ಐಐಟಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 29 : 'ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯಲ್ಲಿ ಸ್ಥಳೀಯರಿಗೆ ಶೆ 25ರಷ್ಟು ಮೀಸಲಾತಿ ನೀಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಧಾರವಾಡದ ಐಐಟಿ ಉದ್ಘಾಟನೆಗೆ ಭಾನುವಾರ ಆಗಮಿಸಿದ್ದ ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. 'ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಇಂತಹ ಬೇಡಿಕೆ ಬಂದಿದೆ. ಈ ಕುರಿತು ಶೀಘ್ರದಲ್ಲೇ ತೀರ್ಮಾನವನ್ನು ಕೈಗೊಳ್ಳುತ್ತೇವೆ' ಎಂದರು.[ಧಾರವಾಡ ಐಐಟಿ ತರಗತಿಗಳು ಆರಂಭ]

prakash javadekar

'ಕೇಂದ್ರ ಸರ್ಕಾರದ ಮುಂದೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಯೋಜನೆಗಳಿವೆ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಯತ್ನಿಸುತ್ತೇವೆ. ಮೋದಿ ನೇತೃತ್ವದ ಸರ್ಕಾರ ಆದಷ್ಟು ಬೇಗ ದೇಶದಲ್ಲಿ ಹೊಸ ತರಹದ ಶಿಕ್ಷಣ ಪದ್ಧತಿಯನ್ನು ತರಲು ಜನಾಭಿಪ್ರಾಯ ಸಂಗ್ರಹಿಸಲಿದೆ' ಎಂದು ಹೇಳಿದರು.[ಧಾರವಾಡ ಐಐಟಿ ಕ್ಯಾಂಪಸ್ಸಿಗೆ 470 ಎಕರೆ ಜಾಗ]

'ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗುತ್ತಿರುವುದು ಇಡೀ ನಗರಕ್ಕೆ ಹೊಸ ಗರಿ ಮೂಡಿದಂತೆ ಎಂದ ಸಚಿವರು, ಕರ್ನಾಟಕ ರಾಜ್ಯಕ್ಕೆ ಇನ್ನಷ್ಟು ಹೊಸ ಯೋಜನೆಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಂಡಿದ್ದಾರೆ' ಎಂದು ಭರವಸೆ ನೀಡಿದರು.

prakash javadekar2

ಸ್ವಾತಂತ್ರ್ಯಯೋಧೆಗೆ ಸನ್ಮಾನ : ನಗರದ ಅಯೋಧ್ಯಾನಗರ ನಿವಾಸಿ ಶತಾಯಿಷಿ ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಬಸಮ್ಮ ರತ್ನಕಟ್ಟಿ (105) ರವರನ್ನು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ರವಿವಾರ ಅವರ ಮನೆಯಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಾವಡೇಕರ್ ಅವರು, 'ದೇಶದ ಸಲುವಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಜನರನ್ನು ಗೌರವಿಸುವ ಮತ್ತು ಸ್ಮರಿಸುವುದನ್ನು ಮಾಡಿದರೆ ಯುವಪೀಳಿಗೆಯು ದೇಶಾಭಿಮಾನದೆಡೆ ಒಲವು ತೋರುತ್ತದೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister for Human Resources Development Prakash Javadekar said the request for providing 25 percent reservation for students from Karnataka in the IIT Dharwad would be considered after holding consultations with all concerned.
Please Wait while comments are loading...