ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ: ಏಕ ಸ್ಥಳದಲ್ಲಿ 126 ಮುನಿಗಳ ಚಾತುರ್ಮಾಸ್ಯ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜುಲೈ.27: ಆಷಾಢ ಮಾಸದ ವೈಶಿಷ್ಟ್ಯತೆಗಳಲ್ಲಿ ಒಂದು ಎಲ್ಲಾ ಮಠಗಳ ಚಾತುರ್ಮಾಸ್ಯ. ಎಲ್ಲಾ ಪೀಠಗಳ ಶ್ರೀಗಳು ಒಂದೊಂದು ಪ್ರದೇಶದಲ್ಲಿ ಚಾತುರ್ಮಾಸ್ಯ ಕೈಗೊಳ್ಳುತ್ತಾರೆ. ಆದರೆ ಈ ಬಾರಿ 88ನೇ ಮಹಾಮಸ್ತಕಾಭಿಷೇಕದ ಸಂಭ್ರಮದಲ್ಲಿರುವ ಶ್ರವಣಬೆಳಗೊಳದಲ್ಲಿ ಚಾತುರ್ಮಾಸ್ಯದ ದೀಕ್ಷೆ ಪಡೆದಿರುವ ಯತಿಗಳ ಸಂಖ್ಯೆ ಬರೋಬ್ಬರಿ 126.

ಇದೇ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಇಷ್ಟು ಸಂಖ್ಯೆಯ ಯತಿಗಳು ಚಾತುರ್ಮಾಸ್ಯದ ದೀಕ್ಷೆ ಕೈಗೊಂಡಿದ್ದಾರೆ. ಆಷಾಢದಿಂದ ಆಶ್ವಯುಜ ಮಾಸದ ವರೆಗೆ ಇವರು ಚಾತುರ್ಮಾಸ ಕೈಗೊಳ್ಳಲಿದ್ದಾರೆ. ಈ ಯತಿಗಳೆಲ್ಲಾ ಜೈನ ದಿಗಂಬರ ಪಂಥಕ್ಕೆ ಸೇರಿದವರು.

ಬೆಂಗಳೂರಿನಲ್ಲಿ ಸುಗುಣೇಂದ್ರ ತೀರ್ಥರ ಚಾತುರ್ಮಾಸ್ಯ ವ್ರತಬೆಂಗಳೂರಿನಲ್ಲಿ ಸುಗುಣೇಂದ್ರ ತೀರ್ಥರ ಚಾತುರ್ಮಾಸ್ಯ ವ್ರತ

108 ವರ್ಧಮಾನ ಸಾಗರ ಮಹಾರಾಜ್, 6 ಆಚಾರ್ಯರು, ಸೇರಿದಂತೆ 126 ಯತಿಗಳು ಗುರುವಾರ ಚಾತುರ್ಮಾಸದ ದೀಕ್ಷೆ ಕೈಗೊಂಡರು. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೂಡಾ ಇದೇ ಸಂದರ್ಭದಲ್ಲಿ ಚಾತುರ್ಮಾಸ್ಯದ ದೀಕ್ಷೆ ಸ್ವೀಕರಿಸಿದರು.

Specialty of Ashadha is that all monasteries chaturmasya

1997ರಿಂದ ಚಾತುರ್ಮಾಸ್ಯ ಆಚರಿಸುತ್ತಿರುವ ಶ್ರೀಗಳಿಗೆ ಇದು 22ನೇ ಚಾತುರ್ಮಾಸ. ಈ ಚಾತುರ್ಮಾಸದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳದಲ್ಲಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

English summary
One of the specialty of Ashadha is that all monasteries chaturmasya.During the next two months, there will be religious and cultural events in Shravanabelagola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X