ಡಿಜೆ ಸೌಂಡ್, ಡಾನ್ಸ್ ಮಧ್ಯೆ ಇಲ್ಲೊಂದು ಅರ್ಥಪೂರ್ಣ ಗಣೇಶೋತ್ಸವ ಆಚರಣೆ
ಹುಬ್ಬಳ್ಳಿ, ಸೆಪ್ಟಂಬರ್ 11: ಇತ್ತೀಚೆಗೆ ಗಣೇಶೋತ್ಸವ ಆಚರಣೆಯ ಶಾಮಿಯಾನ ಮುಂದೆ ಬರೀ ಡಿಜೆ ಸೌಂಡ್, ಡಾನ್ಸ್, ಕುಣಿತ, ಮೋಜು ಮಸ್ತಿ ಕಂಡು ಬರುತ್ತಿದೆ. ಇದು ಸಾಂಪ್ರದಾಯಿಕ ಅಲ್ಲದ ಸಂಸ್ಕೃತಿ ಎಂದು ಹೇಳುತ್ತಾರೆ. ಆದರೆ ಇಲ್ಲಿನ ಗಜಾನನ ಉತ್ಸವ ಮಂಡಳಿಯುಸಾವಿರಾರು ಜನರಿಂದ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣ ಮತ್ತು ವಿಶೇಷವಾಗಿ ಚೌತಿ ಆಚರಿಸಿದ್ದು ಕಂಡು ಬಂತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಹುಬ್ಬಳ್ಳಿಯ ನಗರದ ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ವತಿಯಿಂದ ರಕ್ತದಾನ ಮೂಲಕ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಮೋಜು, ಮಸ್ತಿ ಬದಲು ಸಮಾಜಮುಖಿ ಕಾರ್ಯಕ್ರಮ ಈಗ ಗಮನ ಸೆಳೆಯುತ್ತಿದೆ. ಈ ಗಜಾನನ ಮಂಡಳಿ ವತಿಯಿಂದ ಪ್ರತಿ ವರ್ಷ ವಿನೂತನವಾಗಿ ಗಣೇಶೋತ್ಸವ ಆಚರಣೆ ಮಾಡುತ್ತಾ ಬರಲಾಗಿದೆ. ಈ ಬಾರಿ ರಕ್ತದಾನ ಮಾಡಿ ಗಮನ ಸೆಳೆಯಲಾಗಿದೆ.

ಈ ವರ್ಷ ರಕ್ತದಾನ ಮೂಲಕ ಗಜಾನನ ಆರಾಧನೆ ಮಾಡಲಾಗುತಿದ್ದು. ರಕ್ತದಾನ ಮಹಾದಾನ ಗಣಪ ದರ್ಶನಕ್ಕೆ ಬಂದವರು, ಸ್ಥಳೀಯರಿಂದ ರಕ್ತದಾನ ಮಾಡುತಿದ್ದಾರೆ. ಇಂದು ಎಲ್ಲಿಲ್ಲದ ರಕ್ತದ ಕೊರತೆ ಇಂದು ಹೆಚ್ಚಾಗುತಿದ್ದು ರಕ್ತದಾನ ಮೂಲಕ ಮಹಾ ಕಾರ್ಯಕ್ಕೆಮುಂದಾದ ಸಪ್ತಗಿರಿ ಯುವಕ ಮಂಡಳಿ ರಕ್ತದಾನ ಕುರಿತು ಸಹ ಜಾಗೃತಿ ಮೂಡಿಸಲಾಗುತ್ತಿದೆ.
ರಕ್ತದಾನ ಮಹತ್ವ ಸಾರಿದ ಗಜಾನನ ಮಂಡಳಿ
ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಹಯೋಗದಿಂದ ರಕ್ತದಾನ ನಡೆದಿದ್ದು, ಗಣೇಶ ಇರುವ ಪೆಂಡಾಲ್‌ಗೆ ಬಂದು ಸ್ಥಳೀಯರು, ಮಂಡಳಿ ಯುವಕರು ರಕ್ತದಾನ ಮಾಡಿದರು. ಈ ಮೂಲಕ ಅರ್ಥಪೂರ್ಣ ಆಚರಣೆ ಜೊತೆಗೆ ರಕ್ತದಾನ ಮಹತ್ವವನ್ನು ಈ ವೇಳೆ ಸಾರಲಾಯಿತು.

