ಸಿದ್ದರಾಮಯ್ಯ ನಮಗೆ ಮೋಸ ಮಾಡಿದರು : ಬಿ.ಸಿ.ಪಾಟೀಲ್
Recommended Video
ಹಾವೇರಿ, ಆಗಸ್ಟ್ 05 : "ಅನರ್ಹಗೊಂಡ ಶಾಸಕರು ಸಿದ್ದರಾಮಯ್ಯ ಅವರ ಆಪ್ತರಾಗಿದ್ದವರು. ಮಂತ್ರಿ ಮಾಡುತ್ತೇವೆ ಎಂದು ಕರೆದು ಮೋಸ ಮಾಡಿದರು" ಎಂದು ಬಿ. ಸಿ. ಪಾಟೀಲ್ ಆರೋಪ ಮಾಡಿದರು.
ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ಸಿ. ಪಾಟೀಲ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸೋಮವಾರ ಅವರು ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಾಂಗ್ರೆಸ್ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

"ಬಿಜೆಪಿಯಿಂದ ಆಹ್ವಾನ ಬರುತ್ತಿದೆ, ನಾನು ಯಾವುದೇ ತೀರ್ಮಾನವನ್ನು ಮಾಡಿಲ್ಲ. ಅನರ್ಹತೆ ಮಾಡಿದ್ದು ಕ್ರಮಬದ್ಧವಾಗಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ನಮಗೆ ಜಯ ಸಿಗುತ್ತದೆ" ಎಂದು ಬಿ. ಸಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಬಿ. ಸಿ. ಪಾಟೀಲ್ ಹೇಳಿದ್ದೇನು?
* ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಬಹಳ ಭರವಸೆ ಹೊಂದಿದ್ದೆ. ಆದರೆ, ಕೊನೆ ಘಳಿಗೆಯಲ್ಲಿ ಅವರು ಕೈ ಕೊಟ್ಟರು. ಮಂತ್ರಿ ಮಾಡುತ್ತೀವಿ ಅಂತ ಕರೆದು ಮೋಸ ಮಾಡಿದರು.
* ಅನರ್ಹಗೊಂಡ ಶಾಸಕರು ಸಿದ್ದರಾಮಯ್ಯ ಅವರ ಆಪ್ತರಾಗಿದ್ದವರು. ಸಿದ್ದರಾಮಯ್ಯ ಅವರ ಸಮಾಜಕ್ಕೆ ಸೇರಿದ ನಾಲ್ಕು ಶಾಸಕರನ್ನೇ ಅವರು ಕೈ ಬಿಟ್ಟಿದ್ದಾರೆ. ಇನ್ನು ನಾನು ಯಾವ ಲೆಕ್ಕ.
* ಕುಮಾರಸ್ವಾಮಿ ಅವರದ್ದು ಒಂದು ಕುಟುಂಬದ ಆಡಳಿತ. ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಆಡಳಿತ ರಾಜ್ಯದಲ್ಲಿ 14 ತಿಂಗಳು ನಡೆಯಿತು.
* ಕಾಂಗ್ರೆಸ್‌ನ ಡಿ. ಕೆ. ಶಿವಕುಮಾರ್, ಜಿ. ಪರಮೇಶ್ವರ ಆಡಳಿತ ಮಾಡಿದರು. ಯಾವ ಸಚಿವರಿಗೂ ಸ್ವಾತಂತ್ರ ಸಿಗಲಿಲ್ಲ
* ನಾನು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಿಲ್ಲ. ಅಪ್ಪ ಮಾಡಿದ ಆಸ್ತಿಯಲ್ಲಿ 10 ಎಕರೆ ಮಾರಾಟ ಮಾಡಿದ್ದೀನಿ.












Click it and Unblock the Notifications