Bomb Blast: ರಾಮೇಶ್ವರ ಕೆಫೆ ಬ್ಲಾಸ್ಟ್ ಕೇಸ್‌ಗೆ ಹುಬ್ಬಳ್ಳಿ ಲಿಂಕ್ ಸಾಬೀತು: ಇಬ್ಬರನ್ನು ಬಂಧಿಸಿದ NIA
ಹುಬ್ಬಳ್ಳಿ, ಮೇ 22: ಹುಬ್ಬಳ್ಳಿಯಲ್ಲಿ ಬಿಡು ಬಿಟ್ಟಿದ್ದ ಬೆಂಗಳೂರು ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾಧಿಕಾರಿಗಳು (NIA) 11 ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಮಂಗಳವಾರ ರಾತ್ರಿ ಇಬ್ಬರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣವು ಹುಬ್ಬಳ್ಳಿಗೆ ಲಿಂಕ್ ಇದೆ ಎಂಬುದು ಸಾಬೀತಾಗಿದೆ.
ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಸೇರಿ 11 ಪ್ರದೇಶಗಳಲ್ಲಿ ತನಿಖಾಧಿಕಾರಿಗಳು ದಾಳಿ ನಡೆಸಿದರು. ಹುಬ್ಬಳ್ಳಿಯ ಗೌಸಿಯಾ ಟೌನ್ ನಿವಾಸಿ, ಸಾಫ್ಟ್‌ವೇರ್ ಇಂಜಿನಿಯರ್ ಶೋಯೆಬ್ ಮಿರ್ಜಾ ಹಾಗೂ ಆತನ ಸಹೋದರ ಅಜೀಬ್ ಅವರನ್ನು ಎನ್‌ಐಎ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

ಈ ಬಂಧಿತ ಇಬ್ಬರು ವಿದೇಶಿಗಳ ಸೂಚನೆ ಮೇರೆಗೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಕೆಲಸ ಮಾಡಿದ್ದರು ಎಂಬುಗು ಗೊತ್ತಾಗಿದೆ. ಪ್ರಮುಖ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ತನಿಖಾ ಏಜೆನ್ಸಿ ಮೂಲಗಳು ಮಾಹಿತಿ ನೀಡಿವೆ.
ಬಂಧಿತರಿಂದ ಎಸ್‌ಐಟಿಗೆ ಮಹತ್ವ ಮಾಹಿತಿ
ಸದ್ಯ ಇಬ್ಬರು ಬಂಧಿತರ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಆರೋಪಿಗಳಿಗೆ ಹಣ ನೀಡಿದ್ದರ ಬಗ್ಗೆ ವಿದೇಶಿ ಹ್ಯಾಂಡ್ಲರ್ನ ಕೋಡ್ ವರ್ಡ್ನಲ್ಲಿ ಸಂದೇಶ ರವಾನೆಯಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಗಳು ಸಿಕ್ಕಿವೆ.
ದಿ ರಾಮೇಶ್ವರಂ ಕೆಫೆ ಸ್ಫೋಟ ಘಟನೆ ನಂತರ ಆರೋಪಿ ಮುಸಾವೀರ್ ಹುಬ್ಬಳ್ಳಿಗೆ ಭೇಟಿ ನೀಡಿದ್ದ. ಇಲ್ಲಿ ಹಣ ಪಡೆದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಕುರಿತು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ಒಂದೂವರೆ ತಿಂಗಳ ಬಳಿಕ ಪ್ರಮುಖ ಆರೋಪಿಗಳ ಬಂಧನ
ತಿಂಗಳುಗಳ ಹಿಂದೆ ಬೆಂಗಳೂರಿನ ವೈಟ್‌ಫಿಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಂಧಿತ ಆರೋಪಿಗಲು ಬಾಂಬ್ ಸ್ಪೋಟಿಸಿದ್ದರು. ನಂತರ ಪರಾರಿಯಾಗಿದ್ದ ಮೊಹಮ್ಮದ್ ಮತೀನ್ ಹಾಗೂ ಮುಸಾವಿರ್ ಹುಸೇನ್ ಅನ್ನು ಒಂದೂವರೆ ತಿಂಗಳ ಬಳಿಕ ಎನ್‌ಐಎಗೆ ಸೆರೆ ಸಿಕ್ಕರು.

ಚೈನ್ ಲಿಂಕ್ ಮೂಲಕ ಬಾಂಬ್ ಸ್ಪೋಟ
ಈ ಬಂಧಿತರನ್ನು ವಿಚಾರಣೆ ನಡೆಸಿದಾಗಿ ಇವರದ್ದು ಚೈನ್ ಲಿಂಕ್ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಇವರಿಬ್ಬರೇ ಅಲ್ಲದೇ ನೆನ್ನೆ ಹುಬ್ಬಳ್ಳಿಯಲ್ಲಿ ಬಂಧನಕ್ಕೊಳಗಾದ ಇಬ್ಬರು ಸಹೋದರರಿಗೂ ಲಿಂಕ್ ಇದೆ ಎಂಬ ಮಾಹಿತಿ ಬಹಿರಂಗವಾಗಿದೆ. ಅದರ ಆಧಾರದಲ್ಲಿಯೇ ಕೆಲವು ದಿನಗಳಿಂದ ಎನ್‌ಐಎ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿದ್ದಾರೆ.
ಸಿಲಿಕಾನ್ ಸಿಟಿ, ಐಟಿ ಹಬ್ ಹೆಸರೇ ಹೇಳುವಂತೆ ಬೆಂಗಳೂರು ಐಟಿ ಬಿಟಿ ಕಂಪನಿಗಳ ಕೇಂದ್ರವಾಗಿದೆ. ಹೀಗಾಗಿ ಐಟಿ ಕಂಪನಿಗಳು ಹೆಚ್ಚಿರುವ ವೈಟ್‌ಫಿಲ್ಡ್ ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದರೆ ದೇಶದ ಗಮನ ಸೆಳೆಯಬಹುದು ಎಂಬ ಪ್ಲಾನ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಬಂಧಿತರಿಂದಲೇ ಅಧಿಕಾರಿಗಳಿಗೆ ಗೊತ್ತಾಗಿದೆ.
ಸದ್ಯ ಪ್ರಕರಣ ಚೈನ್ ಲಿಂಕ್ ಅನ್ನು ತನಿಖಾಧಿಕಾರಿಗಳು ಬ್ರೇಕ್ ಮಾಡುತ್ತಿದ್ದಾರೆ. ಆರೋಪಿಗಳ ಜತೆ ಸಂಪರ್ಕದಲ್ಲಿ ಇದ್ದವರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.












Click it and Unblock the Notifications