ಹಾಸನದಲ್ಲಿ ಹಿಂಸೆಗೆ ತಿರುಗಿದ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ
ಹಾಸನ, ಜುಲೈ 24: ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಗಾರ್ಮೆಂಟ್ಸ್ ನೌಕರರು ಕೈಗೊಂಡಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಗಾರ್ಮೆಂಟ್ಸ್ ಮೇಲೆ ನೌಕರರು ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇಡೀ ಗಾರ್ಮೆಂಟ್ಸ್ ಆವರಣ ರಣರಂಗವಾಗಿದೆ.
ಹಾಸನದ ಹಿಮ,ತ್ ಸಿಂಕಾ ಗಾರ್ಮೆಂಟ್ಸ್ ನೌಕರರು ಎಚ್ ಆರ್ ವಿರುದ್ಧ ಹಲ್ಲೆ ಆರೋಪವನ್ನು ಮಾಡಿದ್ದು, ಈ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ಕೈಗೊಂಡಿದ್ದರು.

ಇಂದು ಪ್ರತಿಭಟನಾ ನಿರತ ನೌಕರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅಶ್ರವಾಯು ಪ್ರಯೋಗ ಮಾಡಿದ್ದಾರೆ. ಲಾಠಿ ಚಾರ್ಜ್ ನಲ್ಲಿ ಹಲವು ನೌಕರರು ಗಾಯಗೊಂಡಿದ್ದಾರೆ. ವಾಹನಗಳೂ ಜಖಂಗೊಂಡಿವೆ.












Click it and Unblock the Notifications