ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿ: ಗುರುಕುಲ ಪದ್ಧತಿಗೆ ತಿಲಾಂಜಲಿ ವಿರುದ್ಧ ಭಾರೀ ಆಕ್ರೋಶ

ಹುಬ್ಬಳ್ಳಿ, ಆಗಸ್ಟ್ 12: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ಕಲಾವಿದೆ ಡಾ.ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿರುವ 'ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಮಾದರಿ ಸಂಗೀತ ವಿಶ್ವ ವಿದ್ಯಾಲಯ'ವನ್ನು ಮೈಸೂರು ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಗೆ ಹಸ್ತಾಂತರಗೊಂಡಿದೆ. ಈ ಮೂಲಕ ಗುರುಕುಲ ಪದ್ಧತಿಗೆ ತಿಲಾಂಜಲಿ ಹಾಡಲಾಗುತ್ತಿದ್ದು, ಇದರ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.

ಗುರುಕುಲ ಮಾದರಿ ಸಂಗೀತ ವಿಶ್ವ ವಿದ್ಯಾಲಯ ರದ್ದತಿ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾಲಯದ ಸಿಬ್ಬಂದಿ ವರ್ಗವಿವಿ ಮುಂದೆ ಸೋಮವಾರ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ನಮ್ಮ ಕುಂದು ಕೊರೆ ಆಲಿಸಿ ಪರಿಹರಿಸಬೇಕು ಎಂದು ಅವರು ಪಟ್ಟು ಹಿಡಿದರು.

Dr Gangubai Hanagal Gurukula Sangeet University Gurukula Model Cancellation Against Handover Outrage

ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರ ಎಚ್ಚರಿಕೆ

ತಹಶಿಲ್ದಾರರು ಕಲ್ಲನಗೌಡ ಅವರು ಮನವಿ ಸ್ವೀಕರಿಸಲು‌ ಬಂದರೂ ಮನವಿ ನೀಡಲು‌ ವಿದ್ಯಾರ್ಥಿಗಳು ನಿರಾಕರಿಸಿದರು.

ಜಿಲ್ಲಾಧಿಕಾರಿಗಳು ಬಾರದಿದ್ದರೆ ವಿದ್ಯಾಲಯ ಒಳನುಗ್ಗುವುದಾಗಿ ಹೇಳಿದರು. ಒಳಗಡೆ ಭರತನಾಟ್ಯ ಕಿರಿಯ, ಹಿರಿಯ‌ ವಿಭಾಗದ ಪರೀಕ್ಷೆ ನಡೆಯುತ್ತಿದ್ದು, ಅಧಿಕಾರಿಗಳು ಸ್ಪಂದಿಸದಿದ್ದರೆ, ಪರೀಕ್ಷೆಗೆ ಅಡ್ಡಿ ಉಂಟಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿದರು.

ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಮೈಸೂರಿನಲ್ಲಿರುವ 'ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ'ಕ್ಕೆ ಹಸ್ತಾಂತರಿಸಿ ಪ್ರಸ್ತುತ ವಿದ್ಯಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿಗಳ ಶಿಕ್ಷಣವನ್ನು ಕಸಿದುಕೊಳ್ಳಲಾಗಿದೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Dr Gangubai Hanagal Gurukula Sangeet University Gurukula Model Cancellation Against Handover Outrage

ಹಾನಗಲ್ ಗುರುಕುಲವನ್ನು ಗುರುಶಿಷ್ಯ ಪರಂಪರೆಯಲ್ಲಿಯೇ (ಗುರುಕುಲ ಮಾದರಿಯಲ್ಲಿ) ಮುಂದುವರಿಸಬೇಕು. ಆಧುನಿಕ ಸಂಗೀತ ಶಿಕ್ಷಣ ಪದ್ಧತಿ ಬೇಡ ಎಂದು ಆಗ್ರಹಿಸಿದರು.

ಆತಂಕದಲ್ಲಿ ವಿದ್ಯಾರ್ಥಿಗಳ ಶಿಕ್ಷಣ, ಭವಿಷ್ಯ

2022ನೇ ಸಾಲಿನ ವಿದ್ಯಾರ್ಥಿಗಳ ಸಂಗೀತ ಶಿಕ್ಷಣ ಪೂರ್ಣಗೊಳಿಸಬೇಕು. ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗುರುಗಳು ಇಲ್ಲದೇ ಗುರುಕುಲದಲ್ಲಿ ತರಗತಿಗಳು ನಡೆಯುತ್ತಿಲ್ಲ. ಸದ್ಯದಲ್ಲಿ ಕಳೆದು 10 ದಿನಗಳಿಂದ ವಿದ್ಯಾರ್ಥಿಗಳು ಗುರುಕುಲದಲ್ಲಿಯೇ ಉಳಿದಿದ್ದಾರೆ. ಯಾವುದೇ ವ್ಯವಸ್ಥೆಯನ್ನು ಕೂಡಾ ನೀಡುತ್ತಿಲ್ಲ. ಊಟದ ವ್ಯವಸ್ಥೆ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ನೀರು ಹಾಗೂ ವಿದ್ಯುತ್ ವ್ಯವಸ್ಥೆ ಕೂಡಾ ಸರಿಯಾಗಿಯಿಲ್ಲ. ಆದಷ್ಟು ಬೇಗಾ ತಮ್ಮ ತಮ್ಮ ಕೊಠಡಿಗಳನ್ನು ಖಾಲಿ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆಂದು ಸಿಬ್ಬಂದಿ ವರ್ಗ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಮತ್ತು ವಿಶ್ವವಿದ್ಯಾಲಯ ಈ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಕುರಿತು ಯಾವುದೇ ರೀತಿಯ ನಿರ್ಧಾರವನ್ನು ತಗೆದುಕೊಳ್ಳುತ್ತಿಲ್ಲ. ಈ ಕೂಡಲೇ ನಿರ್ಧಾರವನ್ನು ತಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಿರಂತರವಾಗಿ ಮುಂದುವರೆಸಲಿದ್ದೇವೆ. ಗುರುಕುಲದ ವಿದ್ಯಾರ್ಥಿಗಳು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಮುಖರಾದ ಕಳಸ ಮಣಿಕಂಠ ಹಾಗೂ ಗುರುಕುಲ ಸಿಬ್ಬಂದಿ ಎಚ್ಚರಿಕೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ವಿವಿ ಬರುತ್ತಾ?

ಇನ್ನೂ ಈ ಕುರಿತು ಮಹೇಶ್ ಟೆಂಗಿನಕಾಯಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಮಾದರಿ ಸಂಗೀತ ವಿಶ್ವ ವಿದ್ಯಾಲಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳಲು ಸಚಿವರ ಸಿದ್ಧರಿದ್ದಾರೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಸಭೆ ನಡೆಯದೇ ವಿಳಂಬ ವಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ವಿವಿ ಹಸ್ತಾಂತರ ಮಾಡಿಕೊಂಡು ಮೈಸೂರು ವಿಶ್ವವಿದ್ಯಾಲಯವು ಗುರುಕುಲ ಮಾದರಿಯಲ್ಲಿ ಸಂಗೀತ ಶಿಕ್ಷಣ ಮುಂದುವರಿಸುವುದಿಲ್ಲ. ಬದಲಾಗಿ ಆಧುನಿಕ ಶಿಕ್ಷಣ ಪದ್ಧತಿ ಮೂಲಕ ನಡೆಸಲಾಗುವುದು ಎಂದು ಹೇಳಿದೆ. ವಿವಿಧ ಗುರುಕುಲ ಮಾದರಿ ರದ್ದಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರತಿಭಟನಾಕಾರರು ಮೈಸೂರು ವಿವಿ ಹೇಳಿಕೆ ಕೇಳಿ ಮತ್ತಷ್ಟು ಆಕ್ರೊಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+