208 ಕಿ.ಮೀ. ಹೊಸ ರೈಲ್ವೆ ಮಾರ್ಗ ನಿರ್ಮಾಣದ ಗುರಿ : ಗುಪ್ತಾ

Posted By: Ramesh
Subscribe to Oneindia Kannada

ಹುಬ್ಬಳ್ಳಿ, ಜನವರಿ. 13 : ಪ್ರಸಕ್ತ ವರ್ಷದಲ್ಲಿ 208 ಕಿ.ಮೀ. ಹೊಸ ರೈಲ್ವೆ ಮಾರ್ಗ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದೆ ಎಂದು ನೈರುತ್ಯ ರೈಲ್ವೆ ವಲಯ ವ್ಯವಸ್ಥಾಪಕ ಎ.ಕೆ.ಗುಪ್ತಾ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 202 ಕಿ.ಮೀ. ಜೋಡಿ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ.

ನೆಲಮಂಗಲ- ಶ್ರವಣಬೆಳಗೊಳ, ಬಾಗಲಕೋಟೆ- ಖಜ್ಜಿಡೋಣಿ, ಗಿಣಗೇರಾ-ಚಿಕ್ಕಬೆನಕಲ್ ಹಾಗೂ ಕಲ್ಯಾಣದುರ್ಗ- ಕದಿರಿದೇವರಪಲ್ಲಿ ಹೊಸದಾಗಿ ರೈಲ್ವೆ ಮಾರ್ಗಗಳು ನಿರ್ಮಾಣವಾಗಲಿವೆ ಎಂದರು.

2018-km-new-railway-line-2017-year-says-general-manager-south-western-railway-ak-gupta

ಕಳೆದ ಹಣಕಾಸು ವರ್ಷದಲ್ಲಿ 9 ತಿಂಗಳಲ್ಲಿ 32.191 ಮಿಲಿಯನ್ ಟನ್ ಸರಕು ಸಾಗಿಸಿದೆ. 146.18 ಮಿಲಿಯನ್ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ. 6,200 ಕೋಟಿ ರೂ. ಆದಾಯ ಗಳಿಸಲಾಗಿದೆ ಎಂದು ಹೇಳಿದರು.

2600 ಕೋಟಿ ಬಂಡವಾಳದಲ್ಲಿ 116 ಕಿ.ಮೀ.ರೈಲ್ವೆ ಮಾರ್ಗ ನಿರ್ಮಿಸಲಾಗಿದೆ, 40 ಕಿ.ಮೀ.ಹೊಸ ಮಾರ್ಗ, 76 ಕಿ.ಮೀ. ದ್ವಿಮಾರ್ಗ ಕಾಮಗಾರಿ ಮುಗಿಸಲಾಗಿದೆ ಎಂದು ತಿಳಿಸಿದರು.

ಮತ್ತೆ ಸಭೆ ನಡೆಸಲ್ಲ : ರೈಲ್ವೆ ಬಜೆಟ್ ಕುರಿತು ಸಂಸದರೊಂದಿಗೆ ಪೂರ್ವಭಾವಿ ಸಮಾಲೋಚನೆ ಸಭೆಯನ್ನು ಮತ್ತೆ ನಡೆಸುವುದಿಲ್ಲ ಎಂದು ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಬಜೆಟ್ ಪೂರ್ವಭಾವಿ ಸಭೆ ನಡೆಸಲಾಗುತ್ತು. ಸಭೆಗೆ 45 ಸಂಸದರು ಹಾಜರಿದ್ದರು. ಸಂಸದ ಪ್ರಹ್ಲಾದ ಜೋಶಿ ಸಭೆಗೆ ಗೈರು ಹಾಜರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
2018 Km new railway line in 2017 year said general manager of south western railway A.K. Gupta a press conference at Hubballi on Thursday.
Please Wait while comments are loading...