ್ಷ ಬರಗಾಲ ಬಂದು ರೈತ ಸಾಯುತ್ತಿದ್ದಲೇ ಇದ್ದಾರೆ. ಈ ಯೋಜನೆಗಳು ಜಾರಿಯಾದರೆ ಸರ್ಕಾರ ರೈತರಿಗೆ ಪರಿಹಾರ ಕೊಡುವ ಅವಶ್ಯಕತೆ ಇಲ್ಲ ಎಂದರು. ಸಚಿವರ ಕಾರಿಗೆ ಮುತ್ತಿಗೆ ಹಾಕಲು ಯತ್ನ ಇದಕ್ಕೂ ಮುನ್ನ ರೈತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications