ಬಟ್ಟೆ ಒಣಹಾಕುವಾಗ ವಿದ್ಯುತ್ ತಗುಲಿ ತಾಯಿ ಮಕ್ಕಳ ಸಾವು
ಹಾಸನ, ಸೆಪ್ಟೆಂಬರ್ 11: ಬಟ್ಟೆ ಒಗೆದು ಒಣ ಹಾಕುವಾಗ ವಿದ್ಯುತ್ ತಗುಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಅಗಸರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಭಾಗ್ಯಮ್ಮ(49), ಮಕ್ಕಳಾದ ದಾಕ್ಷಾಯಿಣಿ (30), ದಯಾನಂದ (34) ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ದಾಕ್ಷಾಯಿಣಿ ಬಟ್ಟೆ ಒಣಹಾಕಲು ಹೋಗಿದ್ದರು. ಈ ಸಂದರ್ಭ ವಿದ್ಯುತ್ ತಂತಿ ತಗುಲಿ ಅವರಿಗೆ ಶಾಕ್ ಹೊಡೆದಿದೆ. ದಾಕ್ಷಾಯಿಣಿ ಒದ್ದಾಡುತ್ತಿದ್ದುದನ್ನು ಕಂಡ ದಯಾನಂದ ಅವರನ್ನು ಹಿಡಿದುಕೊಂಡಾಗ ಆತನಿಗೂ ಶಾಕ್ ಹೊಡೆದಿದೆ. ಬಳಿಕ ಭಾಗ್ಯಮ್ಮ ಇವರನ್ನು ಆಘಾತದಿಂದ ತಪ್ಪಿಸಲು ಹೋಗಿ ಅವರಿಗೂ ವಿದ್ಯುತ್ ತಗುಲಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications