ಬೆಳ್ಳಂಬೆಳಗ್ಗೆ ವಧು ನಾಪತ್ತೆ, ಅನಿವಾರ್ಯ ಕಾರಣದಿಂದ ಮದುವೆ ಮುಂದಕ್ಕೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಧಾರವಾಡ, ಏಪ್ರಿಲ್ 11: ಅನಿವಾರ್ಯ ಕಾರಣಗಳಿಂದಾಗಿದೆ ಕಾರ್ಯಕ್ರಮ ಮುಂದೂಡಲಾಗಿದೆ ಎಂಬ ಫಲಕ ನೋಡಿರ್ತೀರಿ. ಆದರೆ ಧಾರವಾಡದಲ್ಲಿ ಭಾನುವಾರ ಸ್ವಲ್ಪ ವಿಭಿನ್ನ ಹಾಗೂ ವಿಚಿತ್ರ ಎನಿಸುವಂಥ ಫಲಕವನ್ನು ಕಲ್ಯಾಣ ಮಂಟಪದ ಹೊರಗೆ ಹಾಕಲಾಗಿತ್ತು. ಅದೇನಪ್ಪಾ ಅಂಥ ಫಲಕ ಅಂತೀರಾ? 'ಅನಿವಾರ್ಯ ಕಾರಣಗಳಿಂದಾಗಿ ಮದುವೆ ಮುಂದೂಡಲಾಗಿದೆ' ಎಂಬ ಒಕ್ಕಣೆ ಹಾಕಲಾಗಿತ್ತು.

ಧಾರವಾಡದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಗ್ಗೆ ಮದುವೆ ಮುಹೂರ್ತ ನಿಗದಿಯಾಗಿತ್ತು. ಅದಕ್ಕೂ ಮುಂಚೆ ಹಿಂದಿನ ದಿನದ ಎಲ್ಲ ಶಾಸ್ತ್ರಗಳನ್ನು ಪೂರ್ಣ ಮಾಡಿ, ಇನ್ನೇನು ಮರು ದಿನದ ಶಾಸ್ತ್ರ-ಸಂಪ್ರದಾಯಗಳನ್ನು ಆರಂಭಿಸಬೇಕು ಎಂಬಷ್ಟರಲ್ಲೇ ವಧು ನಾಪತ್ತೆ. ಜೋರಾದ ಅಡುಗೆ ಸಿದ್ಧತೆ ಮಾಡಿಕೊಂಡಿದ್ದ ಹೆಣ್ಣಿನವರು, ಸಂಭ್ರಮದಲ್ಲಿದ್ದ ಗಂಡಿನವರು ಏಕ್ದಂ ದಂಗಾಗಿ ಹೋದರು.[ಇದು ಫೇಸ್ ಬುಕ್ ಮಾಹಿತಿ, ತಾಯಿ-ಮಗುವಿನ ಜೀವವನ್ನು ವಾಟ್ಸ್ ಆಪ್ ಉಳಿಸಿತಾ?]

Due to inevitable reason marriage is postponed

ಮದುವೆ ಹೆಣ್ಣೇ ಮಂಟಪದಲ್ಲಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಆಕೆ ಪೋಷಕರು ಹುಡುಕಾಟ ನಡೆಸಿ, ಪೊಲೀಸ್ ಠಾಣೆಗೆ ಹೋಗಿ ಅಲವತ್ತುಕೊಂಡರು. ನಮ್ಮ ಮಗಳನ್ನು ಹುಡುಕಿಕೊಡಿ, ಆದರೆ ದೂರು ದಾಖಲಿಸಬೇಡಿ ಎಂದು ಮನವಿ ಮಾಡಿದರು. ಇನ್ನೊಂದು ಕಡೆ ಈ ಘಟನೆಯಿಂದ ತೀವ್ರ ಬೇಸರವಾಗಿದ್ದ ಹುಡುಗನ ಕಡೆಯವರು ಮೌನಕ್ಕೆ ಶರಣಾಗಿದ್ದರು. ಆಮಂತ್ರಿತರು ಮದುವೆ ಮುಂದೂಡಿಕೆ ಫಲಕ ನೋಡಿ, ಹಿಂತಿರುಗಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Due to inevitable reason marriage is postponed- Such board displayed outside the marriage hall in Dharwad city recently. Because bride had missing from marriage hall.
Please Wait while comments are loading...