ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮಿಷನ್ ಆರೋಪ ಮಾಡುವವರು ಕಾಂಗ್ರೆಸ್ ಏಜೆಂಟ್‌ಗಳು; ಕಟೀಲ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 31 : ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಎಲ್ಲಾ-ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು. ಇದೆಲ್ಲಾ ಸಿದ್ದರಾಮಣ್ಣನ ಒಳ ತಂತ್ರಗಾರಿಕೆ. ಸಾಕ್ಷಿ ಪುರಾವೆ ಕೊಡಿ, ಇಲ್ಲವೇ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, "ಕೇವಲ ಮಾಧ್ಯಮದವರ ಮುಂದೆ ಮಾತಾಡೋದಲ್ಲ ಕಾಂಗ್ರೆಸ್ ಲೋಕಾಯುಕ್ತದ ಜೀವ ತೆಗೆದಿತ್ತು, ನಾವು ಓಪನ್ ಮಾಡಿದೀವಿ, ನೀವು ಬೇಕಾದರೆ ಕೇಸ್ ಕೊಡಿ. ನಂತರ ತನಿಖೆಯಾಗುತ್ತದೆ. ನಮ್ಮ ಸರಕಾರದ ಮೇಲೆ ಆರೋಪ ಮಾಡುತ್ತಿರುವ ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು ಮಾಡುತ್ತಿರುವ ಕೆಲಸ. ಕಾಂಗ್ರೆಸ್‌ನಲ್ಲಿ ಅತೀ ಹೆಚ್ಚು ಗುತ್ತಿಗೆದಾರರು ಇದ್ದಾರೆ, ಅವರೆಲ್ಲರೂ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಲು ತಯಾರಾಗಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ಗುತ್ತಿಗೆದಾರರಿಗೆ ನಿಮಗೆ ಟಿಕೆಟ್ ಬೇಕೆಂದರೆ ಇಂತ ಕೆಲಸ ಮಾಡಿ ಎಂದು ಹೇಳಿರಬಹುದು" ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ಇನ್ನೊಂದು ತಿಂಗಳಲ್ಲಿ ಕ್ಷೇತ್ರ ನಿರ್ಧರಿಸುವೆ : ಸಿದ್ದರಾಮಯ್ಯಮುಂದಿನ ಚುನಾವಣೆಗೆ ಇನ್ನೊಂದು ತಿಂಗಳಲ್ಲಿ ಕ್ಷೇತ್ರ ನಿರ್ಧರಿಸುವೆ : ಸಿದ್ದರಾಮಯ್ಯ

"ಸಿದ್ದರಾಮಯ್ಯ ಭ್ರಷ್ಟಾಚಾರದ ಕುರಿತು ನಮ್ಮ ಬಳಿ ಫೈಲ್ ಹಲವು ಫೈಲ್‌ಗಳಿವೆ. ಸಮಯ ಬರಲಿ ನಾವೆಲ್ಲ ದಾಖಲೆ ಸಂಗ್ರಹ ಮಾಡುತ್ತಿದ್ದೀವಿ. ಈಗಾಗಲೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. 2ನೇ ದೂರಿನಲ್ಲಿ 1.3 ಕೋಟಿ ರೂ. ಚೆಕ್‌ ಬಹಿರಂಗವಾಗಿದೆ, ಇನ್ನು ಹತ್ತಾರು ದಾಖಲೆಗಳಿವೆ, ಸಮಯ ಬರಲಿ ನಾವು ತೋರುಸುತ್ತೇವೆ. ದಾಖಲೆ ಇಟ್ಕೊಂಡು ನಾವು ಹೋಗುತ್ತೇವೆ" ಎಂದು ಕಟೀಲು ಎಚ್ಚರಿಕೆ ನೀಡಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

ವಿಜಯಪುರ ಹಾಗೂ ಕೊಳ್ಳೆಗಾಲದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತೀ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದೆ. ಇಡೀ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆದ್ದಿದೆ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆ ತಿಳಿಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಆಡಳಿತವನ್ನು ಜನ ಮೆಚ್ಚಿದಾರೆ ಅನ್ನೋದಕ್ಕೆ ಇದು ಉದಾಹರಣೆ. ಅಲ್ಲದೆ ಕಾಂಗ್ರೆಸ್‌ನವರು 40 ಪರ್ಸೆಂಟ್ ಕಮಿಷನ್‌ ಆರೋಪ ಮಾಡಿದ್ದರು, ಆದರೆ ಜನತೆ ಅದನ್ನು ಸುಳ್ಳು ಎಂದು ಜನರು ಮತ ನೀಡುವ ಮೂಲಕ ಅದನ್ನು ಸುಳ್ಳು ಮಾಡಿದ್ದಾರೆ. ಮುಂದಿನ ಚುನಾಚಣೆಗೆ ಇದು ದಿಕ್ಸೂಚಿ ಎಂದು ಕಟೀಲು ವಿಶ್ವಾಸ ವ್ಯಕ್ತಪಡಿಸಿದರು. ‌

