ಕರ್ನಾಟಕದಲ್ಲಿ ಸಾವಿರಾರು ಕೋಳಿಗಳ ಮಾರಣಹೋಮ, ಕಾರಣ ಶಾಕಿಂಗ್ !
ಕರ್ನಾಟಕದಲ್ಲಿ ಕೋಳಿಗಳ ಮಾರಣಹೋಮವೇ ನಡೆದಿತ್ತು. ಕೋಳಿ ಫಾರ್ಮ್ ಮಾಡಿದ್ದ ರೈತ ಕಣ್ಣೀರಲ್ಲಿ ಜೀವನ ಸಾಗಿಸುವಂತಾಗಿದೆ. ಹುಬ್ಬಳ್ಳಿ ಸಮೀಪ ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಘಟನೆ ಈ ಘಟನೆ ನಡೆದಿದೆ. ಈ ದುರಂತದಲ್ಲಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ.
ಹುಬ್ಬಳ್ಳಿ ಸಮೀಪ ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿಯಲ್ಲಿನ ಕೋಳಿ ಫಾರ್ಮ್‌ನಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ಕರಬಸಪ್ಪ ಉಳಾಗಡ್ಡಿ ಅವರು ಕೋಳಿ ಫಾರ್ಮ್‌ನಲ್ಲಿ ಸಾವಿರಾರು ಕೋಳಿಗಳನ್ನು ಸಾಕುತ್ತಿದ್ದಾರೆ. ಆದರೆ, ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಮಳೆ ನೀರು ಕೋಳಿ ಫಾರ್ಮ್‌ಗೆ ನುಗ್ಗಿ 3 ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಇಲ್ಲಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಕರಬಸಪ್ಪ ಉಳಾಗಡ್ಡಿ ಎನ್ನುವವರಿಗೆ ಸೇರಿದ ಕೋಳಿಗಳು ನೀರು ಪಾಲಾಗಿವೆ.

ಕರಬಸಪ್ಪ ಅವರ ಫಾರ್ಮ್‌ನಲ್ಲಿ ಒಟ್ಟು 4,500 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳನ್ನು ಸಾಕಾಣಿಕೆ ಮಾಡುತ್ತಿದ್ದರು. ಆದರೆ, ಆ ದುರಂತದಲ್ಲಿ 3 ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ. ಇದರಿಂದ ಅಂದಾಜು 2 ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ . ಕೆರೆ ನೀರು ಕೋಳಿ ಫಾರ್ಮ್‌ಗೆ ನುಗ್ಗಿದೆ. ಅಲ್ಲದೇ ಮಳೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದಿದೆ. ಹೊಲಗದ್ದೆಗಳಲ್ಲಿಯ ನೀರು ಸೇರಿಕೊಂಡು ಶೆಡ್‌ನಲ್ಲಿ 1 ಅಡಿ ನೀರು ನಿಂತಿದ್ದರಿಂದ ಕೋಳಿಗಳು ನೀರಿನಲ್ಲೇ ಮುಳುಗಿ ಸತ್ತಿವೆ. ಕೆಲವು ಮರಿಗಳಾಗಿದ್ದು, ಅದು ಸಹ ನೀರಿನಲ್ಲೇ ಸತ್ತಿವೆ.
ಫಾರ್ಮ್ ಅನ್ನು ಎತ್ತರದಲ್ಲಿ ಕಟ್ಟಲಾಗಿದೆ. ಆದರೆ, ಧಾರಾಕಾರ ಮಳೆಯಿಂದ ಫಾರ್ಮ್‌ನ ಒಳಗೂ ನೀರು ನುಗ್ಗಿದೆ. ವಿಪರೀತ ಮಳೆಯಿಂದ ನೀರು ನುಗ್ಗಿ ಕೋಳಿ ಮೃತಪಟ್ಟಿವೆ. ಫಾರ್ಮ್ ನಂಬಿ ಜೀವನ ಸಾಗಿಸುತ್ತಿದೆ. ಮಳೆ ಬದುಕನ್ನೇ ಹಾಳು ಮಾಡಿದೆ. ಸಂಬಂಧಿಸಿದ ಇಲಾಖೆಯವರು ಪರಿಹಾರ ನೀಡಬೇಕು ಎಂದು ಫಾರ್ಮ್ ಮಾಲೀಕ ಕರಬಸಪ್ಪ ಉಳಾಗಡ್ಡಿ ದುಃಖ ತೋಡಿಕೊಂಡಿದ್ದಾರೆ.
ಧಾರವಾಡದಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ಭಾಗದಲ್ಲಿ ಹಲವು ವ್ಯಾಪಾರಿಗಳು ಬೀದಿಗೆ ಬಂದಿದ್ದಾರೆ. ಇಲ್ಲಿ ಹಲವು ವ್ಯಾಪಾರಿಗಳ ಮಾರಾಟದ ಮೇಲೆ ಹೊಡೆತ ಬಿದ್ದಿದೆ. ಮಳೆ ಅವಾಂತರದಿಂದಾಗಿ ಬಡವರ ಸಂಕಷ್ಟ ಹೇಳತೀರದಾಗಿದೆ. ಮುಂದೇನು ಎನ್ನುವ ಚಿಂತೆ ಅನೇಕರು ಇದ್ದಾರೆ. ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗುತ್ತಿರುವಂತೆ ಧಾರವಾಡದ ವಿವಿಧ ಭಾಗದಲ್ಲೂ ಮಳೆ ಮುಂದುವರಿಯುತ್ತಿದೆ.
ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಹಲವು ಭಾಗದಲ್ಲಿ ಜಜೀವನ ಅಸ್ತವ್ಯಸ್ತವಾಗಿದೆ.
ಮಳೆಯಿಂದಾಗಿ ಆಹಾರಧಾನ್ಯಗಳು, ಗೃಹಬಳಕೆ ವಸ್ತುಗಳು, ವಿವಿಧ ಸಾಮಗ್ರಿಗಳು ನೀರಿಗೆ ತೇಲಿಕೊಂಡು ಹೋಗಿವೆ. ಕೆಸರುಮಯ ಮನೆ ನೋಡಿದರೆ ಇದು ನಮ್ಮ ಮನೆಯೇ ಎಂಬ ಅನುಮಾನ ಬರುವಂತಾಗಿದೆ.
ಜೀವನ ನಡೆಸಲು ಸಣ್ಣ ಕೊಠಡಿಗಳಲ್ಲಿ ಪುಟ್ಟ ಉದ್ಯಮ ನಡೆಸುತ್ತಿರುವ ಹಲವು ಕುಟುಂಬಗಳು ಇಂದು ಅಕ್ಷರಶಃ ಬೀದಿಗೆ ಬಿದ್ದಿವೆ. ಗ್ಯಾರೇಜ್ ನಡೆಸುವವರು, ವೆಲ್ಡಿಂಗ್ ಮಾಡುವವರು ತಮ್ಮ ಸಾಮಾಗ್ರಿಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ ಎಂದು ದುಃಖ ತೋಡಿಕೊಳ್ಳುತ್ತಿದ್ದಾರೆ.












Click it and Unblock the Notifications