Darshan Case: ಹಿಂದಿನ ಕೃಷಿ ರಾಯಭಾರಿ ಬಗ್ಗೆ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಹುಬ್ಬಳ್ಳಿ, ಜೂನ್ 13: ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೃಷಿ ಇಲಾಖೆ ರಾಯಭಾಗಿಯಾಗಿದ್ದ ನಟ ದರ್ಶನ್ ಇಂದು ಅಭಿಮಾನಿ ಕೊಲೆ ಪ್ರಕರಣದಲ್ಲಿ ಸಹಚರ ಜೊತೆಗೆ ಭಾಗಿಯಾಗಿದ್ದರೆಂದು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಗೆ ರಾಜ್ಯವ್ಯಾಪಿ ಆಕ್ರೋಶ, ಖಂಡನೆ ವ್ಯಕ್ತವಾಗಿದೆ. ಇದೀಗ ಪ್ರಕರಣದ ನಿಯತ್ತಿನ ತನಿಖೆ ಕುರಿತು ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಮಾತನಾಡಿರುವ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಟ ದರ್ಶನ್ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಸಿಗುವವರೆಗೂ ಚುರುಕುತನ ತನಿಖೆ ನಡೆಯಬೇಕು. ಮುಖ್ಯವಾಗಿ ಪ್ರಕರಣದಲ್ಲಿ ನಿಯತ್ತಿನ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸೆಲೆಬ್ರೆಟಿಯೇ ಆಗಲಿ, ಅಧಿಕಾರದಲ್ಲಿರುವವರೇ ಅಮಾನವೀಯವಾಗಿ ವರ್ತಿಸುವ ಅಧಿಕಾರ ಯಾರಿಗೂ ಇಲ್ಲ. ಅಪರಾಧಿ ಕೃತ್ಯ ಎಸಗಲು, ಅಮಾನವೀಯ ವರ್ತನೆಗೆ ಯಾರಿಗೂ ವಿಶೇಷ ಅಧಿಕಾರ ಇರುವುದಿಲ್ಲ. ಕಾನೂನಿನ ಮುಂದೆ ನಾವೆಲ್ಲರೂ ಸಮಾನರಾಗಿದ್ದು, ಕಾನೂನನ್ನು ಕೈಗೆ ತೆಗೆದುಕೊಳ್ಳುವುದೇ ಅಪರಾಧ ಎಂದು ಅವರು ಕಾನೂನಿನ ಮಹತ್ವ ಹೇಳಿದರು.
ಇದೊಂದು ಗಂಭೀರ ಪ್ರಕರಣ
ಬಾಯಿ ಮಾತಿನಲ್ಲಿ ಹೇಳುವ ವಿಚಾರ, ಕೊಲೆಯ ಹಂತಕ್ಕೆ ಹೋದರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೊಲೆಯಲ್ಲಿ ಹಲವಾರು ರೀತಿಗಳು ಇವೆ. ಇದು ಕಾನ್ಫರೆಸಿ ಮಾಡಿ ಮರ್ಡರ್ ಮಾಡಿರೋ ಪ್ರಕರಣ. ಇದೊಂದು ಗಂಭೀರ ಪ್ರಕರಣವಾಗಿದ್ದು, ದರ್ಶನ್ ಪ್ರಕರಣದಲ್ಲಿ ಆರಂಭದಲ್ಲಿ ತನಿಖೆ ಚುರುಕಾಗಿ ನಡೆಯುತ್ತಿದೆ.
ಕೃಷಿ ರಾಯಭಾರಿ ದರ್ಶನ್: ಅವನ ಬಗ್ಗೆ ಕನಸು ಬಿದ್ದಿರುತ್ತಾ
ಪ್ರಕರಣದಲ್ಲಿ ಕೊನೆಯವರೆಗೂ ಇದೇ ಚುರುಕುತನ, ನಿಯತ್ತಿನ ತನಿಖೆ ಮುಂದುವರೆಯಬೇಕು. ಹಾಗಾದಾಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದರು. ಇನ್ನೂ ಬಿಜೆಪಿ ಸರ್ಕಾರದಲ್ಲಿ ದರ್ಶನ್ ಕೃಷಿ ರಾಯಭಾರಿಯಾದ ವಿಚಾರ. ಈ ಕುರಿತು ಪ್ರತಿಕ್ರಿಯಿಸಲು ಬೊಮ್ಮಾಯಿ ನಿರಾಕರಿಸಿದರು.

ಬಿಜೆಪಿ ಸರ್ಕಾರದಲ್ಲಿ ದರ್ಶನ್ ಕೃಷಿ ರಾಯಭಾರಿಯಾಗಿದ್ದ ವಿಚಾರ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಬೊಮ್ಮಾಯಿ ಅವರು, ಅವನು (ದರ್ಶನ್) ಹೀಗೆ ಮಾಡ್ತಾನೆ ಅಂತ ನಮಗೇನು ಕನಸು ಬಿದ್ದಿರುತ್ತಾ ಎಂದರು.
ಉಪಚುನಾವಣೆ: ಟಿಕೆಟ್ ಬಗ್ಗೆ ಪಕ್ಷ ತಿರ್ಮಾನಿಸಲಿದೆ
ಶಿಗ್ಗಾಂವಿಗೆ ಉಪಚುನಾವಣೆ ವಿಚಾರ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಉಪಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ನಾನಿನ್ನು ರಾಜೀನಾಮೆ ಕೊಟ್ಟಿಲ್ಲ. ಇಂದಿಗೂ ನಾನು ಶಿಗ್ಗಾಂವಿ ಕ್ಷೇತ್ರದ ಶಾಸಕ ಆಗಿದ್ದೇನೆ ಎಂದು ತಿಳಿಸಿರು.
ನಾನು ರಾಜಿನಾಮೆ ಕೊಟ್ಟ ನಂತರ ಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಬೊಮ್ಮಾಯಿ ಪುತ್ರನಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ವಿಚಾರ. ಟಿಕೆಟ್ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡಲಿದೆ. ಪಕ್ಷ ಮಾಡುವ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸಂಪುಟದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ
ಕೇಂದ್ರ ಸಂಪುಟ ರಚನೆ ವೇಳೆ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಯಾವುದೇ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕರ್ನಾಟಕಕ್ಕೆ ಹೆಚ್ಚು ಸಚಿವ ಸ್ಥಾನಗಳು ಸಿಕ್ಕಿವೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗಿ ಮೋದಿ ಅವರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗಿಯಾದ ಸೌಭಾಗ್ಯ ನನ್ನದು ಕರ್ನಾಟಕಕ್ಕೆ ಎಷ್ಟು ಕೊಡಬೇಕು ಅಷ್ಟು ಸಚಿವ ಸ್ಥಾನ ಕೊಟ್ಟಿದ್ದಾರೆ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಮೂವರಿಗೆ ಸಂಪುಟ ದರ್ಜೆ ಮತ್ತು ಇಬ್ಬರಿಗೆ ರಾಜ್ಯ ಖಾತೆ ಕೊಡಲಾಗಿದೆ. ಪ್ರದೇಶವಾರು ಸಚಿವ ಸ್ಥಾನ ಹಂಚಿಕೆ ಬಗ್ಗೆ ವಿಚಾರ ಮಾಡಬಾರದು. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ನಾವೆಲ್ಲ ಕೆಲಸ ಮಾಡಬೇಕು ಎಂದು ತಿಳಿಸಿದರು.












Click it and Unblock the Notifications