ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸ ರಿ ಗ ಮ ಪ' ಮೆಹಬೂಬ್‌ ಹಾಡು ವಿವಾದವಾಗಲಿಲ್ಲವೇಕೆ ?

ಒಂದೇ ಟಿವಿ ರಿಯಾಲಿಟಿ ಶೋ ನಲ್ಲಿ ಸುಹಾನಾ ಮತ್ತು ಮೆಹಬೂಬ್ ಸಾಬ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ ಭಕ್ತಿಗೀತೆ ಹಾಡಿದರೆಂಬ ಕಾರಣಕ್ಕೆ ಸುಹಾನಾ ವಿವಾದಕ್ಕೆ ಈಡಾದರು. ಆದರೆ, ಅದೇ ಮೆಹಬೂಬ್‌ಸಾಬ್ ವೀರಶೈವ ಪಂಥದ ಭಾಗವಾದ ವಿಭೂತಿ ಧರಿಸಿದರೂ

By Basavaraj
|
Google Oneindia Kannada News

ಹುಬ್ಬಳ್ಳಿ. ಜೂನ್ 27: ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋದಲ್ಲಿ ಹಿಜಬ್ ಧರಿಸಿ ಕನ್ನಡ ಭಕ್ತಿ ಗೀತೆ ಹಾಡಿದ ಸುಹಾನಾ ಸಯ್ಯದ್‌ಗೆ ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣಗಳು ತುಸು ಹೆಚ್ಚೆ ಪ್ರಚಾರ ನೀಡಿದವು.

ಹಾವೇರಿ: ಅಂಧನ ಕೈ ಹಿಡಿದು ಸಾರ್ಥಕತೆ ಮೆರೆದ ಯುವತಿಹಾವೇರಿ: ಅಂಧನ ಕೈ ಹಿಡಿದು ಸಾರ್ಥಕತೆ ಮೆರೆದ ಯುವತಿ

ಆದರೆ, ಇದೇ ರಿಯಾಲಿಟಿ ಶೋ ದಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಸ್ಪರ್ಧಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಮೆಹಬೂಬ್‌ಸಾಬ್ ನದಾಫ್ ಮುಸ್ಲಿಂನಾಗಿದ್ದರೂ ಹಣೆಗೆ ವಿಭೂತಿ ಧರಿಸಿ ಬಸವಣ್ಣನಂತೆ ಎಲ್ಲ ತರಹದ ಹಾಡುಗಳನ್ನು ಹಾಡಿ ರಂಜಿಸಿದರೂ ಅದು ಭಾವೈಕ್ಯತೆಯೂ ಅನಿಸಲಿಲ್ಲ ಹಾಗೂ ವಿವಾದದ ಸ್ವರೂಪ ತಾಳಿ ಪ್ರಚಾರವನ್ನೂ ಪಡೆಯಲಿಲ್ಲ.

After Sa Re Ga Ma Pa reality show contest Mehabubsab Nadaf why didn’t get publicity

ವಿವಾದ ಅಸಲಿಯೋ ? ನಕಲಿಯೋ ?
ಹೌದು, ಮಾಧ್ಯಮಗಳು ಹಾಗೂ ರಿಯಾಲಿಟಿ ಶೋ ಆಯೋಜಕರು ಮನಸ್ಸು ಮಾಡಿದರೆ ಭಾವೈಕ್ಯತೆಯನ್ನು ವಿವಾದವನ್ನಾಗಿ ಹಾಗೂ ವಿವಾದನ್ನು ಭಾವೈಕ್ಯತೆಯನ್ನಾಗಿ ಪರಿಗಣಿಸಬಹುದು ಎಂಬುದಕ್ಕೆ ಈ ಮೇಲಿನ ಎರಡು ವಿಭಿನ್ನ ವ್ಯಕ್ತಿತ್ವಗಳೇ ಸಾಕ್ಷಿಯಾಗಿವೆ.

ಅಂಧರ ಭವಿಷ್ಯ ಕಟ್ಟುತ್ತಿರುವ 'ಅಮೃತ ಬಿಂದು'ಅಂಧರ ಭವಿಷ್ಯ ಕಟ್ಟುತ್ತಿರುವ 'ಅಮೃತ ಬಿಂದು'

ಆರಂಭದಲ್ಲಿ ಹಿಜಬ್ ಧರಿಸಿ ಶ್ರೀ ಹರನೇ ಭಕ್ತಿ ಗೀತೆ ಹಾಡಿದ ಸುಹಾನಾ ಅವರಿಗೆ ವಿರೋಧ ವ್ಯಕ್ತವಾಗಿದ್ದು, ಹುಲ್ಲುಕಡ್ಡಿಯಾದರೂ ಅದಕ್ಕೆ ಪ್ರಚಾರ ಸಿಕ್ಕಿದ್ದು ಮಾತ್ರ ಬೆಟ್ಟದಷ್ಟು ಎಂಬುದು ನಿರ್ವಿವಾದ.

