ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭ

ಹುಬ್ಬಳ್ಳಿ, ಅಕ್ಟೋಬರ್ 03 : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರಕ್ಕೆ ಪ್ರಾಯೋಗಿಕವಾಗಿ ಕೊನೆಗೂ ಚಾಲನೆ ಸಿಕ್ಕಿದೆ. 2013ರಲ್ಲಿ ಆರಂಭವಾಗಿದ್ದ ಬಿಆರ್‌ಟಿಎಸ್ ಯೋಜನೆ ಅನೇಕ ಕಾರಣಗಳಿಂದಾಗಿ ವಿಳಂಬವಾಗಿತ್ತು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಆರ್‌ಟಿಎಸ್ ಬಸ್ ಸೇವೆಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Bus Rapid Transit System (BRTS) ಬಸ್‌ಗಳು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಸಂಚಾರ ನಡೆಸುತ್ತವೆ. ಸದ್ಯ, 5 ಬಸ್ಸುಗಳು ಪ್ರತಿನಿತ್ಯ 6 ಕಿ.ಮೀ. ಸಂಚಾರ ನಡೆಸುತ್ತಿದ್ದು, ಪ್ರಯಾಣಿಕರ ಬೇಡಿಕೆ ಅನ್ವಯ ಮತ್ತಷ್ಟು ಬಸ್‌ಗಳನ್ನು ಓಡಿಸಲಾಗುತ್ತದೆ.

ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, 'ಈ ವರ್ಷದ ನವೆಂಬರ್ 1ರಿಂದ ಬಿಆರ್‌ಟಿಸಿ ಬಸ್ಸುಗಳು ಅವಳಿ ನಗರದ ನಡುವೆ ಸಂಪೂರ್ಣ ಪ್ರಮಾಣದಲ್ಲಿ ಸಂಚಾರ ನಡೆಸುವ ನಿರೀಕ್ಷೆ ಇದೆ' ಎಂದರು....

ಬಸ್‌ಗಳಿಗೆ ಏಕ ರೀತಿಯ ಕಾರ್ಡ್

ಬಸ್‌ಗಳಿಗೆ ಏಕ ರೀತಿಯ ಕಾರ್ಡ್

ಹುಬ್ಬಳ್ಳಿ-ಧಾರವಾಡ ನಡುವೆ 'ಚಿಗರಿ' ಹೆಸರಿನ ಬಸ್‌ಗಳು ಸಂಚಾರ ನಡೆಸಲಿವೆ. ಅವಳಿ ನಗರದ ನಡುವೆ 130 ಬಿಆರ್‌ಟಿಎಸ್ ಹಾಗೂ 230 ವಾಯುವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ನಡೆಸಲಿವೆ. ಈ ಎರಡೂ ಬಸ್‌ಗಳಿಗೆ ಅನ್ವಯವಾಗುವಂತಹ ಏಕ ರೀತಿಯ ಸ್ಮಾರ್ಟ್ ಕಾರ್ಡ್‌ಗಳನ್ನು ನಾಲ್ಕೈದು ವಾರದಲ್ಲಿ ವಿತರಣೆ ಮಾಡಲಾಗುತ್ತದೆ.

ದರ ಎಷ್ಟಿರುತ್ತದೆ?

ದರ ಎಷ್ಟಿರುತ್ತದೆ?

ಚಿಗರಿ ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಇದಕ್ಕೆ 55-60 ರೂ. ಪ್ರಯಾಣ ದರ ನಿಗದಿ ಮಾಡಬೇಕಾಗಿರುತ್ತದೆ. ಆದರೆ, ಪ್ರಯಾಣಿಕರ ಹಿತದೃಷ್ಟಿಯಿಂದ ಧಾರವಾಡಕ್ಕೆ 26 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ. ಸುಮಾರು 6 ತಿಂಗಳ ತನಕ ಇದೇ ದರವೇ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಸ್ಪಷ್ಟಪಡಿಸಿದ್ದಾರೆ.

ಅ.15ರಿಂದ ಬಸ್ ಸಂಚಾರ

ಅ.15ರಿಂದ ಬಸ್ ಸಂಚಾರ

ಪ್ರಾಯೋಗಿಕವಾಗಿ ಬಿಆರ್‌ಟಿಎಸ್ ಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಅಕ್ಟೋಬರ್ 15ರಿಂದ ಹುಬ್ಬಳ್ಳಿಯಿಂದ ಧಾರವಾಡದ ಮಿತ್ರ ಸಮಾಜದ ತನಕ ಬಸ್‌ಗಳ ಸಂಚಾರವನ್ನು ಆರಂಭಿಸಲಾಗುತ್ತದೆ. ನವೆಂಬರ್‌ 1 ರಿಂದ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರವನ್ನು ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಹೇಳಿದ್ದಾರೆ.

ಹೆಚ್ಚಿನ ಸೌಲಭ್ಯಗಳು

ಹೆಚ್ಚಿನ ಸೌಲಭ್ಯಗಳು

ಬಿಆರ್‌ಟಿಎಸ್ ವ್ಯವಸ್ಥೆಯಲ್ಲಿ ನೂತನ ತಂತ್ರಜ್ಞಾನ ಬಳಸಿ ಬಸ್ ಸ್ಟಾಪ್, ಟಿಕೆಟ್ ಕೌಂಟರ್ ವಿನ್ಯಾಸಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸೌಲಭ್ಯಗಳೊಂದಿಗೆ BRTS ಬಸ್‌ಗಳು ಉಭಯ ನಗರದ ನಡುವೆ ಸಂಚಾರ ನಡೆಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+