ಹುಬ್ಳಿ ಟು ಬೆಂಗಳೂರು; ಝೀರೊ ಟ್ರಾಫಿಕ್ ನಲ್ಲಿ ಬಂದ ಒಂದೂವರೆ ತಿಂಗಳ ಮಗು
ಹುಬ್ಬಳ್ಳಿ, ಮಾರ್ಚ್ 19: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಇಂದು ಬೆಳಿಗ್ಗೆ ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.
ಧಾರವಾಡದ ಸಮಾನುಲ್ಲ ಸಬಿಯಾ ಬಾನು ದಂಪತಿಯ ಒಂದೂವರೆ ತಿಂಗಳಿನ ಮಗುವಿನ ಹೃದಯದಲ್ಲಿ ನೀರು ತುಂಬಿಕೊಂಡಿತ್ತು. ಕಳೆದ 3 ದಿನದಿಂದ ಹೃದಯ ಸಮಸ್ಯೆಯಿಂದ ಮಗು ಬಳಲುತ್ತಿತ್ತು.
ಹೀಗಾಗಿ ಮಗುವಿನ ಹೃದಯದಲ್ಲಿ ನೀರು ತೆಗೆಯಲು ಹುಬ್ಬಳ್ಳಿಯ ಸ್ಪರ್ಶ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಗಿದೆ. ಜೀರೊ ಟ್ರಾಫಿಕ್ ನಲ್ಲಿ ಮಗು ರವಾನೆ ಮಾಡಲಾಗಿದೆ.

ಆಂಬುಲೆನ್ಸ್ ಡ್ರೈವರ್ ಕಿರಣ್ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೇವಲ 4 ಗಂಟೆ 50 ನಿಮಿಷದಲ್ಲಿ ಸುರಕ್ಷಿತವಾಗಿ ಆಂಬ್ಯುಲೆನ್ಸ್ ಚಾಲನೆ ಮಾಡಿ ತಲುಪಿಸಿದ್ದಾರೆ. ಕಿರಣ ಅವರ ಕಾರ್ಯ ಪ್ರಶಂಸೆಗೆ ವ್ಯಕ್ತವಾಗಿದೆ.












Click it and Unblock the Notifications