ಅರಸೀಕೆರೆ ಬಾಲಕಿ ಮಾರಾಟ ಪ್ರಕರಣದಲ್ಲಿ ಮೂವರ ಬಂಧನ
ಹಾಸನ, ಮೇ 25: ಬಾಲಕಿಯನ್ನು ಮೂರು ಲಕ್ಷ ರುಪಾಯಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರಸೀಕೆರೆಯ ಪ್ರಮುಖ ಆರೋಪಿಯ ಪತಿ ವಸಂತ ಕುಮಾರ್, ಬಾಲಕಿಯನ್ನು ಮದುವೆಯಾಗಿದ್ದ ಕರುಣಿ ದಾಸ್ ಹಾಗೂ ಶಶಿರೇಖಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆದರೆ, ಪ್ರಮುಖ ಆರೋಪಿ ಸುನೀತಾ ಎಂಬಾಕೆ ತಲೆ ತಪ್ಪಿಸಿಕೊಂಡಿದ್ದಾಳೆ. ಇನ್ನು ಬಾಲಕಿಯನ್ನು ರಕ್ಷಿಸುವ ಸಂದರ್ಭದಲ್ಲಿ ಬಿಕ್ಕು ಎಂಬಾಕೆಯನ್ನು ಬಂಧಿಸಲಾಗಿತ್ತು. ಬಾಲಕಿಯ ರಕ್ಷಣೆ ಮಾಡಿದ ನಂತರ ಎರಡು ಪೊಲೀಸ್ ತಂಡಗಳು ಆರೋಪಿಗಳಿಗಾಗಿ ಶೋಧ ನಡೆಸಿದ್ದವು.[ಹಾಸನ: ಬೈಕ್ ನಲ್ಲಿ ತೆರಳುತ್ತಿದ್ದಾಗ ವಿದ್ಯುತ್ ತಗುಲಿ ಮೂವರ ಸಾವು]

ಚೆನ್ನೈ ಹಾಗೂ ರಾಜಸ್ತಾನದಲ್ಲಿರುವ ಮಧ್ಯವರ್ತಿಗಳ ಬಂಧಿಸಿದ ನಂತರ ಪ್ರಕರಣದ ಪೂರ್ತಿ ಮಾಹಿತಿ ಸಿಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಗೆ ತನ್ನ ಮಾರಾಟ ಮಾಡಿದ ಚೆನ್ನೈ ಹಾಗೂ ರಾಜಸ್ತಾನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಆರೋಪಿಗಳ ಬಂಧನವು ತಡವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ರಾಜಸ್ತಾನ ಪೊಲೀಸರ ಸಹಕಾರ ಪಡೆದು ಪ್ರಮುಖ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications