Bye Bye ಬೊಮ್ಮಾಯಿ...ಕಾಂಗ್ರೆಸ್ ಬಾವುಟದಲ್ಲಿ ರಾರಾಜಿಸಿದ ಘೋಷಣೆ, ಪಠಾಣ್ ಬೆಂಬಲಿಗರ ಹರ್ಷೋದ್ಗಾರ- ವಿಡಿಯೊ ನೋಡಿ
ಹಾವೇರಿ, ನವೆಂಬರ್ 23: ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಉಪಚುನಾವಣೆ 2024ಯಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತವಾಗುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಕಾಂಗ್ರೆಸ್ ಭಾವುಟಗಳನ್ನು ಹಾರಿಸಿ ಹರ್ಷೋದ್ಗಾರ ಮೊಳಗಿಸಿದ್ದಾರೆ. ಇದರ ಜೊತೆಗೆ ಬಿಜೆಪಿ ಸೋತಿದ್ದಕ್ಕೆ 'ಬೈ.. ಬೈ.. ಬೊಮ್ಮಾಯಿ' ಎಂದು ಬರೆಯಿಸಿ ಕಾರ್ಯರ್ಕತರು ಘೋಷಣೆ ಕೂಗಿದ್ದಾರೆ. ಈ ಕುರಿತ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ ಕಾಂಗ್ರೆಸ್ ಭಾವುಟದಲ್ಲಿ 'ಬಿಜೆಪಿ ಉಲ್ಟಾ ಭಾವುಟ' ಮತ್ತು Bye Bye ಬೊಮ್ಮಾಯಿ' ಬರೆಸಲಾಗಿದೆ.
ಮತ ಎಣಿಕೆ ವೇಳೆ 7ನೇ ಸುತ್ತಿನಿಂದ 16ನೇ ಸುತ್ತಿನವರೆಗೆ ನಿರಂತರವಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಾ ಬರುತ್ತಿದ್ದಂತೆ ಬಿಜೆಪಿ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಆಘಾತ ಎದುರಾಯಿತು. ಪಕ್ಷದಲ್ಲಿ ಮಬ್ಬು ಕವಿದಂತಾಯಿತು. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಅವರು 93,234 ಮತ ಪಡೆದರೆ, ಬಿಜೆಪಿ ಭರತ್ ಬೊಮ್ಮಾಯಿ ಅವರು ಕೇವಲ 79,756 ಮತಗಳನ್ನು ಪಡೆದು ಹಿನ್ನಡೆ ಎದುರಿಸಿದರು. ಅವರು ಸೋಲು ಎದುರಿಸುವಂತಾಯಿತು.

ಬಿಜೆಪಿ ಸೋಲು ಸಂಭ್ರಮಿಸಿದ ಕಾಂಗ್ರೆಸ್ ಬೆಂಬಲಿಗರು
ಕಾಂಗ್ರೆಸ್ ನಾಯಕ ಯಾಸಿರ್ ಖಾನ್ ಪಠಾಣ್ ಅವರು ಎದುರಾಳಿಗಿಂತ 13,478 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದು ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ತಮ್ಮ ಕಾಂಗ್ರೆಸ್ ಭಾವುಟದಲ್ಲಿ 'BYE BYE ಬೊಮ್ಮಾಯಿ' ಎಂದು ಬರೆಸಿದ್ದಾರೆ, ಬಿಜೆಪಿ ಕಮಲ ಭಾವುಟ ಉಲ್ಟಾ ಹಾಕಿಸುವ ಮೂಲಕ ಬಿಜೆಪಿ ಸೋಲನ್ನು ಕಾಂಗ್ರೆಸ್ಸಿಗರು ಸಂಭ್ರಮಿಸಿದರು. ಈ ಮೂಲಕ ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿಗೆ ಕಾಂಗ್ರೆಸ್ ಟಕ್ಕರ್ ನೀಡಿದೆ.
ಕಾಂಗ್ರೆಸ್ ಗೆಲುವು ಖಚಿತವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿಯೇ ಕಾಂಗ್ರೆಸ್ ಕಾರ್ಯಕರ್ತರು 'BYE BYE ಬೊಮ್ಮಾಯಿ' ಎಂದು ದ್ವಜ ಹಿಡಿದು ವಿಜಯೋತ್ಸವ ಆಚರಿಸಿದ್ದಾರೆ.
ಭರತ್ ಬೊಮ್ಮಾಯಿಗೆ 'ಬೈ..ಬೈ ಬೊಮ್ಮಾಯಿ' ಎಂದ ಕಾಂಗ್ರೆಸ್ ಬೆಂಬಲಿಗರು
ಇತ್ತ ಹಾವೇರಿಯ ಮತ ಎಣಿಕೆ ಕೇಂದ್ರದಲ್ಲಿದ್ದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಸಹ ಸೋತ ಮೊಗದಲ್ಲಿ ಕೇಂದ್ರದಿಂದ ಹೊರ ಬಂದು ಕಾರಿನಲ್ಲಿ ತೆರಳಿದ್ದಾರೆ. ಇದನ್ನು ನೋಡಿದ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸೋಲಿನ ಕುರಿತು ಲೇವಡಿ ಮಾಡಿದ್ದಾರೆ. ಭರತ್ ಕಂಡು 'ಕೈ' ಕಾರ್ಯಕರ್ತರು 'ಬೈ ಬೈ ಬೊಮ್ಮಾಯಿ' ಎಂದು ಘೋಷಣೆ ಕೂಗಿ ನಗಾಡಿದ್ದು ಕಂಡು ಬಂತು.
ಶಿಗ್ಗಾವಿಯಲ್ಲಿ 17ನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಗೆಲುವಿಗೆ 'ಕೈ' ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಸನಿಹವಾಗಿದ್ದಾರೆ. ಕಾಂಗ್ರೆಸ್ ಇಲ್ಲಿ ಗೆಲುವು ಬಹುತೇಕ ಫಿಕ್ಸ್ ಆಗಿದೆ. ಇನ್ನೊಂದೆ ಸುತ್ತು ಬಾಕಿ ಇದೆ. 18 ಸುತ್ತಿನ ಮತ ಎಣಿಕೆಯಲ್ಲಿ ಅಧಿಕೃತ ಮಾಹಿತಿ ಹೊರ ಬೀಳಲಿದೆ. ಇಂದು ಸಂಜೆಯೇ ರಾಜ್ಯ ಚುನಾವಣೆ ಆಯೋಗ ಅಧಿಕೃತ ಫಲಿತಾಂಶ ಪ್ರಕಟಿಸಲಿದೆ.












Click it and Unblock the Notifications