ಹುಬ್ಬಳ್ಳಿ: ಶೆರೆವಾಡ ಗ್ರಾಮಸ್ಥರ ದಾಹ ನೀಗಿಸಲಿದೆ 'ಅಮೃತ ಸರೋವರ'
ಹುಬ್ಬಳ್ಳಿ, ಆಗಸ್ಟ್ 15: ಭಾರತವು 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಮಹತ್ವದ ಸಂದರ್ಭವನ್ನು ಗುರುತಿಸುವ ಉದ್ದೇಶವನ್ನು ಸರಕಾರದ ಪ್ರತಿಯೊಂದು ಅಂಗ ಸಂಸ್ಥೆಗಳು ತೋರುತ್ತಿವೆ. ಧಾರವಾಡ ಜಿಲ್ಲಾ ಪಂಚಾಯತ್ (ZP)ಗ್ರಾಮೀಣ ಪ್ರದೇಶದಲ್ಲಿ ಪ್ರಗತಿಯ ಛಾಪು ಮೂಡಿಸಲು ಉತ್ಸುಕವಾಗಿದೆ.
ಆ ನಿಟ್ಟಿನಲ್ಲಿ ಹುಬ್ಬಳ್ಳಿ ನಗರದಿಂದ 12 ಕಿಮೀ ದೂರದಲ್ಲಿರುವ ಶೆರೆವಾಡ ಗ್ರಾಮದಲ್ಲಿ ಅಧಿಕಾರಿಗಳು ಕೆರೆಯನ್ನು ನಿರ್ಮಿಸಿ, ಹರವು ಮಾಡಿದ್ದಾರೆ. ಎರಡು ಎಕರೆಯಲ್ಲಿ ಗ್ರಾಮದ ಮೊದಲನೆ ಕೆರೆಯನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ 'ಅಮೃತ ಸರೋವರ' ಎಂದು ಹೆಸರಿಡಲಾಗಿದೆ.
ದಶಕಗಳ ಕಾಲ ಒಟ್ಟಿಗೆ, ಶೆರೆವಾಡದ ನಿವಾಸಿಗಳು ಕುಡಿಯಲು ಮತ್ತು ಇತರ ಉದ್ದೇಶಗಳಿಗಾಗಿ ಬೋರ್‌ವೆಲ್‌ನಿಂದ ಪಡೆಯುವ ನೀರನ್ನು ಅವಲಂಬಿಸದೇ ಬೇರೆ ದಾರಿಯಿರಲಿಲ್ಲ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಪ್ರಗತಿಯ ಹಾದಿಯಲ್ಲಿ ಇರಿಸಲು ತಮ್ಮ ಆದ್ಯತೆಯ ಉಪಕ್ರಮಗಳಲ್ಲಿ ಕೊಳಗಳು ಮತ್ತು ಕೆರೆಗಳ ಪುನರುಜ್ಜೀವನವನ್ನು ಪಟ್ಟಿ ಮಾಡುವುದರೊಂದಿಗೆ, ಗ್ರಾಮವು ನೀರಿನ ಮೂಲವನ್ನು ಹೊಂದಲು ಜಿಲ್ಲಾ ಪಂಚಾಯಿತ್ ನಿರ್ಧರಿಸಿದೆ.

ಹುಬ್ಬಳ್ಳಿ ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ಭೀಮಸೇನ ಕುಲಕರ್ಣಿ ಮಾತನಾಡಿ, ಹೊಂಡದ ಪ್ರಮಾಣ 9,700 ಕ್ಯೂಬಿಕ್ ಮೀಟರ್ ಇರಲಿದ್ದು, ಹಿಟಾಚಿ ಬಳಸಿಕೊಂಡು ಕೆರೆಯನ್ನು ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ತುಂತುರು ಮಳೆಯಿಂದ ಕೆರೆ ತುಂಬಿದೆ ಮತ್ತು ಪರಿಣಾಮವಾಗಿ ನಾವು ನಿರ್ಮಾಣ ಕಾರ್ಯವನ್ನು ನಿಲ್ಲಿಸಿದ್ದೇವೆ. ಮಳೆ ನಿಂತ ನಂತರ ಕೆರೆ ನಿರ್ಮಾಣ ಪೂರ್ಣಗೊಳಿಸಿ, ನಂತರ ಇತರೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಕುಲಕರ್ಣಿ ಹೇಳಿದರು.
ಶೆರೆವಾಡದ ನಿವಾಸಿಗಳು ಬೋರ್‌ವೆಲ್‌ನಿಂದ ತೆಗೆಯುವ ನೀರಿನಲ್ಲಿ ಫ್ಲೋರೈಡ್ ಅಂಶದ ಬಗ್ಗೆ ಆತಂಕವಿತ್ತು. ಗ್ರಾಮದಲ್ಲಿ ನಿರಂತರ ನೀರಿನ ಅಭಾವದ ಸಮಸ್ಯೆ "ಅಮೃತ ಸರೋವರ" ಯೋಜನೆಯ ಮೂಲಕ ಬಗೆಹರಿಯುವ ಭರವಸೆ ಮೂಡಿದೆ. ಈ ಯೋಜನೆ ಪ್ರಾರಂಭಿಸಿದ್ದಕ್ಕಾಗಿ ನಾವು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಬೇಕು ಎಂದು ಶೆರೆವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಉಳ್ಳೇಗಡ್ಡಿ ಹೇಳಿದರು.

ಈ ಯೋಜನೆಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಕಾರ್ಪಸ್‌ನಿಂದ ಹಣವನ್ನು ಪಡೆಯಲು ಸಹಾಯ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದರು.
ಮೊದಲ ಹಂತದಲ್ಲಿ ಅಸ್ತಿತ್ವದಲ್ಲಿರುವ 15 ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದೇವೆ. ಕುಡಿಯುವ ನೀರಿನ ಅಭಾವದಿಂದ ತತ್ತರಿಸಿರುವ ಶೆರೆವಾಡ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಎಲ್ಲಾ ಹಳ್ಳಿಗಳಲ್ಲಿ ಒಂದು ಕೆರೆ ಅಥವಾ ಕೊಳವಿದೆ. ಆದರೆ ಶೆರೆವಾಡದಲ್ಲಿ ಯಾವುದೂ ಇರಲಿಲ್ಲ ಅದಕ್ಕಾಗಿ ನಾವು ಕೆರೆಯನ್ನು ನಿರ್ಮಿಸಲು ನಿರ್ಧರಿಸಿದೆವು ಎಂದು ಧಾರವಾಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಇಟ್ನಾಳ್ ತಿಳಿಸಿದರು

ಆಗಸ್ಟ್ 15 ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಅಮೃತ ಸರೋವರದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.












Click it and Unblock the Notifications