ಹಣೆಗೆ ಬೇಕು ವಿಭೂತಿ
ನಾನು ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದರೂ ಮಠದ ಪರಂಪರೆಯಂತೆ ಜೀವನ ನಡೆಸುತ್ತಿದ್ದೇನೆ. ಅಪ್ಪನವರ (ಪುಟ್ಟರಾಜ ಗವಾಯಿ) ಆಶೀರ್ವಾದ ನನ್ನ ಮೇಲಿದೆ. ನಾನು ಎಲ್ಲಿ ಇರುತ್ತೇನೋ ಅಲ್ಲಿ ವಿಭೂತಿ ಇರಬೇಕು. ಹಣೆಯ ಮೇಲೆ ವಿಭೂತಿ ಇಲ್ಲದೇ ನಾನು ಎಲ್ಲಿಗೂ ಹೋಗುವುದಿಲ್ಲ. ಎಲ್ಲ ಧರ್ಮಗಳು ಒಂದೇ. ಮಾನವ ಧರ್ಮ ಪಾಲನೆ ನನ್ನ ಉದ್ದೇಶ. ಧರ್ಮಕ್ಕಿಂತ ಮಾನವಿಯ ಮೌಲ್ಯಗಳು ದೊಡ್ಡದು ಎಂಬುದು ಮೆಹಬೂಬ್‌ಸಾಬ್ ಅವರ ಸ್ಪಷ್ಟ ನಿಲುವು.

ನಿತ್ಯ ಪುಟ್ಟರಾಜರ ಗದ್ದುಗೆಯ ಪಾದರಕ್ಷೆ ಪೂಜಿಸಿ, ಸಂಗೀತ ಹೇಳುವ ಮಹಬೂಬ್‌ಸಾಬ್. ಸರಳ ವ್ಯಕ್ತಿತ್ವದಿಂದ ಆಶ್ರಮದ ಆದರ್ಶ ವಿದ್ಯಾರ್ಥಿಯಾಗಿದ್ದಾನೆ. ಸಂಗೀತದಲ್ಲಿ ಸಾಧನೆ ಮಾಡಲು ಹೊರಟ ಅವನಿಗೆ ಆಶ್ರಮ ಬೆನ್ನೆಲುಬಾಗಿ ನಿಲ್ಲಲಿದೆ ಎನ್ನುತ್ತಾರೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಸ್ವಾಮೀಜಿ.

After Sa Re Ga Ma Pa reality show contest Mehabubsab Nadaf why didn’t get publicity

ವಿವಾದವಾಗಲಿಲ್ಲ ಏಕೆ?
ಹಾಗೆ ನೋಡಿದರೆ ಮೆಹಬೂಬ್‌ಸಾಬ್ ಸುಹಾನಾಗಿಂತ ಮೊದಲೇ ವಿವಾದದ ಕೇಂದ್ರ ಬಿಂದುವಾಗಬೇಕಿತ್ತು. ಯಾಕೆಂದರೆ ಸುಹಾನಾ ಕೇವಲ ಹಿಜಬ್ ಧರಿಸಿ ಹಿಂದೂ ಭಕ್ತಿಗೀತೆಯನ್ನು ಹಾಡಿದ್ದರು. ಆದರೆ, ಮೆಹಬೂಬ್‌ಸಾಬ್ ತಮ್ಮ ಜೀವನದಲ್ಲಿಯೇ ವಿಭೂತಿ ಸಿದ್ಧಾಂತವನ್ನು ಅಳವಡಿಸಿಕೊಂಡು ಬದುಕುತ್ತಿರುವವರು. ಮುಸ್ಲಿಂ ಧರ್ಮದಲ್ಲಿ ಹುಟ್ಟಿ ವೀರೇಶ್ವರ ಪುಣ್ಯಾಶ್ರಮದಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಹಾಗೂ ಜೀವನದಲ್ಲಿ ಅಳವಡಿಸಿಕೊಂಡಿರುವ ಮಠದ ಪರಂಪರೆಯನ್ನು ಈವರೆಗೂ ಯಾರೂ ಪ್ರಶ್ನೆ ಮಾಡಲಿಲ್ಲ. ಮುಖ್ಯವಾಗಿ ಅವರು ವಿಭೂತಿ ಧರಿಸುವುದನ್ನು ಯಾರೂ ವಿರೋಧಿಸಲಿಲ್ಲ ಯಾಕೆ ಎಂಬುದು ಹಲವರ ಪ್ರಶ್ನೆ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.

ಆಕೆಯ ನಿಲುವಿಗೆ ವಿರೋಧ ವಿಲ್ಲದಿದ್ದರೂ ಪ್ರಚಾರಕ್ಕಾಗಿಯೇ ಖಾಸಗಿ ವಾಹಿನಿಯವರು ವಿವಾದ ಹುಟ್ಟು ಹಾಕಿದರು ಎಂಬದು ಅಸಲಿ ಹಕ್ಕಿಕತ್ತು ಎಂದು ಪುನಃ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಈಗ ಇತಿಹಾಸ.

English summary
Why Sa Re Ga Ma Pa reality show contest Mehabubsab Nadaf didn’t get publicity by religious controversy during his performance in TV show, but why Suhana Sayyad got huge publicity for a single song? People are suspecting in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X