ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಯಾನಿಟೈಸರ್ ಸೇವನೆ ಜೀವಕ್ಕೆ ಅಪಾಯ ತರಲಿದೆ ಎಚ್ಚರ

|
Google Oneindia Kannada News

ಹುಬ್ಳಳ್ಳಿ, ಏಪ್ರಿಲ್ 16 : ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಸಮಯದಲ್ಲಿ ಕೆಲವು ಯುವಕರು ಮತ್ತು ವ್ಯಕ್ತಿಗಳು ಸ್ಯಾನಿಟೈಸರ್‌ಗಳನ್ನು ಸೇವಿಸುತ್ತಿದ್ದಾರೆ ಎಂಬ ವರದಿಗಳು ಮಾಧ್ಯಮದಲ್ಲಿ ಪ್ರಸಾರವಾಗಿವೆ.

ಕೊರೊನಾ ನಿಯಂತ್ರಣಕ್ಕಾಗಿ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್‌ಗಳು ಬಾಹ್ಯ ಉಪಯೋಗಕ್ಕೆ ಮಾತ್ರ ಸೀಮಿತವಾಗಿದ್ದು, ಯಾವುದೇ ಕಾರಣಕ್ಕೂ ಸೇವನೆಗೆ ಯೋಗ್ಯವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ.

 ಮದ್ಯ ಇಲ್ಲ; ಕೋಲಾರದಲ್ಲಿ ಶುರುವಾಗಿದೆ ಕಳ್ಳಭಟ್ಟಿ ತಯಾರಿ ಮದ್ಯ ಇಲ್ಲ; ಕೋಲಾರದಲ್ಲಿ ಶುರುವಾಗಿದೆ ಕಳ್ಳಭಟ್ಟಿ ತಯಾರಿ

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ್ ಮಾನಕರ ಈ ಕುರಿತು ಮಾಹಿತಿ ನೀಡಿದ್ದಾರೆ. "ಸ್ಯಾನಿಟೈಸರ್‌ನಲ್ಲಿ ಅಲ್ಕೋಹಾಲ್ ಮಾತ್ರ ಇರುವುದಿಲ್ಲ. ಇದು ಶೇ. 95ರಷ್ಟು ಇಥೈಲ್ ಅಲ್ಕೋಹಾಲ್, ಶೇ.0.125 ಹೈಡ್ರೋಜನ್ ಪೆರಾಕ್ಸೆಂಡ್, ಶೇ.1.45 ರಷ್ಟು ಗ್ಲಿಸರಾಲ್ ಒಳಗೊಂಡಿರುತ್ತದೆ" ಎಂದು ಹೇಳಿದರು.

ಲಾಕ್‌ಡೌನ್ ನಡುವೆಯೂ ಮದ್ಯ ಮಾರಾಟ; ಪ್ರಕರಣ ದಾಖಲುಲಾಕ್‌ಡೌನ್ ನಡುವೆಯೂ ಮದ್ಯ ಮಾರಾಟ; ಪ್ರಕರಣ ದಾಖಲು

Drinking Sanitizer Not Good For Health

"ಹೆಚ್ಚಿನ ಪ್ರಮಾಣದಲ್ಲಿ ಇಥೆನಾಲ್ ಇರುವುದರಿಂದ ಕುಡಿಯಲು ಇದು ಯಾವುದೇ ಕಾರಣಕ್ಕೂ ಯೋಗ್ಯವಲ್ಲ. ಇದರ ಸೇವನೆಯಿಂದ ಅನ್ನನಾಳ, ಜಠರ, ಸಣ್ಣಕರಳು, ದೊಡ್ಡಕರಳು, ಪಿತ್ತಜನಕಾಂಗ (ಲೀವರ್) ಮತ್ತು ಮೇದೋಜಿರಕ ಗ್ರಂಥಿಗಳಿಗೆ ತೀವ್ರವಾದ ಹಾನಿಯಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಮದ್ಯ ಸಿಗದೆ ವಾರ್ನಿಶ್ ಕುಡಿದು ಮೂವರು ಸಾವು ತಮಿಳುನಾಡಿನಲ್ಲಿ ಮದ್ಯ ಸಿಗದೆ ವಾರ್ನಿಶ್ ಕುಡಿದು ಮೂವರು ಸಾವು

ಸ್ಯಾನಿಟೈಸರ್ ಸೇವನೆಯಿಂದ ಹೊಟ್ಟೆಯಲ್ಲಿ ಹೋದರೆ ಅನ್ನನಾಳ ತೂತು ಬೀಳುತ್ತೆ, ಲೀವರ್‌ಗಳ ಕ್ರಿಯೆಗೂ ಧಕ್ಕೆ ಬರುತ್ತದೆ. ಮನುಷ್ಯ ಸಾಯುವ ಪರಿಸ್ಥಿತಿ ಬರಬಹುದು. ಆದ್ದರಿಂದ, ಸ್ಯಾನಿಟೈಸರ್ ಸೇವಿಸಬಾರದು ಎಂದು ಕರೆ ನೀಡಿದ್ದಾರೆ.

ಸಾರ್ವಜನಿಕರು ಸ್ಯಾನಿಟೈಸರ್ ಸೇವನೆ ಮಾಡುತ್ತಿರುವವರ ಬಗ್ಗೆ ಜಿಲ್ಲಾಡಳಿತದ ಸಹಾಯವಾಣಿ 1077 ಅಥವಾ ವಾಟ್ಸ್ ಅಪ್‌ಗಳ ಮೂಲಕ 9449847646, 9449847641 ಮಾಹಿತಿ ನೀಡಬಹುದು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.

English summary
Dharwad health and family welfare department said that drinking alcohol-based sanitizers harm to health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X