Hemavathi Dam: ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ, ಇಂದಿನ ಒಳಹರಿವು ಭಾರೀ ಹೆಚ್ಚಳ
ಬೆಂಗಳೂರು, ಜುಲೈ 19: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಉಪನದಿಗಳು ಅವುಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯಗಳಲ್ಲಿ ಅತ್ಯಧಿಕ ನೀರು ಸಂಗ್ರಹವಾಗಿದೆ. ಈ ಪೈಕಿ ಹೇಮಾವತಿ ಜಲಾಶಯದಲ್ಲೂ ಸಹ ಅತ್ಯಧಿಕ ಒಳಹರಿವು ದಾಖಲಾಗಿದೆ. ಇಂದು ಜುಲೈ 19ರಂದು ನೀರಿನ ಸಂಗ್ರಹ ಮಟ್ಟ ಎಷ್ಟಿದೆ, ಅಪ್ಡೇಟ್ ಮಾಹಿತಿ ಇಲ್ಲಿದೆ.
ಹೇಮಾವತಿ ನದಿಯು ಕಾವೇರಿ ಉಪನದಿಗಳಲ್ಲಿ ಒಂದಾಗಿದೆ. ಈ ನದಿಗೆ ಹಾಸನ ಜಿಲ್ಲೆಯ ಗೂರೂರು ಗ್ರಾಮದ ಬಳಿ ಜಲಾಶಯ ನಿರ್ಮಿಸಲಾಗಿದೆ. ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಕಾಡು, ಕಣಿವೆಗಳಲ್ಲಿ ಕಳೆದ ಒಂದು ವಾರದಿಂದ ಹೆಚ್ಚು ಕಾಲ ಮಳೆ ಆರ್ಭಟಿಸುತ್ತಿದೆ. ನದಿ, ಕೊಳಗಳು ತುಂಬಿ ಹರಿಯುತ್ತಿವೆ. ಮುಂಗಾರು ಎಲ್ಲೆಡೆ ಆರ್ಭಟಿಸುತ್ತಿದೆ. ಕೊಡಗು, ಮಡಿಕೇರಿ, ಸೋಮವಾರಪೇಟೆ, ಮೈಸೂರು ಭಾಗಗಳಲ್ಲಿ ಜೋರು ಮಳೆಗೆ, ರಸ್ತೆಗಳು ಜಲಾವೃತಗೊಂಡಿವೆ. ರಸ್ತೆ ಸೇತುವೆಗಳು ನದಿಯ ರಭಕ್ಕೆ ಕೊಚ್ಚಿ ಹೋಗುತ್ತಿರುವುದು ಸಾಮಾನ್ಯ ಎಂಬಂತಾಗಿದೆ.

ಜಲಾಶಯ ಭರ್ತಿ ಕೆಲವೇ ಅಡಿಗಳು ಬಾಕಿ
ಈ ಹೇಮಾವತಿ ನದಿ ಜಲಾನಯನ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಆದ ಪರಿಣಾಮ ಹೇಮಾವತಿ ಜಲಾಶಯದ ಒಟ್ಟು ನೀರಿನ ಸಂಗ್ರಹಣೆ 2922 ಅಡಿಯಲ್ಲಿ ಸದ್ಯ 2916.10 ಅಡಿವರೆಗೆ ನೀರು ತುಂಬಿಕೊಂಡಿದೆ. ಈ ಜಲಾಶಯವು ಒಟ್ಟು 37.10 ಟಿಎಂಸಿ
ಸಾಮರ್ಥ್ಯ ಹೊಂದಿದೆ. ಈ ಪೈಕಿ 31.626 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ತಿಳಿಸಿದೆ.
35,871 ಕ್ಯೂಸೆಕ್ ಒಳಹರಿವು
ಇನ್ನೂ ಹೇಮಾವತಿ ಜಲಾಶಯದ ಶುಕ್ರವಾರ (ಜುಲೈ 19) ಒಳಹರಿವು ಬರೋಬ್ಬರಿ 35,871 ಕ್ಯೂಸೆಕ್ ಇದೆ. ಇಷ್ಟು ಪ್ರಮಾಣದ ನೀರು ಕಳೆದ ಒಂದು ವಾರದಲ್ಲೇ ಅತ್ಯಧಿಕ ಒಳಹರಿವು ಇದಾಗಿದೆ.
ಜಲಾಶಯದಿಂದ ಮೂಲಕ ನದಿಗೆ ಗಂಟೆಗೆ 1500 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಒಟ್ಟಾರೆಯಾಗಿ ನೋಡುವುದಾದರೆ, ಈ ಹೇಮಾವತಿ ಜಲಾಶಯದಲ್ಲಿ ಇದುವರೆಗೆ ಶೇಕಡಾ 85.24ರಷ್ಟು ನೀರು ಭರ್ತಿಯಾಗಿದೆ.
ಕಾವೇರಿ, ಹೇಮಾವತಿ, ಹಾರಂಗಿ, ಭದ್ರಾ ಸೇರಿದಂತೆ ವಿವಿಧ ಜಲಾನಯನ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ.
ರಾಜ್ಯಕ್ಕೆ ಐದು ದಿನ ಭಾರೀ ಮಳೆ ಮುನ್ಸೂಚನೆ
ಮುಂದಿನ ಐದು ದಿನ ಇದೇ ರೀತಿ ಮಳೆ ಮುಂದುವರಿಯಲಿದೆ. ಮಲೆನಾಡು ಹಾಗೂ ಕರಾವಳಿ ಭಾಗ ಸೇರಿ ಒಟ್ಟು ಆರು ಜಿಲ್ಲೆಗಳಿಗೆ ಅತ್ಯಧಿಕ ಮಳೆ ಬರಲಿದ್ದು, ಎರಡು ರೆಡ್ ಅಲರ್ಟ್ ನೀಡಲಾಗಿದೆ. ನಂತರ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಕೆಲವು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ಕೊಡಲಾಗಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications