ಪೊಲೀಸನ ವೇಷ ಧರಿಸಿ ಬಂದ ಅಸಲಿ ಕಾರು ಕಳ್ಳ!

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 31: ಲೈಸನ್ಸ್ ಕೇಳುವ ನೆಪದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಬಂದಿದ್ದ ದುಷ್ಕರ್ಮಿ ಕಾರು ಕದ್ದು ಪರಾರಿಯಾಗಿದ್ದಾನೆ. ವಿದ್ಯಾನಗರ ಬಳಿ ಮಂಗಳವಾರ ರಾತ್ರಿ ಚಾಲಾಕಿ ಕಳ್ಳ ಕಾರು ತೆಗೆದುಕೊಂಡು ನಾಪತ್ತೆಯಾಗಿದ್ದಾನೆ.

ಕಾರಿನಲ್ಲಿ ಹೋಗುತ್ತಿದ್ದ ರೋಹನ ತೋಟದ ಎಂಬುವವರನ್ನು ಆಟೋದಲ್ಲಿ ಬಂದ ಪೊಲೀಸ್ ವೇಷಧಾರಿ ನಿಲ್ಲಲು ಹೇಳಿದ್ದಾಮೆ. ನಂತರ ಅವರ ಬಳಿ ತೆರಳಿ ಲೈಸನ್ಸ್ ಕೊಡಿ ಎಂದಿದ್ದಾನೆ. ಲೈಸನ್ಸ್ ಇದೆ ಎಂದು ರೋಹನ ಹೇಳಿದ್ದಾರೆ.[ಹುಬ್ಬಳ್ಳಿ ಪೊಲೀಸರ ಖೆಡ್ಡಕ್ಕೆ ಬಿದ್ದ ಚಾಲಾಕಿ ಮನೆಗಳ್ಳರು]

police

ಇದಾದ ಮೇಲೆ ನಕಲಿ ಪೊಲೀಸಪ್ಪ ತಾನು ತಂದಿದ್ದ ಆಟೋದಲ್ಲಿ ಗೋಕುಲ ರಸ್ತೆ ಪೊಲೀಸ್ ಠಾಣೆಗೆ ಬಾ ನಾನು ಕಾರು ತೆಗೆದುಕೊಂಡು ಮುಂದೆ ಹೋಗುತ್ತೇನೆ ಎಂದಿದ್ದಾನೆ. ಇದಕ್ಕೆ ಸರಿ ಎಂದು ಕಾರಿನ ಕೀಲಿ ಕೈ ಯನ್ನು ರೋಹನ ನಕಲಿ ಪೊಲೀಸಪ್ಪನಿಗೆ ನೀಡಿದ್ದಾರೆ. ನಂತರ ಆಟೋದಲ್ಲಿ ಗೋಕುಲ ರಸ್ತೆಯ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಕಾರಿನಲ್ಲಿ ಬರುವ ಪೊಲೀಸನಿಗೆ ಕಾಯುತ್ತ ನಿಂತಿದ್ದಾರೆ. ಬಹಳಷ್ಟು ಹೊತ್ತಾದರೂ ಕಾರು ತೆಗೆದುಕೊಂಡಿದ್ದ ವ್ಯಕ್ತಿಯೂ ಠಾಣೆಗೆ ಬರಲಿಲ್ಲದಾಗ ಕಾರು ಕದ್ದೊಯ್ದ ವಿಷಯ ಗಮನಕ್ಕೆ ಬಂದಿದೆ.

ಕೂಡಲೇ ವಿದ್ಯಾನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಕಲಿ ಪೊಲೀಸಪ್ಪನ ಪತ್ತೆಗೆ ಅಸಲಿ ಪೊಲೀಸರು ಬೆನ್ನತ್ತಿದ್ದಾರೆ.[ಹುಬ್ಬಳ್ಳಿಗರೇ ನಿಮ್ಮನೆ ಬೀಗ ಗಟ್ಟಿ ಇದೆಯಾ ನೋಡ್ಕಳಿ!]

ಸಾಲ ವಸೂಲಿಗೆ ಬಂದವರ ಮೇಲೆ ಹಲ್ಲೆ!
ಸಾಲ ತೀರಿಸಲು ಒತ್ತಾಯಿಸಲು ಬಂದ ವಿಜಯಾ ಬ್ಯಾಂಕ್ ನ ವಸೂಲಾತಿ ಸಿಬ್ಬಂದಿಯನ್ನು ನಾಗರಿಕರು ಥಳಿಸಲು ಮುಂದಾದ ಪ್ರಕರಣ ಹಳೇಹುಬ್ಬಳ್ಳಿ ಭಾಗದ ಶಿಮ್ಲಾ ನಗರದಲ್ಲಿ ನಡೆದಿದೆ.

ಸ್ಥಳೀಯ ದುರ್ಗದಬೈಲ್ ಪ್ರದೇಶದಲ್ಲಿರುವ ವಿಜಯಾ ಬ್ಯಾಂಕ್ ವಸೂಲಾತಿ ಸಿಬ್ಬಂದಿ ಮತ್ತು ಬೆಂಗಳೂರಿನ ಮುಖ್ಯ ಕಚೇರಿಯಿಂದ ಬಂದ 11 ಜನರ ತಂಡ ಶಿಮ್ಲಾ ನಗರದ ಮಹ್ಮದ್ ಇಲಿಯಾಸ್ ಬನಾರಸಿ ಉರ್ಪ್ ಅತ್ತರವಾಲಿ ಅವರ ಮನೆಗೆ ಸಾಲ ಮರಳಿಸುವಂತೆ ಕೇಳಲು ಹೋಗಿತ್ತು.[ನಾಪತ್ತೆಯಾಗಿದ್ದ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು ಹೇಗೆ?]

ಮಹ್ಮದ್ ವಿಜಯಾ ಬ್ಯಾಂಕ್ ನಿಂದ ಅಂಗಡಿ, ಮನೆ ಮತ್ತು ಆಸ್ತಿ ಪತ್ರ ಅಡುವು ಇಟ್ಟು 5 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಆದರೆ ಇದುವರೆಗೂ ಬಡ್ಡಿ ಮತ್ತು ಅಸಲು ತುಂಬಿರಲಿಲ್ಲ. ಇದರಿಂದ ಸಾಲದ ಮೊತ್ತ 7 ಕೋಟಿ ರೂ. ಆಗಿತ್ತು. ಹೀಗಾಗಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸನ್ ತಮ್ಮ ಬೆಂಗಳೂರಿನ ತಂಡದವರೊಂದಿಗೆ ಆಸ್ತಿ ಜಪ್ತಿ ಮಾಡಲು ಬಂದಿದ್ದರು.

ಈ ಸಮಯದಲ್ಲಿ ಮಹ್ಮದ್ ನ ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ವಸೂಲಿಗೆ ಬಂದಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಥಳಿಸಲು ಮುಂದೆ ಬಂದಿದ್ದಾರೆ. ಇದರಿಂದ ಕಂಗೆಟ್ಟ ಬ್ಯಾಂಕ್ ಸಿಬ್ಬಂದಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹಲ್ಲೆಯ ಕುರಿತು ಬ್ಯಾಂಕ್ ನ ಸಿಬ್ಬಂದಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: A Duplicate Police steal Hubballi citizens car on August 30, 2016. The incident has taken place at Vidyanagar Police station.
Please Wait while comments are loading...