ಶೆಟ್ಟರ್ ಪಕ್ಷ ತೊರೆದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ, ಡಿಕೆಶಿ ಆಪ್ತರಿಗೆ ಗಾಳ ಹಾಕಲು ಮುಂದಾದ್ರಾ ವಿಜಯೇಂದ್ರ?
ಹುಬ್ಬಳ್ಳಿ, ಜನವರಿ, 25: ಅತ್ತ ಶೆಟ್ಟರ್ ಬಿಜೆಪಿ ಸೇರ್ಪಡೆ ಆಗುತ್ತಲೇ, ಇತ್ತ ಡಿ.ಕೆ.ಶಿವಕುಮಾರ್ ಆಪ್ತರಿಗೆ ಗಾಳ ಹಾಕಲು ಬಿ.ವೈ.ವಿಜಯೇಂದ್ರ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ರಾಜೀನಾಮೆ ಪರ್ವ ಆರಂಭ ಆಗಿದೆ.
ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಯಿಂದ ಮರ್ಮಘಾತಕ್ಕೊಳ್ಳಗಾಗಿರುವ ಕಾಂಗ್ರೆಸ್ ಧಾರವಾಡ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘರ್ ವಾಪಸ್ಸಿ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಧಾರವಾಡ ಜಿಲ್ಲೆಯ ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿರೇಶ ಉಂಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ಇನ್ನೂ ಅಪಾರ ಬೆಂಬಲಿಗರೊಂದಿಗೆ ನಾಳೆ ಕಾಂಗ್ರೆಸ್ ಮುಖಂಡ ವೀರೇಶ ಉಂಡಿ ಅವರಯ ಬಿಜೆಪಿ ಸೇರ್ಪಡೆ ಆಗಲಿದ್ದು, ಈ ಮೂಲಕ ಕಾಂಗ್ರೆಸ್ ಒಡನಾಟಕ್ಕೆ ಬ್ರೇಕ್ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.
ಮಂಗಲಾ ಅಂಗಡಿ ಹೇಳಿದ್ದೇನು?: ಇನ್ನು ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಬೆಳಗಾವಿಯಲ್ಲಿ ಬಿಜೆಪಿ ಸಂಸದೆ ಮಂಗಲಾ ಅಂಗಡಿ ಪ್ರತಿಕ್ರಿಯಿಸಿದ್ದು, ಇವತ್ತು ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬಂದಿದ್ದು, ಇದರಿಂದ ನಮಗೆ ತುಂಬಾ ಶಕ್ತಿ ಬಂದಿದೆ. ರಾಜಕೀಯವಾಗಿ ಏನು ಆಗುತ್ತದೆ ನೋಡೋಣ. ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡುವುದು ಫಿಕ್ಸ್ ಎಂದರು.
ಇನ್ನು ಶೆಟ್ಟರ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಮಾಹಿತಿ ಇತ್ತು. ಅವರು ಮತ್ತೆ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಜಗದೀಶ್ ಶೆಟ್ಟರ್ ಬಂದಿರೋದು ಬಿಜೆಪಿ ಪಕ್ಷಕ್ಕೆ ಪ್ಲಸ್ ಆಗಿದೆ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದ ಮಂಗಲಾ ಅಂಗಡಿ ಅವರು ಹೇಳಿದ್ದಾರೆ.












Click it and Unblock the Notifications