ಹುಬ್ಬಳ್ಳಿ, ನಕಲಿ ಐಟಿ ಅಧಿಕಾರಿಗಳು ಸಿಕ್ಕಿ ಬಿದ್ದದ್ದು ಹೀಗೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್ 16: ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿಕೊಂಡು ಓಡಾಡುತ್ತಿದ್ದ ವ್ಯಕ್ತಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿ, ಅವರ ಬಳಿಯಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನಾದ ವ್ಯಕ್ತಿ ಶಿವಾನಂದ ಭಜಂತ್ರಿ ಎನ್ನಲಾಗಿದ್ದು, ಹುಬ್ಬಳ್ಳಿಯಲ್ಲಿ ಧನಿಕರ ಮನೆ ಮೇಲೆ ರೈಡ್ ಮಾಡಿ 1.5ಲಕ್ಷ ದೋಚುವಾಗ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಇವರೊಂದಿಗೆ ಮತ್ತೊಬ್ಬ ರಾಮಚಂದ್ರ ಭಜಂತ್ರಿ ಪತ್ತೆದಾರಿ ಎನ್ನಲಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು.[ಸಿಬಿಐ ಅಧಿಕಾರಿಯಂತೆ ಕರೆ ಮಾಡಿದ ಕಲ್ಲಿನ ವ್ಯಾಪಾರಿ!]

IT

ಇವರು ಹುಬ್ಬಳ್ಳಿಯ ಹಲವಾರು ಶ್ರೀಮಂತರ ಮನೆಗಳಲ್ಲಿ ದಾಳಿ ಮಾಡಿದ್ದು, 1.5 ಲಕ್ಷ ದೋಚಿದ್ದಾರೆ. ಅಲ್ಲದೆ ಟ್ರಕ್ ಮಾಲೀಕರನ್ನು ಹೆದರಿಸಿ ರು 60.000ಕ್ಕೂ ಹೆಚ್ಚು ಹಣವನ್ನು ಪಡೆದಿರುವುದು ಸಹ ಬೆಳಕಿಗೆ ಬಂದಿದೆ.[ಹುಬ್ಬಳ್ಳಿಯಲ್ಲಿ ಸಿಬಿಐ ಅಧಿಕಾರಿ ಹಣ, ಕಾರಿನೊಂದಿಗೆ ಪರಾರಿ]

ಈ ಬಗ್ಗೆ ಬಸವರಾಜ್ ಪೂಜಾರ ಎಂಬುವರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಖಚಿತ ಮಾಹಿತಿ ಆಧಾರದ ಮೇಲೆ ಮಾರು ವೇಷದಲ್ಲಿ ಶಿವಾನಂದ ಭಜಂತ್ರಿ ಮತ್ತು ರಾಮಚಂದ್ರ ಅವರನ್ನು ಮಾತನಾಡಿಸಿದ್ದಾರೆ. ಅವರು ನಾವು ಐಟಿ ಅಧಿಕಾರಿಗಳೆಂದು ಹೇಳಿಕೊಂಡಿದ್ದು ಖಚಿತ ದಾಖಲೆ ಇಲ್ಲದಿರುವುದನ್ನು ಕಂಡು ಪೊಲೀಸರು ಬಂಧಿಸಿದ್ದಾರೆ. ನಂತರ ನಕಲಿ ಅಧಿಕಾರಿಗಳು ಗೊಂದಲಗೊಂಡು ಸಿಕ್ಕಿ ಬಿದ್ದಿದ್ದಾರೆ. ಅವರ ಬಳಿ ಇದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man posing as an IT official and who was conducting raids in Karnataka has been arrested. The Hubbali police arrested Shivanand Bhajantri after it was found that he had conducted raids posing as an Income Tax officer.
Please Wait while comments are loading...