ಜನವರಿ 9ಕ್ಕೆ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಕರೆ: ಬಿಜೆಪಿ ವಿರೋಧ
ಹುಬ್ಬಳ್ಳಿ, ಜನವರಿ 07: ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ನೀಡಿದ್ದ ಹೇಳಿಕೆ ವಿರುದ್ಧ ವಿವಿಧ ಸಂಘಟನೆಗಳು ಮಂಡ್ಯ, ಮೈಸೂರು ಬಂದ್‌ನಂತೆ ಹುಬ್ಬಳ್ಳಿ-ಧಾರವಾಡ ಅಳಿನಗರ ಬಂದ್‌ಗೆ ಕರೆ ಕೊಟ್ಟಿವೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿವೆ. ಮತ್ತೊಂದೆಡೆ ಬಂದ್‌ಗೆ ಕೆಲವು ಸಂಘಟನೆಯವರು ಬೆಂಬಲ ಘೋಷಿಸಿದ್ದಾರೆ.
ವಿವಿಧ ಸಂಘಟನೆಗಳು ಜನವರಿ 09 ರಂದು ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿವೆ. ಈಗಾಗಲೇ ಮಂಡ್ಯ, ಮೈಸೂರಿನಲ್ಲಿ ಅಂಬೇಡ್ಕರ್ ವಿರುದ್ಧದ ಹೇಳಿಕೆ ಖಂಡಿಸಿ ಮಂಗಳವಾರ ಬಂದ್ ನಡೆಸಲಾಯಿತು. ಆದರೆ ಬಂದ್‌ಗೆ ವ್ಯಾಪಕ ಸ್ಪಂದನೆ ಸಿಕ್ಕಿಲ್ಲ. ವಾಹನಗಳ ಸಂಚಾರ, ವ್ಯಾಪರ, ಜನರ ಓಡಾಟ ಅಲ್ಪ ಕಡಿಮೆ ಆಗಿದೆ. ನಿರಿಕ್ಷೆಯಷ್ಟು ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ.

ಇದೀಗ ಅವಳಿ ನಗರ ಬಂದ್‌ಗೂ ಕರೆ ನೀಡಲಾಗಿದ್ದು, ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ರಾಜ್ಯ ವಿಧಾನ ಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಕಾಂಗ್ರೆಸ್ ಮುಂದಾಳತ್ವದಲ್ಲಿ ಜನವರಿ 09 ರಂದು ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿದ್ದು ಸರಿಯಲ್ಲ. ಬಂದ್ ವಾಪಾಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಒಂದು ವೇಳೆ ಬಂದ್ ವಾಪಾಸ್ ಪಡೆಯದಿದ್ದರೆ ನಾವು ಸಹ ಬಂದ್ ಗೆ ಕರೆ ಕೊಡಬೇಕಾಗುತ್ತದೆ ಎಂದು ಅವರು ವಿವಿಧ ಸಂಘಟನೆಗಳಿಗೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಯಾವ ಅಭಿವೃದ್ಧಿ ಸಹ ಆಗಿಲ್ಲ. ಈ ಮಧ್ಯೆ ಬಂದ್ ಮಾಡಿ ತೊಂದರೆ ಆಗುವ ಬದಲು, ಬಂದ್ ವಾಪಾಸ್ ಪಡೆಯಬೇಕು. ರಾಜಕಾರಣಕ್ಕಾಗಿ ಗೃಹ ಸಚಿವ ಅಮಿತಾ ಶಾ ಹೇಳಿಕೆಗೆ ತಿರುಚಲಾಗಿದೆ ಎಂದು ಅವರು ಆರೋಪಿಸಿದರು.
ಸಂವಿಧಾನಕ್ಕೆ ಮತ್ತು ಸಂವಿಧಾನ ಶಿಲ್ಪಿಗೆ ಕಾಂಗ್ರೆಸ್ ಅವಮಾನ ಮಾಡಿದೆ. ಅಭಿವೃದ್ಧಿಗೆ ಸರ್ಕಾರ ಆದ್ಯತೆ ಕೊಡಬೇಕು. ಇದು ರಾಜಕಾರಣ ಮಾಡುವ ಸಮಯವಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರನ್ನು ಹೆಸರಿಸಿ ಹೇಳಿದರು.
ದಲಿತ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು: ಕೌತಾಳ
ಸಂಸತ್‌ನಲ್ಲಿ ಅಮಿತ್ ಶಾ ಅವರು ಅಂಬೇಡ್ಕರ್ ಅವರಿಗೆ ಆದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಆದರೆ ಅವರ ಹೇಳಿಕೆಯ ವಿಡಿಯೋ ಕತ್ತರಿಸಿ ವಿರೋಧ ಪಕ್ಷ ಹರಿಬಿಡುತ್ತಿದ್ದಾರೆ. ಅತೀ ಹೆಚ್ಚು ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ್ದೆ ಕಾಂಗ್ರೆಸ್ ಎಂದು ಹೇಳಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಸರ್ಕಾರ ಅಮಾಯಕ ದಲಿತ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಹೇಳಿದರು.
