ದೇಶಕ್ಕೆ ಶನಿಗಳಂತೆ ವಕ್ಕರಿಸಿಕೊಂಡಿರುವ ಮೋದಿ, ಅಮಿತ್ ಶಾ
ಹುಬ್ಬಳ್ಳಿ, ಜ 23: ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
Recommended Video
"ಯಾರೀ.. ರಾಜಾಹುಲಿ, ನಿಜವಾಗಿಯೂ ರಾಜಾಹುಲಿಯಾಗಿದ್ದರೆ, ತಮ್ಮ ಶಕ್ತಿಯನ್ನು ಮೋದಿ ಮತ್ತು ಶಾ ಮುಂದೆ ಪ್ರದರ್ಶಿಸಲಿ" ಎಂದು ಉಗ್ರಪ್ಪ, ಕೆಂಡಕಾರಿದ್ದಾರೆ.
"ಅಮಿತ್ ಶಾ ಮತ್ತು ಮೋದಿಯನ್ನು ಕಂಡರೆ, ಯಡಿಯೂರಪ್ಪನವರಿಗೆ ಮಾತೇ ಹೊರಡುವುದಿಲ್ಲ. ರಾಜಾಹುಲಿಯಂತೆ.. ರಾಜಾಹುಲಿ" ಎಂದು ಉಗ್ರಪ್ಪ ಲೇವಡಿ ಮಾಡಿದ್ದಾರೆ.

"ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅನ್ನೋದು ಇದೆ. ಬಿಜೆಪಿಯಲ್ಲಿ ಏನಾದರೂ ಇದೆಯಾ" ಎಂದು ಪ್ರಶ್ನಿಸಿರುವ ಉಗ್ರಪ್ಪ, "ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಈ ದೇಶಕ್ಕೆ ವಕ್ಕರಿಸಿಕೊಂಡಿರುವ ಶನಿಗಳು" ಎಂದು ಉಗ್ರಪ್ಪ ಕಿಡಿಕಾರಿದ್ದಾರೆ.
"ನಮ್ಮ ಮುಖಂಡ ರಾಹುಲ್ ಗಾಂಧಿಯವರಿಗೆ ಸಿಎಎ ಬಗ್ಗೆ ಅಮಿತ್ ಶಾ ಸವಾಲು ಹಾಕಿದ್ದಾರೆ. ಅವರ ಸವಾಲನ್ನು ನಾವು ಸ್ವೀಕರಿಸಿದ್ದೇವೆ. ಮೊದಲು, ಪ್ರಲ್ಹಾದ್ ಜೋಷಿ ನಮ್ಮನ್ನು ಎದುರಿಸಲಿ" ಎಂದು ಉಗ್ರಪ್ಪ ಚಾಲೆಂಜ್ ಮಾಡಿದ್ದಾರೆ.
"ಮಂಗಳೂರಿನಲ್ಲಿ ನಡೆದ ಘಟನೆ ರಾಜ್ಯ ಸರಕಾರದ ವೈಫಲ್ಯವನ್ನು ಜಗಜ್ಜಾಹೀರು ಮಾಡಿದೆ. ಇದಕ್ಕೆ ಯಡಿಯೂರಪ್ಪ ಮತ್ತು ಗೃಹಸಚಿವ ಬಸವರಾಜ ಬೊಮ್ಮಾಯಿಯೇ ಕಾರಣ" ಎಂದು ಉಗ್ರಪ್ಪ ಹೇಳಿದರು.












Click it and Unblock the Notifications