ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಹಾಸನದಲ್ಲಿ ಬೈಕ್ ರೇಸ್, ಸಂಭ್ರಮಿಸಿದ ಜನರು

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್ 22; ಕಾರು ರೇಸ್ ನೋಡಿದ್ದೇವೆ, ಜಿಪ್ಸಿ ರೇಸ್ ಕೂಡ ನೋಡಿದ್ದೇವೆ. ಆದರೆ ಬೈಕ್ ರೇಸ್ ನೋಡೋದು ಹಳ್ಳಿಗಳಲ್ಲಿ ತುಂಬಾ ವಿರಳ. ಅಂತಹ ಬೈಕ್ ರೇಸ್‌ಗೆ ಹಾಸನ ಸಾಕ್ಷಿಯಾಗಿದ್ದು ಬೈಕ್ ರೇಸ್ ಕಣ್ತುಂಬಿಕೊಂಡ ಜನರು ಸಂಭ್ರಮಿಸಿದ್ದಾರೆ.

ಎದೆ ನಡುಗಿಸುವ ಶಬ್ಧದೊಂದಿಗೆ ಶರವೇಗದ ಬೈಕ್ ರೇಸ್ ನಡೆದಿದ್ದು ಹಾಸನದ ಹೂವಿನಹಳ್ಳಿಯಲ್ಲಿ. ಹೌದು ಬೈಕ್ ರೈಡರ್‌ಗಳ ಸಾಹಸ ಕಂಡು ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದಾರೆ. ಈ ಬೈಕ್ ರೇಸ್‌ನಲ್ಲಿ ನೋಡಗರು ಕೊಂಚ ಆಯ ತಪ್ಪಿದರೂ ಅಪಾಯ ಖಂಡಿತ, ಧೂಳ್‌ನಲ್ಲಿ ನುಗ್ಗುತ್ತಿದ್ದ ಆ ರೈಡರ್‌ಗಳನ್ನು ನೋಡಿದರೆ ಎಂಥವರಿಗೂ ಒಂದು ಕ್ಷಣ ಅಬ್ಬ ಅಬ್ಬಾ ಅನ್ನಿವುದು ಗ್ಯಾರಂಟಿ.

ಈ ತರಹದ ಬೈಕ್ ರೇಸ್‌ ನೋಡಿ ಹಾಸನದ ಜನರು ಸಂತಸಗೊಂಡಿದ್ದಾರೆ. ನೋಡುಗರು ಮೈನವೀರೇಳಿಸುವಂಥ ವೇಗದಲ್ಲಿ ಬೈಕ್ ಸವಾರರು ಜಟಾಪಟಿಗೆ ಬಿದ್ದಿದ್ದರೆ, ಇತ್ತ ನೋಡುಗರು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರು. ಕೇರಳ, ತಮಿಳುನಾಡು, ಮಡಿಕೇರಿ ಹಾಗೂ ರಾಜ್ಯದ ನಾನಾ ಭಾಗದಿಂದ 40ಕ್ಕೂ ಹೆಚ್ಚು ಬೈಕ್ ರೈಡರ್‌ಗಳು ಈ ರೇಸ್‌ನಲ್ಲಿ ಭಾಗಿಯಾಗಿದ್ದರು. ಸುಮಾರು 7 ಸುತ್ತಿನ ಓಟದಲ್ಲಿ ಪ್ರಥಮ ಬಹುಮಾನ 30 ಸಾವಿರವಿತ್ತು. ದ್ವಿತೀಯ ಹಾಗೂ ತೃತೀಯ ಬಹುಮಾನಗಳು ಇದ್ದವು.

ಅರಣ್ಯ ಇಲಾಖೆ ಸೇರಿದ ಸೌರಶಕ್ತಿ ಬೈಕ್, ವಿಶೇಷತೆಗಳು ಅರಣ್ಯ ಇಲಾಖೆ ಸೇರಿದ ಸೌರಶಕ್ತಿ ಬೈಕ್, ವಿಶೇಷತೆಗಳು

Video Dirt Bike Racing In Hassan Karnataka

ಈ ಕಾಲದಲ್ಲಿ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ ಯುವಕರು ದಾರಿ ತಪ್ಪುತ್ತಾರೆ. ಅಂಥವರು ಸುಕ್ಷಿತವಾಗಿ ಅಭ್ಯಾಸ ಮಾಡಿ ಇಂಥಹ ಸ್ಪರ್ಧೆಗಳಲ್ಲಿ ಭಾಗಿಯಾಗಲಿ ಅಂತ ಆಯೋಜಕರು ಪ್ರೋತ್ಸಾಹಿಸಿದ್ದಾರೆ. ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸಿ ಅವಾಂತರ ಮಾಡಿಕೊಳ್ಳುವ ಯುವಕರಿಗೆ ಹಾಸದಲ್ಲಿ ಆಯೋಜನೆ ಮಾಡಿದ್ದ ಈ ಡರ್ಟ್ ರೇಸ್ ನಿಜಕ್ಕೂ ಸುರಕ್ಷತೆಯ ಪಾಠವಾಗಿತ್ತು.

ಮಕ್ಕಳನ್ನು ಬೈಕ್ ಹಿಂಬದಿ ಕೂರಿಸಿಕೊಂಡು ಹೋಗಲು ಕೇಂದ್ರದಿಂದ ಹೊಸ ನಿಯಮಮಕ್ಕಳನ್ನು ಬೈಕ್ ಹಿಂಬದಿ ಕೂರಿಸಿಕೊಂಡು ಹೋಗಲು ಕೇಂದ್ರದಿಂದ ಹೊಸ ನಿಯಮ

ಅದೇ ರೀತಿ ಈಗಾಗಲೇ ರೇಸ್‌ಗಳಲ್ಲಿ ಭಾಗಿಯಾಗುತ್ತಿರುವ ಯುವಕರಿಗೆ ಈ ಬೈಕ್ ರೇಸ್ ಉತ್ತಮ ಅವಕಾಶದ ವೇದಿಕೆ ಆಗಿತ್ತು. ಪ್ರೇಕ್ಷಕರಿಗೆ ರಸದೌತಣ ನೀಡಿದ್ದು ಸುಳ್ಳಲ್ಲ. ಧೂಳಿನಲ್ಲಿ ಬೈಕುಗಳು ರುವ್ ರುವ್ ಅಂತಾ ಸಾಗುತ್ತಿದ್ದರೆ ನೋಡುಗರ ಎದೆ ಝಲ್ ಎನ್ನಿಸುತ್ತಿತ್ತು. ಬೈಕ್ ರೇಸ್‌ನ ಮನಮೋಹಕ ದೃಶ್ಯಗಳು ನೋಡಗರನ್ನು ಅರೇ ಕ್ಷಣ ದಂಗಾಗುವಂತೆ ಮಾಡಿತ್ತು.

ದಾವಣಗೆರೆ ಮೇಯರ್ ಕಾರಿಗೆ ಸಿನಿಮಾ ಸ್ಟೈಲ್‌ನಲ್ಲಿ ಬೈಕ್ ಡಿಕ್ಕಿ: ಹೆಲ್ಮೆಟ್ ಉಳಿಸಿತು ಪ್ರಾಣ! ದಾವಣಗೆರೆ ಮೇಯರ್ ಕಾರಿಗೆ ಸಿನಿಮಾ ಸ್ಟೈಲ್‌ನಲ್ಲಿ ಬೈಕ್ ಡಿಕ್ಕಿ: ಹೆಲ್ಮೆಟ್ ಉಳಿಸಿತು ಪ್ರಾಣ!

ಬೈಕ್ ರ‍್ಯಾಲಿಯ ಆಯೋಜಕ ಮಹಮ್ಮದ್ ಅಲಿ ಮಾತಾನಾಡಿ, "ಕೇರಳ, ತಮಿಳುನಾಡು, ಚಿಕ್ಕಮಗಳೂರು, ಮೂಡಿಗೆರೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು. 600 ರಿಂದ 700 ಮೀ ಒಂದು ಟ್ರಾಕ್ ಇರುತ್ತದೆ. ರಸ್ತೆಯಲ್ಲಿ ವೀಲಿಂಗ್ ಮಾಡೋದು ಬೇಡ, ಇಲ್ಲಿ ಬಂದು ಅಂತಹ ಯುವಕರು ಬೈಕ್ ರೇಸ್‌ನಲ್ಲಿ ಭಾಗವಹಿಸಲಿ. ಎಂದು ಸ್ಪರ್ಧೆ ಆಯೋಜನೆ ಮಾಡಿದ್ದೇವೆ" ಎಂದರು.

ಇದೇ ವೇಳೆ ಬೈಕ್ ರೇಸ್ ಸ್ಪರ್ಧಾಳು ಹುಸೇನ್ ಮಾತಾನಾಡಿ, "ಆಯೋಜಕರು ತುಂಬಾ ಚೆನ್ನಾಗಿ ಟ್ರಾಕ್‌ಗಳನ್ನು ರೆಡಿ ಮಾಡಿದ್ದಾರೆ, ರೇಸ್ ಸೇಫ್ಟಿ ವಸ್ತುಗಳನ್ನ ಬಳಸಿಕೊಂಡು ರೈಡ್ ಮಾಡುತ್ತೇವೆ, ಈ ರೇಸ್‌ನಲ್ಲಿ ಭಾಗವಹಿಸಿದ್ದು ತುಂಬಾ ಖುಷಿಯಾಯ್ತು, ಟ್ರಾಕ್ ಗಳಲ್ಲಿ ಬೈಕ್ ಓಡಿಸೋದು ತುಂಬಾ ಮಜಾ ನೀಡುತ್ತದೆ" ಎಂದು ಹೇಳಿದರು.

Recommended Video

South Africa ನಾಯಕ ಪ್ರಕಾರ India ಗೆಲ್ಲೋದು ಸುಲಭವಲ್ಲ | Oneindia Kannada

English summary
People of Hassan enjoyed the dirt bike racing. More than 40 participants took part in the race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X