ಅಮಿತ್ ಶಾ ಅವರ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಇದರ ವಿರುದ್ಧ ಶಾಸಕ ಪ್ರಸಾದ್ ಅಬ್ಬಯ್ಯ ದಲಿತ ಸಂಘಟನೆಗಳನ್ನು ಕರೆಯಿಸಿ ಹೋರಾಟ ಮಾಡಲು ಕುಮ್ಮಕ್ಕು ನೀಡಿದ್ದಾರೆ. ಹೀಗಿದ್ದರು RSS ಮೇಲೆ ಅಬ್ಬಯ್ಯ ಆಪಾದನೆ ಮಾಡಿದ್ದಾರೆ ಎಂದು ಅವರು ಕಿಡಿ ಕಾರಿದರು.
ಇಂದಿರಾ ಗಾಂಧಿ 1979ರಲ್ಲಿ ಎಮರ್ಜನ್ಸಿ ಮಾಡಿದ್ದರು. ಆಗ ಸಂವಿಧಾನ ಸುಟ್ಟು ಹೋಗಲಿಲ್ವವೇ?. ಅಂಬೇಡ್ಕರ್ ಗೆ ಬದುಕಿದ್ದಾಗಲು, ಸತ್ತಾಗಲೂ ಅವಮಾನ ಮಾಡಿದ್ದು ಕಾಂಗ್ರೇಸ್ ಪಕ್ಷ. ಅವರ ಹೆಸರ ಮೇಲೆ ಚುನಾವಣೆ ಗೆದ್ದಿದ್ದೀರಿ, ನಿಮಗೆ ನಾಚಿಕೆ ಆಗಬೇಕು ಎಂದು ಅವರು ಜರಿದರು.
RSS ಬಗ್ಗೆ ಗೊತ್ತಿಲ್ಲದಿದ್ದರೆ ಓದಿ ತಿಳಿದುಕೊಳ್ಳಿ
RSS ಬಗ್ಗೆ ಸಂಘಟನೆ ಬಗ್ಗೆ ಗೊತ್ತಿಲ್ಲದೇ ಇದ್ದರೆ ಓದಿ ತಿಳಿದುಕೊಳ್ಳಿ. ನಮಗೆ ದಾಖಲೆ ಕೊಡಿ, ಇಲ್ಲದಿದ್ದರೆ ಹೋರಾಟ ಮಾಡಿ, ಪ್ರಕರಣ ದಾಖಲಿಸುತ್ತೇವೆ ಎಂದು ಅವರು ಕಿಡಿ ಕಾರಿದರು. ಈಗ ಕಾಂಗ್ರೆಸ್‌ನವರು ಹೋರಾಟಕ್ಕೆ ಮುಂದಾಗಿದ್ದಾರೆ. ಹೋರಾಟ, ಪ್ರತಿಭಟನೆ ತಡೆಯೋ ಅಧಿಕಾರ ಇಲ್ಲ. ಆದರೆ ಪೊಲೀಸ್ ಆಯುಕ್ತರು, ಕೋರ್ಟ್ ನಿಯಮಗಳ ಪ್ರಕಾರ, ಅವಕಾಶ ನೀಡಿದ್ದಾರಾ? ಎಂದು ಪ್ರಶ್ನಿಸಿದರು.
ಇದೇ ದಲಿತ ಸಂಘಟನೆಯವರು ಅಂಬೇಡ್ಕರ್ ಸಂವಿಧಾನ ಬದಲಾವಣೆ ಹೇಳಿಕೆ ಕೊಟ್ಟಾಗ ಮಲಗಿದ್ದವಾ?. ನೀವಷ್ಟೇ ಅಲ್ಲ ಅಂಬೇಡ್ಕರ್ ವಿರುದ್ಧ ಮಾತನಾಡಿದರೆ ನಾವು ಸುಮ್ಮನಿರಲ್ಲ ಎಂದು ಅವರು ತಿಳಿಸಿದರು.
ಮಂಡ್ಯ, ಮೈಸೂರು ಬಂದ್‌ಗೆ ಕರೆ ನೀಡಿದ್ದು, ಆದರೆ ಜನರಿಂದ ಅಷ್ಟಾಗಿ ಸ್ಪಂದನೆ ಸಿಕ್ಕಿಲ್ಲ. ಇದೀಗ ಅವಳಿನಗರ ಕರೆ ನೀಡಲಾಗಿದೆ. ಕೆಲವರಷ್ಟೇ ಬಂದ್ ಬೆಂಬಲಿಸಿದ್ದಾರೆ. ಬಿಜೆಪಿ ನಾಯಕರು, ಮತ್ತಿತರರು ಬಂದ್ ಅನ್ನು ವಿರೋಧಿಸಿದ್ದಾರೆ.












Click it and Unblock the Notifications