Get Updates
Get notified of breaking news, exclusive insights, and must-see stories!

ಐಎಂ ವಿಠ್ಠಲ್ ಮೂರ್ತಿ ಕಾಫಿ ತೋಟದಲ್ಲಿ ಪ್ರಜ್ಞೆ ತಪ್ಪಿದ್ದ ಆನೆ ಪತ್ತೆ

ಸಕಲೇಶಪುರ, ಮೇ 22 : ನಿವೃತ್ತ ಐಎಎಸ್ ಅಧಿಕಾರಿ ಐಎಂ ವಿಠ್ಠಲ್ ಮೂರ್ತಿ ಅವರ ಕಾಫಿ ತೋಟ ಇಲ್ಲಿ ಕೋಗರವಳ್ಳಿ ಸಿದ್ದಾಪುರದಲ್ಲಿದ್ದು, ಅಲ್ಲಿ ಕಾಡಾನೆಯೊಂದು ನಿತ್ರಾಣವಾಗಿ ಪ್ರಜ್ಞೆ ತಪ್ಪಿ ಬಿದ್ದಿರುವುದು ಪತ್ತೆಯಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು, ಪರಿಶೀಲನೆ ನಡೆಸಿದ್ದಾರೆ.

ವೈದ್ಯಕೀಯ ಚಿಕಿತ್ಸೆ ನೀಡಿದ ಮೇಲೆ ಆನೆಗೆ ಪ್ರಜ್ಞೆ ಬಂದಿದೆ. ಆದರೆ ಅದಕ್ಕೆ ನಿಲ್ಲುವಷ್ಟು ಚೈತನ್ಯ ಕಂಡುಬರುತ್ತಿಲ್ಲ. ಪೌಷ್ಟಿಕ ಆಹಾರ ಸಿಗದ ಕಾರಣ ಅದು ಈ ಸ್ಥಿತಿಗೆ ತಲುಪಿರಬಹುದು ಎಂಬ ಅಂದಾಜಿದೆ. ಸುಮಾರು ಇಪ್ಪತ್ತು ವರ್ಷದ ಆನೆ ಹದಿನೈದು ದಿನದ ಹಿಂದೆ ಮರಿ ಹಾಕಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ವೈದ್ಯರು.

Unconscious elephant found in retire IAS officer IM Vittal Murthy coffee estate

ಇನ್ನು ಈ ಆನೆಯ ಸ್ಥಿತಿಗೆ ಕಾರಣವೇನು, ಸಮಸ್ಯೆ ಏನಾಗಿದೆ ಎಂಬ ಬಗ್ಗೆ ತಿಳಿಯಲು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಸಿಕ್ಕ ನಂತರ ಮುಂದಿನ ಚಿಕಿತ್ಸೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯುತ್ತದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

{promotion-urls}

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+