ಮೇಲ್ಜಾತಿಗೆ ಮೀಸಲಾತಿ, ಬಿಜೆಪಿ ಹಾಕಿರುವ ಗಾಳ: ದೇವೇಗೌಡ
ಹಾಸನ, ಜನವರಿ 11: ಆರ್ಥಿಕವಾಗಿ ಹಿಂದುಳಿದವರಿಗೆ ಮೇಲ್ಜಾತಿಯವರಿಗೆ ಮೀಸಲಾತಿ ಕೊಟ್ಟಿರುವ ಕೇಂದ್ರ ಸರ್ಕಾರದ ನಿರ್ಣಯ ಚುನಾವಣೆ ಗಿಮಿಕ್ ಅಷ್ಟೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ಮೇಲ್ವರ್ಗದ ಜನರ ಮತ ಸೆಳೆಯು ಉದ್ದೇಶದಿಂದ ಈ ಕಾಯ್ದೆ ಜಾರಿಗೆ ತಂದಿದೆ ಎಂದು ದೇವೇಗೌಡ ಅವರು ಟೀಕಿಸಿದರು.
ಇತ್ತೀಚೆಗೆ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆ ಕುಗ್ಗುತ್ತಿದೆ ಹಾಗಾಗಿ ಅವರು ಮೀಸಲಾತಿಯ ಅಸ್ತ್ರ ಪ್ರಭಾವಿಸಿದ್ದಾರೆ. ಸಮುದಾಯದ ವಿಷಯ ಆಗಿರುವ ಕಾರಣ ಚುನಾವಣೆಯ ಭೀತಿಯಿಂದ ಇತರ ಪಕ್ಷಗಳು ಅದಕ್ಕೆ ಒಪ್ಪಿಗೆ ನೀಡಿವೆ ಎಂದು ದೇವೇಗೌಡ ಅವರು ವಿಶ್ಲೇಷಿಸಿದರು.

ಭಾರತವು ರೈತಾಪಿ ದೇಶ. ಇಲ್ಲಿನ ಎಲ್ಲರಿಗೂ ಕೆಲಸ ಕೊಡಲು ಯಾವ ಪ್ರಧಾನಿ, ಸಿಎಂ ಬಂದರೂ ಸಹ ಸಾಧ್ಯವಾಗದ ವಿಷಯ. ಇಲ್ಲಿ ಖಾಸಗಿ ಹಾಗೂ ಕೃಷಿ ಉದ್ದಿಮೆಯಲ್ಲಿ ಹಲವು ಜನ ದುಡಿಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಸ್ಪರ್ಧಿಸುವುದು ಖಾತ್ರಿ ಆಗಿದೆ ಆದರೆ ಅವರು ಎಷ್ಟು ಸೀಟು ನಮಗೆ ನಿಡುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಅವರ ಜೊತೆ ಮಾತನಾಡಬೇಕು ಎಂದು ದೇವೇಗೌಡ ಹೇಳಿದರು.












Click it and Unblock the Notifications