ಪಾದಯಾತ್ರೆ ಯಾವುದೇ ಪರಿಣಾಮ ಬೀರಿಲ್ಲ

ಪಾದಯಾತ್ರೆ ಯಾವುದೇ ಪರಿಣಾಮ ಬೀರಿಲ್ಲ

"ಭಾರತ್ ಜೋಡೋ ಪಾದಯಾತ್ರೆ ಯಾವುದೇ ಪರಿಣಾಮ ಬೀರಿಲ್ಲ. ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದಲ್ಲೆಲ್ಲಾ ನಮಗೆ ಹೆಚ್ಚು ಸ್ಥಾನ ಬಂದಿದೆ. ರಾಹುಲ್ ಗಾಂಧಿ ಬಂದರೂ ಜನ ಕಾಂಗ್ರೆಸ್‌ಗೆ ಪುರಸ್ಕಾರ ಮಾಡಿಲ್ಲ. ಭಾರತ ಜೋಡೋ ಎಫೆಕ್ಟ್ ಎಲ್ಲೂ ಆಗಿಲ್ಲ, ಜನರ ಮನಸ್ಸಿನಲ್ಲೂ ಎಫೆಕ್ಟ್ ಆಗಿಲ್ಲ. ಇನ್ನೂ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಕೂಡ ಒಂದಾಗಲಿಲ್ಲ" ಎಂದು ಕಟೀಲು ವ್ಯಂಗ್ಯವಾಡಿದರು.

ಜಗದೀಶ್ ಶೆಟ್ಟರ್‌ ಸೈಡ್‌ ಲೈನ್ ಆರೋಪ ಸುಳ್ಳು

ಜಗದೀಶ್ ಶೆಟ್ಟರ್‌ ಸೈಡ್‌ ಲೈನ್ ಆರೋಪ ಸುಳ್ಳು

ಜಗದೀಶ್‌ ಶೆಟ್ಟರ್ ಸೆಂಟ್ರಲ್ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರೆ, ಈಗಾಗಲೇ ಕೋರ್ ಕಮಿಟಿಯಲ್ಲಿ ತೀರ್ಮಾನವಾಗಿದೆ ಎನ್ನುತ್ತಿದ್ದಾರೆ ಎಂದು ಕೇಳಿದ್ದಕ್ಕೆ ಉತ್ತರಿಸಿ, "ಚುನಾವಣೆಗೆ 6 ತಿಂಗಳು ಸಮಯವಿದೆ, ಈಗ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಯಲ್ಲ. ಜಗದೀಶ್ ಶೆಟ್ಟರ್ ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬ ಊಹಾಪೋಹಕ್ಕೆ ಪ್ರತಿಕ್ರಿಯೆ ನೀಡಿ ಶೆಟ್ಟರು ನಮ್ಮ ಹಿರಿಯರು, ನಮ್ಮ‌ ಪಕ್ಷದ ನಾಯಕರು. ಅವರು ಹೇಳಿದ್ದಕ್ಕೆ ಚರ್ಚೆ ಮಾಡಲ್ಲ, ನಾವು ಅವರನ್ನ ಸೈಡ್ ಲೈನ್ ಮಾಡಿಲ್ಲ. ಅವರಿಗೆ ಟಿಕೆಟ್ ಸಿಗೋದು ಯಾಕೆ ಅನುಮಾನ?" ಎಂದು ಕಟೀಲು ಪ್ರಶ್ನೆ ಮಾಡಿದರು.

150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು

150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು

"ವಿಧಾನ ಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಜನವರಿ ನಂತರ ಮಾಡಲಾಗುವುದು. ಪೂರ್ಣಾವಧಿ ಮುಗಿದ ಬಳಿಕವೇ ಚುನಾವಣೆಗೆ ಹೋಗುತ್ತೇವೆ. 150 ಸ್ಥಾನಕ್ಕೂ ಹೆಚ್ಚು ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ಭರವಸೆಯಿದೆ. ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ" ಎಂದು ಕಟೀಲು ವಿಶ್ವಾಸ ವ್ಯಕ್ತಪಡಿಸಿದರು.

English summary
Karnataka BJP president Nalin Kumar kateel slammed Congress and said contractors who are accusations of 40 per cent commission against the BJP government are Congress agents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X