Karnataka By Polls: ಶಿಗ್ಗಾವಿಯಲ್ಲಿ ಬೊಮ್ಮಾಯಿ, ಚನ್ನಪಟ್ಟಣದಲ್ಲಿ ಯೋಗೇಶ್ವರ ಕಣಕ್ಕಿಳಿದರೆ ಗೆಲುವು: ಬೆಲ್ಲದ್

ಹುಬ್ಬಳ್ಳಿ, ಅಕ್ಟೋಬರ್ 18: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದೆ. ನವೆಂಬರ್ 13 ರಂದು ಚುನಾವಣೆ ನಡೆಯಲಿದೆ. ಸದ್ಯಕ್ಕೆ ಯಾರು ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಇತ್ತು. ಅದಕ್ಕೆ ತೆರೆ ಬೀಳುವ ಮೊದಲೇ ಟಿಕೆಟ್‌ಗಾಗಿ ದೊಡ್ಡ ಮಟ್ಟದಲ್ಲಿ ಲಾಭಿ ನಡೆಯುತ್ತಿದೆ. ಶಿಗ್ಗಾವಿ ಹಾಗೂ ಚನ್ನಪಟ್ಟಣೆ ಟಿಕೆಟ್ ಯಾರಿಗೆ ಸಿಗಬೇಕು ಎಂಬುದರ ಚರ್ಚೆ ಜೋರಾಗಿದೆ.

ಶಿಗ್ಗಾವಿಯಲ್ಲಿ ಬೊಮ್ಮಾಯಿ ಕುಟುಂಬಕ್ಕೆ, ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ ಅವರು ಅಭ್ಯರ್ಥಿಯಾಗಬೇಕು ಎಂದು ಅವರ ಪರ ಶುಕ್ರವಾರ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಬ್ಯಾಟ್ ಬೀಸಿದ್ದಾರೆ. ಬಿಜೆಪಿಯಲ್ಲಿ ಶಿಗ್ಗಾಂವಿ ಕ್ಷೇತ್ರದ ಕುರಿತು ನನಗೆ ಮಾಹಿತಿ ಕೇಳಲಾಗಿತ್ತು. ಕ್ಷೇತ್ರದಲ್ಲಿ ಸುತ್ತಾಡಿದ್ದ ನಾನು, ಶಿಗ್ಗಾವಿಯಲ್ಲಿ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಟಿಕೆಟ್ ನೀಡುವಂತೆ ಅಭಿಪ್ರಾಯ ತಿಳಿಸಿದ್ದೇನೆ.

By Poll 2024 Shiggaon Ticket for Bharat Bommai Channapatna Ticket CP Yogeshwara Aravind Bellad

ಇನ್ನು ಚನ್ನಪಟ್ಟಣದ ವಿಚಾರವಾಗಿ ಮಾತನಾಡಿದ ಅವರು, ಸೈನಿಕ, ಮಾಜಿ ಸಚಿವ ಸಿಪಿ ಯೋಗೇಶ್ವರ ಪರವಾಗಿ ಮಾತನಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆಯಲಾಗಿದೆ. ಅಲ್ಲಿ ಕೈಗೊಳ್ಳುವ ದೆಹಲಿ ನಾಯಕ ತೀರ್ಮಾನವೇ ಅಂತಿಮವಾಗಿದೆ ಎಂದರು.

ಇನ್ನೂ ಶಿಗ್ಗಾವಿ ಟಿಕೆಟ್ ಪಡೆಯಲು ಮಾಜಿ ಸಚಿವ ಮುರಗೇಶ ನಿರಾಣಿ ಅವರು, ಪ್ರಯತ್ನ ಮಾಡಿರುವುದು ನಿಜ. ಆದರೆ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಬೇಕು ಎಂಬುದು ಸ್ಪಷ್ಟವಾಗಿದೆ. ಬೇರೆ ಬೇರೆ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಜನರ ಅಪೆಕ್ಷೆ ಬೊಮ್ಮಾಯಿ ಅವರ ಕುಟುಂಬದ ಪರವಾಗಿದ ಎಂದು ಬೆಲ್ಲದ್ ಹೇಳಿದರು.

ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೋರ್ ಕಮೀಟಿಯಿಂದ ಮೂರ್ನಾಲ್ಕು ಹೆಸರುಗಳು ಹೋಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಿದೆ ಎಂದು ತಿಳಿಸಿದರು.

By Poll 2024 Shiggaon Ticket for Bharat Bommai Channapatna Ticket CP Yogeshwara Aravind Bellad

ಸಿಪಿ ಯೋಗೇಶ್ವರ ಪರ ಬೆಲ್ಲದ್ ಬ್ಯಾಟಿಂಗ್

ಅವರೇ ಚನ್ನಪಟ್ಟಣ ಅಭ್ಯರ್ಥಿ ಆಗಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಅದಾದ ಬಳಿಕ ಉಪ ಚುನಾವಣೆ ಎದುರಾಗಿದೆ. ಸಿಪಿ ಯೋಗೇಶ್ವರ ಅವರು ಎನ್‌ಡಿಎ ಅಭ್ಯರ್ಥಿ ಆಗಬೇಕು. ನಮಗೆಲ್ಲರಿಗೂ ಯೋಗೇಶ್ವರ ಅವರನ್ನೆ ಅಭ್ಯರ್ಥಿ ಮಾಡಬೇಕು ಎಂಬ ಮನಸ್ಸಿದೆ.

ಇನ್ನೂ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಪಡೆಯುವ ಇಂಗಿತದಲ್ಲಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡುತ್ತೇವೆ. ಈ ಬಗ್ಗೆ ಅವರು ತೀರ್ಮಾನ ಏನು ಮಾಡುತ್ತಾರೋ ನೋಡಬೇಕು. ಅಲ್ಲದೇ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ ಅವರು, ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅವರು ಅಭಿಪ್ರಾಯ ಹೊರ ಹಾಕಿದರು.

ಸಿಪಿ ಯೋಗೇಶ್ವರಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಗೆಲುವು

ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ ಅವರು ಸಖತ್ ಆಕ್ಟಿವ್ ಆಗಿದ್ದರು. ಜನರ ಮನಸ್ಸಿನಲ್ಲಿ ಯೋಗೇಶ್ವರ ಅಭ್ಯರ್ಥಿ ಆಗಬೇಕು ಎಂಬ ಆಸೆ ಇದೆ. ಬಿಜೆಪಿ ಗೆಲ್ಲಬೇಕು ಎಂದರೆ ಸಿಪಿ ಯೋಗೇಶ್ವರ ಅವರಿಗೆ ಟಿಕೆಟ್ ಕೊಡಬೇಕು. ಬೇರೆಯವರಿಗೆ ಟಿಕೆಟ್ ನೀಡಿದರೆ ಟಫ್ ಆಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಸೊಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣಕ್ಕೆ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಜೆಡಿಎಸ್ ಮಧ್ಯೆ ಟಿಕೆಟ್ ಯಾರಿಗೆ ನೀಡಬೇಕು ಎಂದು ಚರ್ಚೆ ನಡೆಯುತ್ತಿದೆ. ಇತ್ತ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+