ಈ ಬಡಾವಣೆ ಗಣೇಶೋತ್ಸವ ಮಂಡಳ ಅಧ್ಯಕ್ಷ ಮುತ್ತು ಪಾಟೀಲ್ ಅವರದ್ದೇ ಈ ಬಾರಿಯ ರಕ್ತದಾನ ಆಯೋಜನೆ ಎನ್ನಲಾಗಿದೆ. ಜನಸಾಮಾನ್ಯರಿಗೆ ಸಹಾಯವಾಗುವುದರ ಜೊತೆಗೆ ವಿಶೇಷ ಆಚರಣೆ ಮಾಡಲು ಆಲೋಚಿಸಿದ ಅವರು, ರಾಷ್ಟ್ರೋತ್ಥಾನ ರಕ್ತ ಭಂಡಾರ ಜೊತೆ ಮಾತುಕತೆ ನಡೆಸಿ ರಕ್ತದಾನ ಶಿಬಿರ ಹಮ್ಮಿಕೊಂಡರು.
ಪ್ರತಿ ವರ್ಷದಿಂದ ಈ ಬಾರಿಯು ಅರ್ಥಪೂರ್ಣ ಆಚರಣೆ
ಈ ವರ್ಷ ಮಾತ್ರವಲ್ಲದೇ, ಪ್ರತಿ ಬಾರಿಯು ಬಡಾವಣೆಯಲ್ಲಿನ ಗಣಪತಿ ಹಬ್ಬವನ್ನು ವಿಶೇಷವಾಗಿ, ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಅವರ ಪ್ರಯತ್ನ ಈ ಬಾರಿಯು ಸಾಕಾರವಾಗಿದೆ. ಇದಕ್ಕೆ ಮಂಡಳಿಯ ಎಲ್ಲ ಸದಸ್ಯರು ಕೈ ಜೋಡಿಸಿದ್ದಾರೆ.
ನಮ್ಮ ಈ ಆಲೋಚನೆಯಿಂದ ರೋಗಿಗಳಿಗೆ, ಅಗತ್ಯ ಇರುವವರಿಗೆ ರಕ್ತ ಸಿಗುತ್ತದೆ. ಜನರಿಗೆ ಈ ಬಗ್ಗೆ ಅರಿವು ಮೂಡುತ್ತದೆ ಎಂದು ಮುತ್ತು ಅವರು ತಿಳಿಸಿದ್ದಾರೆ.
ಆರೋಗ್ಯಯುತವಾದ ಒಬ್ಬ ಮಹಿಳೆ/ ಹೆಣ್ಣು ಮಕ್ಕಳ ರಕ್ತದ ಪ್ರಮಾಣ (ಹಿಮೋಗ್ಲೋಬಿನ್) ಶೇಕಡಾ 12ರಷ್ಟು ಇರಬೇಕು. ಅಂದಾಗ ಮಾತ್ರ ಅವರು ಬೇರೆಯವರಿಗೆ ರಕ್ತ ನೀಡಬಹುದು. ರಕ್ತದಾನಕ್ಕೆ ಯಾವುದೇ ಭಯ ಇಲ್ಲದೇ ಗಣೇಶೋತ್ಸವ ವೇಳೆ ಅನೇಕ ಹೆಣ್ಣುಮಕ್ಕಳು ಬಂದು ರಕ್ತ ದಾನ ಮಾಡಿದ್ದಾರೆ. ಈ ಕುರಿತು ಮಂಡಳಿ ಸದಸ್ಯರು ಮನವಿ ಮಾಡಿದ್ದರು.
18-60 ವರ್ಷ ಒಳಗಿನವರು ರಕ್ತ ಕೊಡಬಹುದು
ರಕ್ತದಾನ ಮಾಡುವುದು ಮಹಾದಾನ ಸಮಾನವಾದದ್ದು. ಪುಣ್ಯದ ಕೆಲಸಗಳಲ್ಲಿ ರಕ್ತದಾನವು ಒಂದಾಗಿದೆ. ತುರ್ತು ಪರಿಸ್ಥಿತಿ ಯಾವಾಗ ಬರುತ್ತದೆ ಎಂದು ಹೇಳಲು ಆಗಲ್ಲ. ಒಬ್ಬರು ರಕ್ತದಾನ ಮಾಡಿದರೆ ಅವರಿಂದ ಇತರರು ಪ್ರಭಾವಿತರಾಗಿ ರಕ್ತದಾನ ಮಾಡುತ್ತಾರೆ. ಇದರಿಂದ ರಕ್ತ ಅಗತ್ಯವಿರುವ ಅನೇಕರಿಗೆ ಸಹಾಯವಾಗುತ್ತದೆ. 18 ವರ್ಷದಿಂದ ಹಿಡಿದು 60 ವರ್ಷದೊಳಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು ಎಂದು ನಿವೃತ್ತ ಸೈನಿಕ ಪ್ರಕಾಶ ಗಣಾಚಾರಿ ತಿಳಿಸಿದರು.












Click it and Unblock the Notifications