ಹಾಡುಹಗಲೇ ಪುಡಿ ರೌಡಿಯನ್ನು ಅಟ್ಟಾಡಿಸಿ ಕೊಲೆಗೈದ ದುಷ್ಕರ್ಮಿಗಳು

ಹಾಸನ, ಜೂನ್.24: ಶನಿವಾರ ನಗರದಲ್ಲಿ ನಡೆದ ಎರಡು ಘಟನೆಗಳು ಹಾಸನ ಜನರನ್ನು ತಲ್ಲಣಗೊಳಿಸಿವೆ. ಒಂದು ಘಟನೆಯಲ್ಲಿ ಜೂನ್ 18ರಿಂದ ಕಾಣೆಯಾಗಿದ್ದ ಬಾಲಕಿಯೊಬ್ಬಳ (15) ಶವ ಹಾಸ್ಟೆಲ್ ರೂಮ್‍ನಲ್ಲೇ ಕೊಳೆತ ರೀತಿಯಲ್ಲಿ ಪತ್ತೆಯಾಗಿದ್ದರೆ, ಇನ್ನೊಂದು ಘಟನೆಯಲ್ಲಿ ಪುಡಿ ರೌಡಿಯೊಬ್ಬನನ್ನು 100 ಮೀಟರ್ ವರೆಗೆ ಅಟ್ಟಾಡಿಸಿ ಕೊಲೆ ಮಾಡಲಾಗಿದೆ.

ಗಾಂಜಾ ಸೇವಿಸುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಲೆ ಮಾಡಿರುವ ಘಟನೆ ನಗರದ ಹರಳಹಳ್ಳಿಯಲ್ಲಿ ನಡೆದಿದೆ. ಹೇಮಾವತಿನಗರದ ನಿವಾಸಿ ಸಂತೋಷ್ (25) ಕೊಲೆಯಾದ ಯುವಕ.

ಈತ ದಾಳಿ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಸುಮಾರು 100 ಮೀಟರ್ ಗೂ ಹೆಚ್ಚು ಅಂತರ ಓಡಿದ್ದು, ಬಳಿಕ ಅತಿಯಾದ ರಕ್ತಸ್ರಾವದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಇಬ್ಬರು ಹಂತಕರು ಈತನಿಗೆ ಮಚ್ಚು ಬೀಸಿದ್ದು, ಈ ಘಟನೆ ನಾಗರಿಕರನ್ನು ತಲ್ಲಣಗೊಳಿಸಿದೆ.

Small time Rowdy was murdered in Hassan

ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯ ಮೇಡಹಳ್ಳಿ ಬಳಿ ಜೂನ್.21 ರಂದು ಮಧ್ಯಾಹ್ನ ಹಾಡುಹಗಲೇ ರೌಡಿ ಮಂಜುನಾಥ್‌ ಅಲಿಯಾಸ್ ವಾಟರ್‌ ಮಂಜನನ್ನು ಚರಣ್ ರಾಜ್‌ ಎಂಬಾತ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದನು. ಕೊನೆಗೆ ಆತನನ್ನು ಕೆಆರ್ ಪುರಂ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+