Get Updates
Get notified of breaking news, exclusive insights, and must-see stories!

'ಸಿಎಂ ಕುರ್ಚಿ ಕಿತ್ತಾಟದಲ್ಲಿ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನ ಖಚಿತ'

ಹುಬ್ಬಳ್ಳಿ, ಜನವರಿ 11: ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದು ಖಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಶೀಘ್ರದಲ್ಲೇ ಕಾಂಗ್ರೆಸ್‌ ಸರ್ಕಾರ ಆಂತರಿಕ ಜಗಳದಿಂದ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‌ಕಾಂಗ್ರೆಸ್‌ನಲ್ಲಿ ಕುರ್ಚಿ ಗುದ್ದಾಟ ಜೋರಾಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಅವರಲ್ಲೇ ಗುದ್ದಾಟ ನಡೆದಿವೆ. ಒಂದಲ್ಲ ಒಂದು ದಿನ ಅದು ಹೊರ ಬರುತ್ತೆ ಅಂತ ಹೇಳಿದ್ದೆ.‌ ಈಗಾಗಲೇ ಔತಣಕೂಟ ಆರಂಭವಾಗಿದೆ.‌ ಕೆಲ ಸಚಿವರು ಸೇರಿ ಔತಣಕೂಟ ಮಾಡಿದರು. ಎಸ್‌ಸಿ, ಎಸ್ಟಿ ಶಾಸಕರು, ಮಂತ್ರಿಗಳ ಔತಣ ಕೂಟಕ್ಕೆ ಅಡ್ಡಗಾಲು ಹಾಕಿದರು.‌ ಅಡ್ಡಗಾಲು ಹಾಕೋ ಕೆಲಸ ಡಿ.ಕೆ ಶಿವಕುಮಾರ್ ಮಾಡಿದ್ದರು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Congress Government in Karnataka Facing Imminent Collapse Says Jagadish Shettar

ರಾಜಣ್ಣ, ಎಂ.ಬಿ ಪಾಟೀಲ್ ಹೇಳಿಕೆ ನೋಡಿದ್ರೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಎರಡು ಗುಂಪು ಎದ್ದು ಕಾಣುತ್ತಿದೆ.‌ ಮೊದಲು ಈ ಜಗಳ ಒಳಗೊಳಗೇ ಇತ್ತು. ಈಗ ಹೊರ ಬರುತ್ತಿದೆ.‌ ಆದಷ್ಟು ಬೇಗ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂದರು.

ಬಿಜೆಪಿ ಔತಣಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಊಟಕ್ಕೆ ಕೊಟ್ಟವರು ಸ್ಪಷ್ಟಿಕರಣ ಕೊಟ್ಟಿದ್ದಾರೆ. ನಮ್ಮಲ್ಲಿ ಸಮಸ್ಯೆ ಇದೆ. ಸರಿ ಮಾಡುವ ಕೆಲಸ ಹೈಕಮಾಂಡ್ ಮಾಡುತ್ತಾರೆ. ಆದರೆ ಕಾಂಗ್ರೆಸ್‌ ಎಸ್‌ಸಿ, ಎಸ್‌ಟಿ ಸಮಸ್ಯೆಗಳ ಕುರಿತು ಚರ್ಚಿಸಲು ಔತಣಕೂಟ ಸೇರಿದ್ದೇವೆ ಅಂತಾ ರಾಜಣ್ಣ ಹೇಳುತ್ತಾರೆ. ಈ ರೀತಿಯ ಸಮಸ್ಯೆಗಳನ್ನು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಬೇಕು. ಇದನ್ನು ಚರ್ಚೆ ಮಾಡೋಕೆ ಮಂತ್ರಿಗಳು ಸೇರಿದರೆ ನಂಬುತ್ತಾರಾ..? ಎಂದು ಪ್ರಶ್ನಿಸಿದರು.

Congress Government in Karnataka Facing Imminent Collapse Says Jagadish Shettar

ಎಸ್‌ಸಿ, ಎಸ್ಟಿ ಜನರ ಮೇಲೆ ಅವರಿಗೆ ಕಾಳಜಿಯೇ ಇಲ್ಲಾ. ರಾಜಣ್ಣ ಹೇಳಿಕೆ ನೋಡಿದ್ರೆ ರಾಜಕೀಯ ಸಲುವಾಗಿ ಮಾಡ್ತಿದ್ದಾರೆ. ಎಸ್ ಸಿ ಎಸ್ಟಿ ಕಲ್ಯಾಣಕ್ಕಾಗಿ ಅಲ್ಲ ಅಂತಾ, ಇದನ್ನು ನೀವು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಬೇಕಿತ್ತು.‌ ಡಿನ್ನರ್ ಮೀಟಿಂಗ್ ಮಾಡುವ ಅವಶ್ಯಕತೆನೇ ಇರಲಿಲ್ಲ ಎಂದು ಹೇಳಿದರು.

ಪರಮೇಶ್ವರ ಡಿನ್ನರ್ ಮೀಟಿಂಗ್ ಬ್ರೇಕ್ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇದರ ಹಿಂದೆ ರಾಜಕೀಯ ಇದೆ. ಡಿ.ಕೆ ಶಿವಕುಮಾರ್‌ಗೆ ತನ್ನ ವಿರುದ್ಧ ಷಡ್ಯಂತ್ರ ನಡೀತಾ ಇದೆ ಅಂತಾ ಅನಿಸುತ್ತಿದೆ.‌ ಹೀಗಾಗಿ ಶತ್ರು ಸಂಹಾರದ ಪೂಜೆ ಪುನಸ್ಕಾರ ಆರಂಭಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಬಯಲಲ್ಲೇ ಗುದ್ದಾಟ ನಡೆಯುತ್ತದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+