Pen Drive Case: ನನಗೇನು ಗೊತ್ತಿಲ್ಲ... ನನಗೇನು ಗೊತ್ತಿಲ್ಲ.... ಎಂದ ಹೆಚ್‌ಡಿ ರೇವಣ್ಣ
ಹಾಸನ ಮೇ 22: 'ಮಧುಮಗನನ್ನು ಬಿಟ್ಟು ಮದುವೆಗೆ ಹೋದರಂತೆ' ಎಂಬ ಮಾತು ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಸರಿಹೊಂದುತ್ತದೆ. ಯಾಕೆಂದರೆ ಆರೋಪ ಇರುವುದು ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ. ಆದರೆ ಅವರು ಸದ್ಯ ಬೆಂಗಳೂರಿನಲ್ಲಿ ಇಲ್ಲ. ವಿದೇಶದಲ್ಲಿದ್ದಾರೆನ್ನುವ ಮಾತಿದೆ. ಅವರನ್ನು ವಾಪಸ್ ಕರೆಸುವ ಪ್ರಯತ್ನ ಅದೆಷ್ಟರಮಟ್ಟಿಗೆ ನಡೆಯುತ್ತಿದೆಯೋ ಏನೋ? ಆದರೆ ಉಳಿದ ಕೆಲಸಗಳು ಮಾತ್ರ ಭರದಿಂದ ಸಾಗಿವೆ. ಈ ಬಗ್ಗೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು... ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಅಶ್ಲೀಲ ವೀಡಿಯೋ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಇದರ ಬಗ್ಗೆ ತನಿಖೆ ನಡೆಸಲು ಪ್ರಜ್ವಲ್ ರೇವಣ್ಣ ಅವರೇ ಇಲ್ಲ. ಅವರಿಗೆ ವಾಪಸ್ ಬರಲು ನೋಟೀಸ್ ನೀಡಿದರೂ ಅವರು ವಿದೇಶದಿಂದ ವಾಪಾಸ್ಸಾಗಿಲ್ಲ. ಇದರಿಂದ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನಕ್ಕೆ ಪುಷ್ಠಿ ಸಿಗುತ್ತಿದೆ.

ಪುತ್ರ ಪ್ರಜ್ವಲ್ ರೇವಣ್ಣ ಅವರ ವಿಚಾರವಾಗಿ ಮೊದಲ ಬಾರಿಗೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಇಂದು ಹೊಳೆನರಸೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇವಣ್ಣ, 'ನನಗೆ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಏನೋ ಗೊತ್ತಿಲ್ಲ. ಅವರ ಬಗ್ಗೆ ಯಾವ ಮಾಹಿತಿ ನನಗೆ ಇಲ್ಲ' ಎಂದು ರೇವಣ್ಣ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ವಿಚಾರ ಏನು ಗೊತ್ತಿಲ್ಲ. ನಾನು ಯಾರ ಬಗ್ಗೆ ಮಾತನಾಡಲ್ಲ ನನಗೇನೂ ಗೊತ್ತಿಲ್ಲ. ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದು ಅವರು ಹೇಳಿದರು.

'ನಾನು ಯಾರ ಬಗ್ಗೆಯೂ ಮಾತನಾಡಲ್ಲ. ಅದರ ಬಗ್ಗೆ ನನಗೇನು ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ವಿಚಾರ ನನಗೇನು ಗೊತ್ತಿಲ್ಲ' ಎಂದರು. 25 ವರ್ಷ ನಾನು ಶಾಸಕನಾಗಿ ಹಾಸನದಲ್ಲಿ ಕೆಲಸ ಮಾಡಿದ್ದೇನೆ. ಯಾರೂ ಧೃತಿಗೆಡುವುದು ಬೇಡ. ಇಂದು ಜಿಲ್ಲೆಯ ಶಾಸಕರ ಜೊತೆ ಚರ್ಚಿಸಿದ್ದೇನೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಏನೂ ಹೇಳಲ್ಲ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಾನು ಅದರ ಬಗ್ಗೆ ಏನೂ ಮಾತನಾಡಲ್ಲ ಎಂದರು.
ಪೆನ್‌ಡ್ರೈವ್ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಹೆಚ್‌ಡಿ ರೇವಣ್ಣ ಟೆಂಪಲ್ ರನ್ ಶುರು ಮಾಡಿದ್ದಾರೆ. ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಮನೆಯಲ್ಲಿ ಹೋಮ ಹವನ ಮಾಡಿಸುತ್ತಿದ್ದಾರೆ. ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಟುಂಬಸ್ಥರ ಹೆಸರಿನಲ್ಲಿ ಅರ್ಚನೆ, ಪೂಜೆಗಳನ್ನು ಮಾಡಿಸುತ್ತಿದ್ದಾರೆ.












Click it and Unblock the Notifications