Get Updates
Get notified of breaking news, exclusive insights, and must-see stories!

ಹಾಸನ: ಲೂಟಿ ಸರ್ಕಾರವನ್ನು ತೊಲಗಿಸಿ, ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ, ಹೆಚ್‌ಡಿಕೆ ಕಿಡಿ

ಹಾಸನ, ಸೆಪ್ಟೆಂಬರ್‌, 13: ಕಣ್ಣಲ್ಲಿ ನೀರು ಬಂದರೆ ಕುಮಾರಸ್ವಾಮಿ ಮೊಸಳೆ ಕಣ್ಣೀರು ಹರಿಸಲು ಹಾಸನ ಜಿಲ್ಲೆಗೆ ಬಂದಿದ್ದ ಎಂದು ಕೆಲವರು ಪ್ರಚಾರ ಮಾಡುತ್ತಾರೆ. ನಾನು ನಾಗಮಂಗಲ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುವಾಗ 70 ವರ್ಷ ರಾಜಕೀಯ ಮಾಡಿದ ದೇವೇಗೌಡರ ಸ್ಥಿತಿ ನೋಡಿ ಕಣ್ಣೀರು ಹಾಕಿದ್ದೇನೆ. ನನಗೆ ಸ್ವರೂಪ್ ಬೇರೆ ಅಲ್ಲ ಪ್ರಜ್ವಲ್, ಸೂರಜ್ ಬೇರೆ ಅಲ್ಲ, ಇವರೆಲ್ಲರೂ ನಮ್ಮ ಕುಟುಂಬ. ಲೂಟಿ ಸರ್ಕಾರ ತೆಗೆದು ಜನಪರ ಸರ್ಕಾರವನ್ನು 2023ರಲ್ಲಿ ಅಧಿಕಾರಕ್ಕೆ ತರುತ್ತೇವೆ ಎಂದು ಹಾಸನದಲ್ಲಿ ಶಪಥ ಮಾಡಿದರು.

ಹಾಸನ ನಗರದ ರಿಂಗ್ ರಸ್ತೆಯ ಬಡಾವಣೆಯಲ್ಲಿ ಮಾಜಿ ಶಾಸಕ ದಿವಂಗತ ಹೆಚ್.ಎಸ್ ಪ್ರಕಾಶ್ ರವರ 71ನೇ ಹುಟ್ಟುಹಬ್ಬ ಹಾಗೂ ಪುನರ್ ಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜೆಡಿಎಸ್‌ ಮುಖಂಡ ಹೆಚ್.ಪಿ.ಸ್ವರೂಪ್ ನೇತೃತ್ವದಲ್ಲಿ ಕಾರ್ಯಕರ್ತರು, ಸ್ನೇಹಿತರು ಕಾರ್ಯಕ್ರಮವನ್ನು ನಡೆಸಿದ್ದರು. ಸಮಾರಂಭವನ್ನು ಉದ್ಘಾಟಿಸಿದ ಶ್ರೀ ಆದಿಚುಂಚನಗಿರಿ ಶಾಖ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮೊದಲು ಆಶೀರ್ವಚನ ನೀಡಿದರು.

ನಂತರ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇದೆ ಎಂದು ಜಿಲ್ಲೆಯ ಜನತಗೆ ಸಂದೇಶ ನೀಡುತ್ತೇನೆ. 1962ರಲ್ಲಿ ಹೊಳೆನರಸೀಪುರದ ಬಡ ಯುವಕ ದೇವೇಗೌಡ ಅವರು ಚುನಾವಣೆಯಲ್ಲಿ ನಿಂತು ಪಕ್ಷೇತರಾರಾಗಿ ಜಯಗಳಿಸಿ ದೇಶದ ಪ್ರಧಾನಿ ಆಗಿದ್ದರು. ರಾಜಕೀಯವಾಗಿ ಹಾಸನ ಜಿಲ್ಲೆಯ ಜೊತೆ ನನ್ನ ಒಡನಾಟ ಕಡಿಮೆ ಇದೆ. ನನ್ನ ತಂದೆ ತಾಯಿ ನನಗೆ ಹಾಸನದಲ್ಲಿ ಜನ್ಮ ನೀಡಿದ್ದಾರೆ. ನಾವೆಲ್ಲರೂ ಬಡ ರೈತನ ಮಕ್ಕಳು ಎಂದರು.

 ಬಡವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ

ಬಡವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ

ಇನ್ನು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು, ಗಾಲ್ಫ್‌ ಕ್ಲಬ್ ಸ್ಥಾಪನೆ ಎಲ್ಲಾವನ್ನು ನೋಡಿದ್ದೇನೆ. ರೇವಣ್ಣನವರ ಹಳ್ಳಿಯಲ್ಲಿ ಬೆಳೆದು ಬಂದಿದ್ದಾರೆ. ಒರಟು ಸ್ವಭಾವ ನಡವಳಿಕೆ ರೇವಣ್ಣನವರಲ್ಲಿ ಬಂದಿದೆ. ಇದು ಕೆಲವು ಬಾರಿ ಕೆಲವರಿಗೆ ನೋವು ಕೊಟ್ಟಿದೆ. ಆದರೆ ಜಿಲ್ಲೆಯ ಸಣ್ಣ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ದುಡಿಮೆ ಮಾಡಿದ್ದಾರೆ. 2007ನೇ ಸಾಲಿನಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕನಸು ಜಿಲ್ಲೆಯ ರೈತ ಬೆಳೆಯುವ ಆಲೂಗಡ್ಡೆ, ಕಾಫಿ, ಶುಂಠಿಯನ್ನು ಹೊರದೇಶಗಳಿಗೆ ರಪ್ತು ಮಾಡಲು ಏರ್ ಕಾರ್ಗೋ ತರಲು ಯತ್ನಿಸಿದರು. ಹಾಸನ ನಗರದ ಸುತ್ತಮುತ್ತ ಬಡಾವಣೆ ರಚನೆ ಮಾಡಲು ದೇವೇಗೌಡರ ಮಕ್ಕಳು ಬಂದಿಲ್ಲ. ಬಡವರು ಅಂಗವಿಕಲ ಮಕ್ಕಳಿಗೆ ಸಹಾಯ ಮಾಡುವುದು ದೇವೇಗೌಡರ ಮತ್ತು ಅವರ ಮಕ್ಕಳ ಕಾರ್ಯವಾಗಿದೆ. ಇಲ್ಲಿನ ಶಾಸಕರು ಇದನ್ನು ಆರ್ಥ ಮಾಡಿಕೊಳ್ಳಬೇಕು ಎಂದರು.

"ಸಿದ್ದರಾಮಯ್ಯ ಒಂದು ರುಪಾಯಿ ಕೊಡಲಿಲ್ಲ"

ಆಲೂಗಡ್ಡೆ ಬೆಳೆ ಬೆಳೆದು ನಷ್ಟದಲ್ಲಿರುವ ಕುಟುಂಬಕ್ಕೆ ರೇವಣ್ಣನವರು ದೊಡ್ಡ ಹೋರಾಟ ಮಾಡಿ 50 ಕೋಟಿ ಹಣ ತಂದರು. ಅರಸೀಕೆರೆ ಶಾಸಕರು ಉಪವಾಸ ಮಾಡಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆದರು. ಆಗ ಸಿದ್ದರಾಮಯ್ಯ ಅವರು ಒಂದು ರುಪಾಯಿ ಕೊಡಲಿಲ್ಲ. ನಾನು ಅಧಿಕಾರಕ್ಕೆ ಬಂದು 180 ಕೋಟಿ ಹಣವನ್ನು ತೆಂಗು ಬೆಳೆಗಾರರಿಗೆ ನೀಡಿದ್ದೇನೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಸನ ಪ್ರಚಾರಕ್ಕೆ ಬಂದು ಜೆಡಿಎಸ್ ಪಕ್ಷ ಬಿಜೆಪಿಯ ಬಿಟಿಂ ಎಂದು ಪ್ರಚಾರ ಮಾಡದೇ ಹೋಗಿದ್ದರೆ. ಪ್ರಕಾಶ್ ಸೋಲುತಿರಲಿಲ್ಲ, ಮುಸ್ಲಿಂ ಮತದಾರರು ವೋಟ್‌ಗಳು ಜೆಡಿಎಸ್, ಬಿಜೆಪಿಗೆ ಹೋಗುತ್ತವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರು. ಅದರ ಪ್ರತಿಫಲವಾಗಿ ಶಾಸಕರಾಗಿ ಪ್ರೀತಂ ಜೆ. ಗೌಡರು ಜಯಗಳಿಸಿದ್ದಾರೆ. ಅವರು ಸ್ವಂತ ದುಡಿಮೆ ಮೇಲೆ ಶಾಸಕರಾಗಿ ಆಯ್ಕೆ ಆಗಿಲ್ಲ. ಹಾಸನ- ಬೆಂಗಳೂರು ರಸ್ತೆ, ರೈಲ್ವೇ ಬ್ರಾಡ್ ಗೇಜ್ ಆಗಲು ಕೆಲಸ ಮಾಡಿದ್ದು ಜನತಾದಳ ಸರ್ಕಾರ ಎಂದರು.

