ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ; ಭೀಕರ ಅಪಘಾತ ಮಕ್ಕಳು ಸೇರಿ ಮೂವರ ಸಾವು

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್ 20; ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಒಂದೇ ಲಾರಿ 4 ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳ ತಾಯಿ ಕೂಡ ಮೃತಪಟ್ಟರು.

4 ಬೈಕ್‌ಗಳಿಗೆ ಲಾರಿ ಡಿಕ್ಕಿ ಹೊಡೆದಿದೆ, ಡಿಕ್ಕಿ ಬಳಿಕ ಬೈಕುಗಳನ್ನು ಸುಮಾರು 2 ಕಿ. ಮೀ. ದೂರದವರೆಗೆ ಲಾರಿ ಎಳೆದುಕೊಂಡು ಹೋಗಿದೆ. ಕುಡಿದ ಮತ್ತಿನಲ್ಲಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ಅಪಘಾತ ಸಂಭವಿಸಿದೆ. ಲಾರಿಯ ಟಯರ್‌ನಡಿ ಸಿಲುಕಿದ್ದ ಮಕ್ಕಳ ಮೃತದೇಹ ಛಿದ್ರವಾಗಿ ಹೋಗಿದೆ. ಅಪಘಾತದ ರಭಸಕ್ಕೆ ಮಕ್ಕಳ ದೇಹದ ಭಾಗಗಳು ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದ್ದವು.

ಹಾಸನ ರಾಜಕೀಯ; ಎ. ಮಂಜುಗೆ ಪ್ರೀತಂ ಗೌಡ ಟಾಂಗ್!ಹಾಸನ ರಾಜಕೀಯ; ಎ. ಮಂಜುಗೆ ಪ್ರೀತಂ ಗೌಡ ಟಾಂಗ್!

Road accident

ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಹಾಸನದ ಗವೇನಹಳ್ಳಿಯ ಶಿವಾನಂದ್ ಪತ್ನಿ ಜ್ಯೋತಿ, ಮಕ್ಕಳಾದ ಪ್ರಣತಿ (3), ಪ್ರಣವ್(3) ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಪ್ರಣತಿ ಮತ್ತು ಪ್ರಣವ್ ಸ್ಥಳದಲ್ಲಿಯೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಶಿವಾನಂದ್ ಮತ್ತು ಜ್ಯೋತಿಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಜ್ಯೋತಿ ಸಾವನ್ನಪ್ಪಿದ್ದಾರೆ.

Breaking; ದಾವಣಗೆರೆಯಲ್ಲಿ ಭೀಕರ ಅಪಘಾತ, 4 ಸಾವು Breaking; ದಾವಣಗೆರೆಯಲ್ಲಿ ಭೀಕರ ಅಪಘಾತ, 4 ಸಾವು

ಶಿವಾನಂದ್‌ಗೆ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಶಿವಾನಂದ್ ಆರೋಗ್ಯ ಸ್ಥಿತಿ ಸಹ ಗಂಭೀರವಾಗಿದೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಪೊಲೀಸರು ಲಾರಿ ಚಾಲಕನಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಹಾಸನ; ಮತ್ತೆ ಮಳೆ, ಕೊಚ್ಚಿ ಹೋದ ರಸ್ತೆ, ಕೆರೆ ಏರಿ ಬಿರುಕುಹಾಸನ; ಮತ್ತೆ ಮಳೆ, ಕೊಚ್ಚಿ ಹೋದ ರಸ್ತೆ, ಕೆರೆ ಏರಿ ಬಿರುಕು

Recommended Video

ಒಬ್ಬ ವ್ಯಕ್ತಿಗೆ ಡೆಲ್ಟಾ ಮತ್ತು ಒಮಿಕ್ರಾನ್ ಸೋಂಕು ಒಟ್ಟಿಗೆ ತಗುಲಿದ್ರೆ ಏನಾಗುತ್ತೆ? | Oneindia Kannada

ಕುಡಿದ ಅಮಲಿನಲ್ಲಿ ಲಾರಿ ಓಡಿಸುತ್ತಿದ್ದ ಚಾಲಕ ನಾಲ್ಕು ಬೈಕ್‌ಗಳಿಗೆ ಡಿಕ್ಕಿ ಹೊಡೆದರೂ ಸಹ ಲಾರಿ ನಿಲ್ಲಿಸಿಲ್ಲ. ಎರಡು ಕಿ. ಮೀ. ತನಕ ಹಾಗೆಯೇ ಸಾಗಿದ್ದಾನೆ. ಲಾರಿ ಚಾಲಕನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

English summary
Three killed in road accident at Hassan. Truck rammed into bike in Hassan city police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X