Get Updates
Get notified of breaking news, exclusive insights, and must-see stories!

Hebbal Karnataka Elections 2023: 'ಕೈ'ಯಲ್ಲಿರುವ ಬಿಜೆಪಿ ಭದ್ರಕೋಟೆ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಪರಿಚಯ

ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಹೆಬ್ಬಾಳ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೈರತಿ ಎಸ್. ಸುರೇಶ್ ಜಯ ಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಡಾ. ವೈಎ ನಾರಾಯಣಸ್ವಾಮಿ 21140 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಹೆಬ್ಬಾಳ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ನಗರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಸ್ಪರ್ಧಿಗಳು (28) ಕಣದಲ್ಲಿರುವುದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ದೊಡ್ಡ ಸಂಖ್ಯೆಯಲ್ಲಿವೆ. ಹೀಗಾಗಿ, ಮುಸ್ಲಿಂ ಮತದಾರರು ಯಾವ ಕಡೆ ವಾಲುತ್ತಾರೆ ಎನ್ನುವುದು ಗೆಲುವಿನಲ್ಲಿ ನಿರ್ಣಾಯಕ ಆಗಲಿದೆ.

congress jds bjp logos

ಹೆಬ್ಬಾಳ ವಿಧಾನಸಭಾ ಕ್ಷೇತ್ರ ಪರಿಚಯ

ದುಡಿಯುವ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಬಹುಮಹಡಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಶ್ರೀಮಂತರ ಬಂಗಲೆಗಳಿಗಳೂ ಕಡಿಮೆ ಇಲ್ಲ. ಹೊರ ರಾಜ್ಯಗಳಿಂದ ಕೆಲಸ ಅರಸಿ ನಗರಕ್ಕೆ ಬಂದು ನೆಲೆಸಿರುವ ಉತ್ತರ ಭಾರತ ಮೂಲದ ಜನರು ಈ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾಫ್ಟ್‌ವೇರ್‌ ಕಂಪನಿಗಳಿಗೆ ನೇರ ಸಂಪರ್ಕ ಕಲ್ಪಿಸುವ ರಿಂಗ್‌ ರಸ್ತೆಯ ಕಾರಣದಿಂದಾಗಿ ಈ ಭಾಗದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಸಾಫ್ಟ್‌ವೇರ್‌ ಉದ್ಯೋಗಿಗಳ ಸಂಖ್ಯೆ ದೊಡ್ಡದಿದೆ.

ಸಂಚಾರ ದಟ್ಟಣೆ, ಕಸದ ಸಮಸ್ಯೆ, ರಸ್ತೆಗಳ ಉನ್ನತೀಕರಣ ಸೇರಿದಂತೆ ಜೆ.ಸಿ ನಗರ, ಗಂಗೇನಹಳ್ಳಿ, ಮನೋರಾಯನಪಾಳ್ಯ, ವಿಶ್ವನಾಥ ನಾಗೇನಹಳ್ಳಿಯ ಹಲವು ಪ್ರದೇಶಗಳು ಕಿರಿದಾದ ರಸ್ತೆ, ಆಟದ ಮೈದಾನ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ಕೊರತೆ ಕ್ಷೇತ್ರದಲ್ಲಿವೆ. ಚುನಾವಣೆ ಹಿನ್ನೆಲೆಯಲ್ಲಿ ಬಹುತೇಕ ರಸ್ತೆ, ಕಿರಿದಾದ ರಸ್ತೆಗಳಲ್ಲಿ ಟಾರು ಕಂಡಿದೆ. ಕ್ಷೇತ್ರದಲ್ಲಿ ಎಂಟು ಬಿಬಿಎಂಪಿ ವಾರ್ಡ್‌ಗಳಿವೆ.

hebbal mla byrati suresh

ಮತದಾರರ ಸಂಖ್ಯೆ

ಇನ್ನೂ ಈ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಒಟ್ಟು 2,65,312 ರಷ್ಟಿದೆ. ಪುರುಷ ಮತದಾರರು 1,36,712ರಷ್ಟಿದ್ದು, ಮಹಿಳಾ ಮತದಾರರ ಸಂಖ್ಯೆ 1,28,561 ರಷ್ಟಿದೆ. 2013ರ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಿಂದ 24 ಸ್ಪರ್ಧಿಗಳು ಕಣದಲ್ಲಿದ್ದರು. 2018ರಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು ಎಂಟು ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು.

'ಕೈ'ಯಲ್ಲಿದೆ ಬಿಜೆಪಿ ಭದ್ರಕೋಟೆ

ಬಿಜೆಪಿ ಭದ್ರಕೋಟೆಯಾಗಿದ್ದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಈಗ ಕಾಂಗ್ರೆಸ್‌ 'ಕೈ'ಯಲ್ಲಿದೆ. 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಪದೇ ಪದೇ ಹೇಳಿಕೆ ನೀಡುತ್ತಲೇ ಸಿದ್ದರಾಮಯ್ಯ ಆತ್ಯಾಪ್ತರ ವಯಲದಲ್ಲಿ ಗುರುರಿಸಿಕೊಂಡಿರುವ ಬೈರತಿ ಸುರೇಶ್ ಕ್ಷೇತ್ರದ ಹಾಲಿ ಶಾಸಕ. 2008ರಲ್ಲಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, 2013ರಲ್ಲಿ ಬಿಜೆಪಿಯ ಆರ್.ಜಗದೀಶ್ ಕುಮಾರ್ ಆರಿಸಿ ಬಂದಿದ್ದರು. ಆದರೆ 2015ರ ನವೆಂಬರ್‌ನಲ್ಲಿ ಹೃದಯಾಘಾತದಿಂದ ಜಗದೀಶ್ ಕುಮಾರ್ ನಿಧನರಾಗಿದ್ದರಿಂದ 2016ರಲ್ಲಿ ಉಪ ಚುನಾವಣೆ ನಡೆದಿತ್ತು.

congress

ಉಪ ಚುನಾವಣೆಯಲ್ಲಿ ತಮ್ಮ ಆಪ್ತ ಬೈರತಿ ಸುರೇಶ್‌ಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಯತ್ನಿಸಿದ್ದರು. ಆದರೆ. ಕೊನೆ ಕ್ಷಣದಲ್ಲಿ ಹಿಂದನ ಚುನಾವಣೆಯಲ್ಲಿ, ಸ್ಪರ್ಧಿಸಿ ಸೋತಿದ್ದ, ಖಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್ ಅವರಿಗೇ ಕಾಂಗ್ರೆಸ್ ಮಣೆ ಹಾಕಿತ್ತು. ಆದರೆ, ಮತದಾರರು ಅವರ ಕೈಹಿಡಿಯಲಿಲ್ಲ. 19 ಸಾವಿರ ಮತಗಳ ಅಂತರದಿಂದ ಬಿಜೆಪಿ ವೈ.ಎ ನಾರಾಯಣಸ್ವಾಮಿ ಮೇಲುಗೈ ಸಾಧಿಸಿದ್ದರು.

2018ರ ಚುನಾವಣಾ ಫಲಿತಾಂಶ

ಅದೇ ಗೆಲುವಿನ ಉಮೇದಿನಲ್ಲಿ 2018ರಲ್ಲಿ ನಾರಾಯಣಸ್ವಾಮಿ ಮತ್ತೆ ಕಣಕ್ಕಿಳಿದಿದ್ದರು. ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಅಬ್ದುಲ್ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ನೀಡದೇ, ಕುರುಬ ಸಮುದಾಯದ ಬೈರತಿ ಸುರೇಶ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ತಮ್ಮವರಿಗೆ ಟಿಕೆಟ್ ನೀಡಲ್ಲ ಎಂಬ ಅಸಮಾಧಾನದ ನಡುವೆಯೂ ಮುಸ್ಲೀಂ ಮತಗಳು ಸುರೇಶ್ ಕೈಹಿಡಿದ ಕಾರಣ ಅವರು ಸುಲಭವಾಗಿ ದಡ ಸೇರಿದ್ದರು. ಒಕ್ಕಲಿಗ ಸಮುದಾಯದ ನಾರಾಯಣಸ್ವಾಮಿ ಬಿಜೆಪಿಯಿಂದ, ಹನುಮಂತೇಗೌಡ ಜೆಡಿಎಸ್‌ನಿಂದ ಸ್ಪರ್ದಿಸಿದ್ದು ಕೂಡಾ ಅವರಿಗೆ ವರವಾಗಿತ್ತು.

Hebbal Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಬೈರತಿ ಎಸ್. ಸುರೇಶ್(ಕಾಂಗ್ರೆಸ್) 74,453 ಡಾ.ವೈಎ ನಾರಾಯಣಸ್ವಾಮಿ(ಬಿಜೆಪಿ) 53,313
2013 ಆರ್.ಜಗದೀಶ್ ಕುಮಾರ್ (ಬಿಜೆಪಿ) 38,162 ಸಿ.ಕೆ ಅಬ್ದುಲ್ ರಹಮಾನ್(ಕಾಂಗ್ರೆಸ್) 33,026
208 ಕಟ್ಟಾ ಸುಬ್ರಮಣ್ಯ ನಾಯ್ಡು( ಬಿಜೆಪಿ) 46,708 ಎಚ್.ಎಂ.ರೇವಣ್ಣ(ಕಾಂಗ್ರೆಸ್) 41,757

ಈ ಬಾರಿ ಟಿಕೆಟ್ ಯಾರಿಗೆ?

ಹೆಬ್ಬಾಳ ಕ್ಷೇತ್ರದಲ್ಲಿ ಒಟ್ಟು 2,65,312 ಮತದಾರರು ಇದ್ದಾರೆ. ಈ ಪೈಕಿ ಒಕ್ಕಲಿಗರು, ಮುಸ್ಲಿಮರು, ಪರಿಶಿಷ್ಟರು, ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ನಿಂದ ಬೈರತಿ ಸುರೇಶ್‌ಗೆ ಟಿಕೆಟ್ ಸಿಗುವುದು ಪಕ್ಕಾ. ಬಿಜೆಪಿಯಿಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲು ಇಚ್ಚಿಸಿದ್ದಾರೆ. ಮತ್ತೊಂದೆಡೆ, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಕೂಡ ಸ್ಪರ್ಧೆಗೆ ಟಿಕೆಟ್ ಬಯಸಿದ್ದಾರೆ. ಮೊಹಿದ್ ಅಲ್ತಾಫ್ ಅವರಿಗೆ ಜೆಡಿಎಸ್‌ ಈಗಾಗಲೇ ಟಿಕೆಟ್ ಘೋಷಿಸಿದೆ. ಆಪ್ ಪಕ್ಷದಿಂದ ಮಂಜುನಾಥ ನಾಯ್ಡು ಕಣಕ್ಕಿಳಿಯಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+