 ರಾಜ್ಯದ ವಿವಿಧೆಡೆ 189 ಕಾಲೇಜುಗಳ ನಿರ್ಮಾಣ

ರಾಜ್ಯದ ವಿವಿಧೆಡೆ 189 ಕಾಲೇಜುಗಳ ನಿರ್ಮಾಣ

ಬಿಜೆಪಿ ಸರ್ಕಾರಕ್ಕೆ ಸಕಲೇಶಪುರ -ಮಂಗಳೂರು ರಸ್ತೆ ಮಾಡಲು ಸಾಧ್ಯ ಆಗಿಲ್ಲ. ಹಾಸನ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಮಾಡಿ ಬಡವರ ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟಿದ್ದೇವೆ. ಸ್ವಾತಂತ್ರ್ಯ ಬಂದ ನಂತರ ಈ ರಾಜ್ಯದಲ್ಲಿ ಕೆವಲ 69 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇದ್ದವು. ನಾವು ಒಂದೇ ವರ್ಷದಲ್ಲಿ ರಾಜ್ಯದ ವಿವಿಧ ಕಡೆ 189 ಕಾಲೇಜುಗಳನ್ನು ಕೊಟ್ಟಿದ್ದೇವೆ. ರೇವಣ್ಣನವರ ನಡವಳಿಕೆ ಸರಿಪಡಿಸುತ್ತೇನೆ. ಅವನ ಬಗ್ಗೆ ಯಾರು ಅಸಮಾಧಾನ ವ್ಯಕ್ತಪಡಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

 ಜಯದ ಸವಾಲಿನ ಮಾತನಾಡಿದ ಹೆಚ್‌.ಡಿ.ಕೆ

ಜಯದ ಸವಾಲಿನ ಮಾತನಾಡಿದ ಹೆಚ್‌.ಡಿ.ಕೆ

ಮುಂದಿನ ಚುನಾವಣೆಯಲ್ಲಿ 123 ಸೀಟು ಜಯಗಳಿಸಲು ಹಾಸನ ವಿಧಾನಸಭೆ ಕ್ಷೇತ್ರದಲ್ಲಿ 7ಕ್ಕೆ 7ಸ್ಥಾನ ಗೆಲ್ಲಿಸಿಕೊಡಿ. ಹಾಸನ ಕುಟುಂಬದ ಮತದಾರರ ವಿರುದ್ಧ ಯಾವುದೇ ನಿರ್ಣಯ ಆಗುವುದಿಲ್ಲ. ನಿಮಗೆ ಯಾವುದೇ ಅಂತಕ ಬೇಡ. ವಿಧಾನಸಭೆ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿ, ಜಯಗಳಸುವ ಸವಾಲನ್ನು ತೆಗೆದುಕೊಂಡಿದ್ದೇವೆ. ರೇವಣ್ಣನವರನ್ನು, ನಮ್ಮ ಕುಟುಂಬವನ್ನು ಯಾರು ಬೇರ್ಪಡಿಸಲು ಆಗುವುದಿಲ್ಲ. ನಮ್ಮ ಕುಟುಂಬದ ಎಲ್ಲರೂ ಸಹಮತದೊಂದಿಗೆ ಈ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ಸವಾಲನ್ನು ಸ್ವೀಕಾರ ಮಾಡಿದ್ದೇವೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+