ಹಠಾತ್ತನೆ ವರಸೆ ಬದಲಿದ ಯಡಿಯೂರಪ್ಪ, ವಿರೋಧಿಗಳು ಗಲಿ-ಬಿಲಿ
ಹುಬ್ಬಳ್ಳಿ, ಮೇ 05: ಫಲಿತಾಂಶದ ಬಳಿಕ ಸರ್ಕಾರ ಬೀಳುತ್ತೆ ಎಂದು ಸ್ವತಃ ಹೇಳುತ್ತಿದ್ದ ಯಡಿಯೂರಪ್ಪ ಅವರು ಹಠಾತ್ತಾಗಿ ವರಸೆ ಬದಲಾಯಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳ ಮೂಲಕ ಬಿಜೆಪಿ ಶಾಸಕರು ಮುಖಂಡರಿಗೆ ಮಾಡಿರುವ ಆಶ್ಚರ್ಯ ಹುಟ್ಟಿಸಿದೆ. 'ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಬೀಳುತ್ತದೆ ಎಂದು ಯಾರೂ ಹೇಳಿಕೆ ಕೊಡಬಾರದು' ಎಂದು ಹೇಳಿದ್ದಾರೆ.
ಅಷ್ಟೆ ಅಲ್ಲದೆ, ಸರ್ಕಾರ ಬಿದ್ದು ಹೋಗುತ್ತದೆ ಎಂದು ನಾನು ಮುಂಚೆ ಹೇಳಿಲ್ಲ, ನಾನು ಮತ್ತೆ ಸಿಎಂ ಆಗುತ್ತೇನೆಂದು ಕನಸನ್ನೂ ಇಟ್ಟುಕೊಂಡಿಲ್ಲ, ಎಂದು ನಿರಾಶಾದಾಯಕ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಅವರು ಹೇಳಿದರು.
ಯಡಿಯೂರಪ್ಪ ಅವರು ಹಠಾತ್ತನೆ ವರಸೆ ಬದಲಾಯಿಸಿರುವುದು ಮೈತ್ರಿ ಮುಖಂಡರಲ್ಲೇ ಆಶ್ಚರ್ಯ ಹುಟ್ಟಿಸಿದೆ. ಬಿಜೆಪಿಗರಿಗೂ ಆಶ್ಚರ್ಯ ಹುಟ್ಟಿಸಿದೆ. ಹಠಾತ್ತನೆ ಆದ ಈ ಬದಲಾವಣೆ ಹಿಂದಿನ ತಂತ್ರ ಯಾವುದು ಎಂಬ ಲೆಕ್ಕಾಚಾರ ಈಗ ಚಾಲ್ತಿಯಲ್ಲಿದೆ.












Click it and Unblock the Notifications