ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಳಲ್ಲ, ಅವನು; ಫೇಸ್ಬುಕ್, ವಾಟ್ಸ್ ಆಪ್ ಚಾಟಿಂಗ್ ಹಿಂದಿದ್ದ ಅಸಲಿ ಕಥೆಯೇ ಬೇರೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 11: ಫೇಸ್‌ಬುಕ್‌ ನಲ್ಲಿ ಸುಂದರ ಹುಡುಗಿ ಚಿತ್ರಕ್ಕೆ ಮರಳಾಗಿ ವಾಣಿಜ್ಯ ನಗರಿಯ ಯುವಕನೊಬ್ಬ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ.

ಫೇಸ್‌ಬುಕ್‌ ನಲ್ಲಿ ಚಾಟಿಂಗ್ ಶುರುವಾಗಿ ಬರೋಬ್ಬರಿ ಎರಡು ವರ್ಷಗಳಲ್ಲಿ ಸುಮಾರು ಹದಿನೈದು ಲಕ್ಷವನ್ನು ಕಳೆದುಕೊಂಡು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಚಾಟಿಂಗ್ ಹಿಂದಿನ ಅಸಲಿ ಕಥೆಯೂ ಬೇರೆಯೇ ಇದೆ.

 ಆ

ಆ "ನಕಲಿ ಹುಡುಗಿ"ಯಿಂದ 15 ಲಕ್ಷ ಗುಳುಂ

ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ನಿವಾಸಿ ರುದ್ರಗೌಡ ಮಲ್ಲನಗೌಡ ಪಾಟೀಲ್ ಎನ್ನುವ ಯುವಕ ಫೇಸ್‌ಬುಕ್‌ ನಲ್ಲಿ ಸುಷ್ಮಾ ಎನ್ನುವ ಸುಂದರ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ರುದ್ರಗೌಡ ಹಾಗೂ ಸುಷ್ಮಾ ಇಬ್ಬರೂ ಫೇಸ್‌ಬುಕ್‌ ಹಾಗೂ ವಾಟ್ಸ್ ಆಪ್ ನಲ್ಲಿ ಚಾಟಿಂಗ್ ಮಾಡಿ, ಸಾಕಷ್ಟು ಸಲುಗೆಯಿಂದ ಮಾತನಾಡಿದ್ದಾರೆ. ಸುಷ್ಮಾ ಎನ್ನುವ "ನಕಲಿ ಹುಡುಗಿ" ಮನೆಯಲ್ಲಿ ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದು ಚಾಟಿಂಗ್ ಮೂಲಕ 2017 ರಿಂದ 2019 ಡಿಸೆಂಬರ್ ವರಿಗೆ ಹಂತ ಹಂತವಾಗಿ 15 ಲಕ್ಷ ರೂಪಾಯಿ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಿದ್ದಾಳೆ.

ಒಂದೇ ಒಂದು ಚಾಟ್, ಖೋತಾ ಆಯ್ತು ಲಕ್ಷಗಟ್ಟಲೆ ದುಡ್ಡುಒಂದೇ ಒಂದು ಚಾಟ್, ಖೋತಾ ಆಯ್ತು ಲಕ್ಷಗಟ್ಟಲೆ ದುಡ್ಡು

 ಹುಡುಗಿ ಹೆಸರಲ್ಲಿ ಟೋಪಿ ಹಾಕಿದ ಹುಡುಗ

ಹುಡುಗಿ ಹೆಸರಲ್ಲಿ ಟೋಪಿ ಹಾಕಿದ ಹುಡುಗ

ಸುಷ್ಮಾ ಎಂದು ರುದ್ರಗೌಡನಿಗೆ ಪರಿಚಯ ಮಾಡಿಕೊಂಡ ಹುಡುಗಿ ಅಸಲಿಯಾಗಿ ಹುಡುಗಿಯೇ ಅಲ್ಲ, ಹುಡುಗನೇ ಹುಡುಗಿ ಎಂಬಂತೆ ಸುಷ್ಮಾ ಎನ್ನುವ ನಕಲಿ ಫೇಸ್‌ಬುಕ್‌ ಅಕೌಂಟ್ ಮಾಡಿಕೊಂಡು ರುದ್ರಗೌಡ ಪರಿಚಯ ಮಾಡಿಕೊಂಡು ನನಗೆ ಮಾತನಾಡಲು ಬರುವುದಿಲ್ಲ ಎಂದು ಕೇವಲ ಫೇಸ್‌ಬುಕ್‌ ಹಾಗೂ ವಾಟ್ಸ್ ಆಪ್ ನಲ್ಲಿ ಚಾಟಿಂಗ್ ಮಾಡಿ ಮಕ್ಮಲ ಟೋಪಿ ಹಾಕಿದ್ದಾನೆ.

 ಹಣ ಕಳೆದುಕೊಂಡ ನಂತರ ಬುದ್ಧಿ ಬಂತು

ಹಣ ಕಳೆದುಕೊಂಡ ನಂತರ ಬುದ್ಧಿ ಬಂತು

ಹಣ ಕಳೆದುಕೊಂಡು ನಂತರ ನಕಲಿ ಸುಷ್ಮಾ ಕುರಿತು ಪರಿಶೀಲನೆ ನಡೆಸಿ ಆ ಹುಡುಗ. ಆಗ ತಿಳಿದುಬಂದಿದ್ದು, ಆ ಹುಡುಗ ಹಾಸನ ತಾಲೂಕಿನ ದೊಡ್ಡಗಿಣಿಗೇರಿ ಗ್ರಾಮದ ನಿವಾಸಿಯಾದ ಪ್ರತಾಪಗೌಡ ಮೂರ್ತಿ ಎಂದು‌. ಈತ ಮಹಿಳೆಯ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ವಂಚನೆ ಮಾಡಿದ್ದಾನೆ ಎಂದು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.

ಸೋಶಿಯಲ್ ಮಿಡಿಯಾಕ್ಕೆ ಜನವರಿ 15 ರೊಳಗೆ ಕಡಿವಾಣ, ಸುಪ್ರೀಂ ಗೆ ಕೇಂದ್ರದ ಭರವಸೆಸೋಶಿಯಲ್ ಮಿಡಿಯಾಕ್ಕೆ ಜನವರಿ 15 ರೊಳಗೆ ಕಡಿವಾಣ, ಸುಪ್ರೀಂ ಗೆ ಕೇಂದ್ರದ ಭರವಸೆ

 ತನಿಖೆ ಕೈಗೊಂಡ ಪೊಲೀಸರು

ತನಿಖೆ ಕೈಗೊಂಡ ಪೊಲೀಸರು

ವಂಚನೆಗೆ ಒಳಗಾದ ರುದ್ರಗೌಡ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲು ಮಾಡಿದ್ದಾನೆ.‌ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಂದರ ಹುಡುಗಿ ಅಂತ ಹಿಂದೆ ಬೀಳುವವರು ಎಚ್ಚರ ವಹಿಸಿ‌, ಇಲ್ಲವಾದರೆ ನಿಮ್ಮ ಹಣಕ್ಕೆ ಸಂಚಕಾರ ಬರುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಪೊಲೀಸರು.

English summary
A young boy in a hubballi has been frauded 15 lakhs by fake account of girl in facebook,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X