ಒಲಿಂಪಿಕ್ 2017: ಸೈಕ್ಲಿಂಗಿನಲ್ಲಿ ವಿಜಯಪುರದ ಆರತಿಗೆ ಒಲಿದ ಚಿನ್ನ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ 4: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಎರಡನೆ ದಿನವಾದ ಶನಿವಾರ ಹುಬ್ಬಳ್ಳಿ ನಗರದಲ್ಲಿ ಮಹಿಳೆಯರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆ ಜರುಗಿತು.

ವಿಜಯಪುರದ ಕ್ರೀಡಾ ವಸತಿ ಶಾಲೆಯ ಕು. ಆರತಿ ಭಾಟಿ 40 ಕಿ.ಮೀ. ಸೈಕ್ಲಿಂಗ್ ಅಂತರವನ್ನು 1 ಗಂಟೆ 11 ನಿ. 76 ಮಿ.ಸೆ ಗಳಲ್ಲಿ ಕ್ರಮಿಸುವ ಮೂಲಕ ಸ್ಪರ್ಧೆಯಲ್ಲಿ ಮೊದಲಿಗರಾಗಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಎರಡನೇ ಸ್ಥಾನದ ಬೆಳ್ಳಿ ಪದಕನ್ನು ಬಾಗಲಕೋಟೆಯ ಕ್ರೀಡಾ ವಸತಿ ಶಾಲೆಯ ಸೌಮ್ಯ ಅಂತಪುರ ಈ ಅಂತರವನ್ನು 1ಗಂಟೆ 11ನಿ. 78ಮಿ.ಸೆ ಗಳಲ್ಲಿ ಪೂರೈಸುವ ಮೂಲಕ ಪಡೆದುಕೊಂಡರು ಹಾಗೂ ವಿಜಯಪುರದ ಕ್ರೀಡಾ ವಸತಿ ಶಾಲೆಯ ರೇಣುಕಾ ದಂಡಿನ ಈ ದೂರವನ್ನು 1 ಗಂಟೆ 11ನಿಮಿಷ 80 ಮಿ.ಸೆ.ಗಳಲ್ಲಿ ಕ್ರಮಿಸುವ ಮೂಲಕ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಧರಿಸಿಕೊಂಡರು.[ಫೆ.3ರಿಂದ ಆರಂಭವಾಗುವ ರಾಜ್ಯ ಮಟ್ಟದ ಒಲಿಂಪಿಕ್ಸ್ ಗೆ ಸಕಲ ಸಿದ್ಧತೆ]

Cycling competition at State level Olympic : Aarti won the gold medal

ಶನಿವಾರ ಮುಂಜಾನೆ ಹುಬ್ಬಳ್ಳಿ ಗಬ್ಬೂರು ಕ್ರಾಸ್ ಜೈನ ಮಂದಿರದ ಬಳಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 27 ಸ್ಪರ್ಧಾಳುಗಳು ಸನ್ನದ್ಧರಾಗಿದ್ದರು. ಹುಬ್ಬಳ್ಳಿ ನಗರದ ಸಂಚಾರಿ ಸಿಪಿಐ ಸಲೀಂ ಅಲಿಯ ಸ್ಪರ್ಧೆಗೆ ಚಾಲನೆ ನೀಡಿದರು.

Cycling competition at State level Olympic : Aarti won the gold medal

ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸೀಮಾ ಆಡಗಲ್ (ಬಾಗಲಕೋಟೆ), ಶಾಹಿರಾ ಬಾನು ಲೋದಿ (ವಿಜಯಪುರ) ಮತ್ತು ಲೀಲಾವತಿ ಎನ್ (ಬೆಂಗಳೂರು) ಇವರಿಗೆ ಪ್ರಮಾಣ ಪತ್ರ ನೀಡಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cycling competition at State level Olympic games in hubballi Saturday morning. Aarti won the gold medal
Please Wait while comments are loading...