Prajwal Revanna: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಸಚಿವ ಜಮೀರ್ ಆಪ್ತ ಸೇರಿ ಇಬ್ಬರನ್ನು ಬಂಧಿಸಿದ ಎಸ್‌ಐಟಿ!
ಹಾಸನ ಮೇ 28: ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ತನಿಖೆಯಲ್ಲಿ ಇರುವ ಎಸ್‌ಐಟಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿದೆ.
ಹೌದು.... ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ್ ವಿಡಿಯೋದ ತನಿಖೆ ಚುರುಕುಗೊಂಡಿದ್ದು ವಿಡಿಯೋ ಬಿಡುಗಡೆ ಮಾಡಿದ ನವೀನ್ ಗೌಡ ಹಾಗೂ ಚೇತನ್ ಎಂಬ ಆರೋಪಿಗಳನ್ನು ಎಸ್‌ಐಟಿ ಬಂಧಿಸಿದೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡಿದವರನ್ನು ಬಂಧಿಸುವಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೆ ಕೊನೆಗೂ ಎಸ್‌ಐಟಿ ವಿಡಿಯೋ ಹರಿಬಿಟ್ಟವರನ್ನು ಬಂಧಿಸಿದೆ.
ಆರೋಪಿ ನವೀನ್ ಗೌಡ ಫೇಸ್‌ಬುಕ್‌ನಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಪೋಸ್ಟ್ ಹಾಕಿದ್ದನು. ಇದು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅಲ್ಲದೆ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
ನವೀನ್ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ನೋಡಲು ಈ ಪೇಜ್ ಅನ್ನು ಫಾಲೋ ಮಾಡಿ ಎಂದು ಮೊದಲ ಪೋಸ್ಟ್ ಅನ್ನು ಹಾಕಿದ್ದನು. ಕೆಲ ಸಮಯದ ಬಳಿಕ ಇದೇ ಫೆಸ್‌ಬುಕ್‌ನಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಲು ಕ್ಷಣ ಗಣನೆ ಎಂದು ಮತ್ತೊಂದು ಪೋಸ್ಟ್ ಮಾಡಿದ್ದನು.
ಇದನ್ನು ಗಮನಿಸಿದ್ದ ಜೆಡಿಎಸ್ ಪೋಸ್ಟ್‌ನ ಸ್ಕ್ರೀನ್ ಶಾಟ್ ತೆಗೆದು ಪೊಲೀಸ್ ದೂರು ನೀಡಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ನವೀನ್ ಗೌಡ ಫೇಸ್‌ಬುಕ್ ಅಕೌಂಟ್‌ನ್ನು ಡಿಲೀಟ್ ಮಾಡಿದ್ದನು. ಇದರಿಂದ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ನವೀನ್ ವಿಚಾರಣೆಗ ಹಾಜರಾಗದೇ ತಲೆಮರಿಸಿಕೊಂಡಿದ್ದನು.

ಆದರೆ ವಿಡಿಯೋ ಬಿಡುಗಡೆ ಮಾಡಿದವರನ್ನು ಇನ್ನೂ ಕೂಡ ಬಂಧಿಸಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದರು. ಅಲ್ಲದೆ ವಿಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಹೋರಾಟ ನಡೆಸಲು ಎಚ್‌ಡಿ ಕುಮಾರಸ್ವಾಮಿ ನಿರ್ಧರಿಸಿದ್ದರು. ಈ ಬಗ್ಗೆ ವಕೀಲರೊಂದಿಗೂ ಮಾತುಕತೆ ನಡೆದಿತ್ತು. ಈ ನಡುವೆ ಎಸ್‌ಐಟಿ ವಿಡಿಯೋ ಹರಿಬಿಟ್ಟವರನ್ನು ಬಂಧಿಸಿದೆ.
ನವೀನ್ ಗೌಡ ಹಾಸನ ಜಿಲ್ಲೆ ಬೇಲೂರು ತಾಲೂಕಿನವರು. ಅಲ್ಲದೆ ಈತ ಪ್ರಭಾವಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತನಾಗಿದ್ದಾನೆಂದು ತಿಳಿದು ಬಂದಿದೆ. ಅಲ್ಲದೆ ಸಚಿವ ಜಮೀರ್ ಅವರ ಜೊತೆಗೆ ನವೀನ್ ಗೌಡ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಈ ತಂಡ ವಿಚಾರಣೆಯನ್ನು ಚುರುಕುಗೊಳಿಸಿದೆ. ವೈರಲ್ ವಿಡಿಯೋ ಪ್ರಜ್ವಲ್ ರೇವಣ್ಣ ಅವರದ್ದೇ ಎನ್ನುವ ಆರೋಪವಿದೆ. ಅಲ್ಲದೆ ಇದೊಂದು ಅತ್ಯಾಚಾರ ಪ್ರಕರಣ ಎಂದೂ ದೂರಲಾಗಿದೆ. ಈ ಬಗ್ಗೆ ವಿಚಾರಣೆ ಮಾಡಲು ಪ್ರಜ್ವಲ್ ರೇವಣ್ಣ ಇಲ್ಲಿಲ್ಲ. ಪೆನ್‌ಡ್ರೈವ್ ಎಲ್ಲೆಡೆ ಹರಿದಾಡುತ್ತಿದ್ದಂತೆ ಪ್ರಜ್ವಲ್ ವಿದೇಶಕ್ಕೆ ಹಾರಿದ್ದಾರೆ. ಎಸ್‌ಐಟಿ ಮುಂದೆ ಮೇ ತಿಂಗಳಲ್ಲೇ ಹಾಜರಾಗುವುದಾಗಿ ಹೇಳಿದ್ದಾರೆ.
ಅವರ ವಿಚಾರಣೆ ಬಳಿಕವಷ್ಟೇ ವಿಡಿಯೋದ ಸತ್ಯಾಸತ್ಯಾತೆಯ ಬಗ್ಗೆ ತಿಳಿಯಲಿದೆ. ಹೀಗಾಗಿ ಎಲ್ಲರ ಗಮನ ಪ್ರಜ್ವಲ್ ರೇವಣ್ಣ ಅವರ ಆಗಮನದತ್ತ ನೆಟ್ಟಿದೆ.












Click it and Unblock the Notifications