ಅನಾಥ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ಹಾವೇರಿ ಜಿಲ್ಲಾಧಿಕಾರಿ

ಹಾವೇರಿ, ನವೆಂಬರ್ 08 : ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಅನಾಥ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದರು. ಸದಾ ಜನರ ಜೊತೆ ಬೆರೆಯುವ ಜಿಲ್ಲಾಧಿಕಾರಿಗಳು ಜನಪರ ಅಧಿಕಾರಿ ಎಂದು ಪ್ರಸಿದ್ಧಿ ಪಡೆದಿದ್ದಾರೆ.

ಡಾ.ಎಂ.ವಿ.ವೆಂಕಟೇಶ್ ಅವರು ಹಾವೇರಿಯ ತಮ್ಮ ನಿವಾಸದಲ್ಲಿ ಅನಾಐ ಮಕ್ಕಳ ಜೊತೆ ದೀಪಾವಳಿ ಹಬ್ಬ ಆಚರಿಸಿದರು. ಮಕ್ಕಳೊಂದಿಗೆ ಹಬ್ಬದ ಸಿಹಿ ಊಟವನ್ನು ಸವಿದು ಸಂತಸ ಪಟ್ಟರು.

ಮನೆಗೆ ಆಗಮಿಸಿದ್ದ ಮಕ್ಕಳಿಗೆ ಹೊಸಬಟ್ಟೆ ವಿತರಿಸಿ, ಸಿಹಿ ಹಂಚಿಕೆ ಮಾಡಿದರು. 22 ಮಕ್ಕಳು ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಅವರ ಜೊತೆ ದೀಪಾವಳಿ ಹಬ್ಬ ಆಚರಣೆ ಮಾಡಿದರು.

Haveri DC MV Venkatesh celebrates deepavali with orphan children

ಡಾ.ಎಂ.ವಿ.ವೆಂಕಟೇಶ್ ಅವರು ಜನಪರ ಅಧಿಕಾರಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. 2017ರಲ್ಲಿ ಜಿಲ್ಲೆಯ ದೇವಿಹೊಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೆರೆಯಲ್ಲಿ ಜನರ ಜೊತೆ ಸೇರಿ ಕೆರೆ ಹೂಳು ತೆಗೆಯುವ ಕೆಲವನ್ನು ಡಾ.ಎಂ.ವಿ.ವೆಂಕಟೇಶ್ ಮಾಡಿದ್ದರು.

ಮಾನವೀಯತೆ ಮೆರೆದ ಎಸ್ಪಿ : ಹಾವೇರಿ ಜಿಲ್ಲಾಧಿಕಾರಿಗಳು ಮಾತ್ರವಲ್ಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಅವರು ಸಹ ಜನಪರ ಕಾಳಜಿಯನ್ನು ಹೊಂದಿದ್ದಾರೆ.

Haveri DC MV Venkatesh celebrates deepavali with orphan children

ಕಳೆದ ವಾರ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ರಕ್ತಸ್ರಾವವಾಗಿ ಬಿದ್ದು ಹೊರಳಾಡುತ್ತಿದ್ದ ಬೈಕ್ ಸವಾರನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+