ಕ್ಷುಲ್ಲಕ ಕಾರಣಕ್ಕೆ ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ, ಅಕ್ಟೋಬರ್ 3 : ಕ್ಷುಲ್ಲಕ ಕಾರಣಕ್ಕೆ ಎರಡೂ ಕೋಮಿನ ಯುವಕರ ಮಧ್ಯೆ ಘರ್ಷಣೆ ಸಂಭವಿಸಿ ಇಬ್ಬರು ಯುವಕರು ಮಾರಣಾಂತಿಕವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕಳಸಾ ಗ್ರಾಮದಲ್ಲಿ ಬುಧವಾರ ನಡೆದಿದೆ.

ಘಟನೆಯಲ್ಲಿ ಕುಂದಗೋಳ ತಾಲೂಕ ಬಿಜೆಪಿ ಯುವ ಘಟಕದ ಕಾರ್ಯದರ್ಶಿ ಪ್ರವೀಣ್ ಕಳಸೂರ್(28), ಪ್ರವೀಣ್ ಬದ್ನಿ ಸೇರಿದಂತೆ ನಾಲ್ವರು ಯುವಕರಿಗೆ ಮಾರಣಾಂತಿಕ ಗಾಯಗಳಾಗಿದ್ದು ಇಬ್ಬರು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Clash between two groups in Hubballi, two youth injured grievously

ದೇವಸ್ಥಾನದ ಜಾಗದ ವಿಚಾರವಾಗಿ ಪರಸ್ಪರ ಎರಡು ಗುಂಪಿನ ಮಧ್ಯೆ ಆಗಾಗ ಜಗಳವಾಗುತಿತ್ತು. ಇದೇ ವಿಚಾರವಾಗಿ ಕೆಲ ದಿನಗಳ ಹಿಂದೆ ಯುವಕರು ಸಾರಿಗೆ ಬಸ್ಸಿನಲ್ಲಿ ಜಗಳ ಮಾಡಿಕೊಂಡಿದ್ದರು.

ಆದ್ರೆ ಇಂದು ಎರಡು ಕೋಮಿನ ಯುವಕರು ಊರ ಹೊರವಲಯದಲ್ಲಿ ಕಾದಾಟ ನಡೆಸಿದ್ದು, ಅನ್ಯ ಕೋಮಿನ ದುಷ್ಕರ್ಮಿಗಳು ಬಿಜೆಪಿ ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

Clash between two groups in Hubballi, two youth injured grievously

ಗುಡಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇನ್ನು ಘಟನೆಯಲ್ಲಿ ಬಿಜೆಪಿ ಯುವ ಘಟಕದ ಕಾರ್ಯದರ್ಶಿ ಪ್ರವೀಣ್ ಕಳಸೂರ್(28) ತಲೆಗೆ ಗಂಭೀರವಾಗಿ ಗಾಯವಾಗಿದ್ದು ಸದ್ಯ ತುರ್ತು ಚಿಕಿತ್ಸೆ ಪಡೆಯುತಿದ್ದಾರೆ.

ಇನ್ನು ವಿಷಯ ತಿಳಿದ ಬಿಜೆಪಿ ನಾಯಕರಾದ ಧಾರವಾಡ ಸಂಸದ ಪ್ರಲ್ಹಾದ್ ಜೋಶಿ, ಕುಂದಗೋಳ ತಾಲೂಕಿನ ಕಳಸಾ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+