ಉದ್ಘಾಟನೆಗೂ ಮೊದಲೇ 3ನೇ ಬಾರಿಗೆ ಕುಸಿದ ಬಿದ್ದ ಸೇತುವೆ
ಹಾಸನ, ಆಗಸ್ಟ್ 28 : ಹಾಸನದಲ್ಲಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಮುನ್ನವೇ 3ನೇ ಬಾರಿಗೆ ಕುಸಿದು ಬಿದ್ದಿದೆ. ಲೋಕೋಪಯೋಗಿ ಸಚಿವರ ತವರು ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.
ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಬಳಿ ನಿರ್ಮಾಣವಾಗಿದ್ದ ರೈಲ್ವೆ ಮೇಲ್ಸೇತುವೆ ಕುಸಿದು ಬಿದ್ದಿದೆ. 3ನೇ ಬಾರಿಗೆ ರೈಲ್ವೆ ಮೇಲ್ಸೇತುವೆ ಕುಸಿದುಬಿದ್ದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ತವರು ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದ್ದು, ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಗ್ಗೆ ಜನರ ಪ್ರಶ್ನೆ ಎತ್ತಿದ್ದಾರೆ. ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೊಂಡು ರೈಲು ಸಂಚರಿಸಿದರೆ ಏನಾಗಬಹುದು? ಎಂದು ಅಧಿಕಾರಿಗಳನ್ನು ಕೇಳುತ್ತಿದ್ದಾರೆ.
ಹಾಸನ-ಹೊಳೆನರಸೀಪುರ ಮಾರ್ಗದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ನಡೆಸಲಾಗುತ್ತದೆ. ಸುಮಾರು 4 ಕೋಟಿ ವೆಚ್ಚದ ಕಾಮಗಾರಿ ಕಳೆದ ವರ್ಷ ಆರಂಭವಾಗಿದೆ. ಈಗ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.
ಆದರೆ, ನಿರ್ಮಾಣ ಹಂತದಲ್ಲಿಯೇ ಮೂರು ಬಾರಿ ಸೇತುವೆ ಕುಸಿದಿದೆ. ಜುಲೈ 21ರಂದು ಸೇತುವೆಯ ಸ್ಲ್ಯಾಬ್ ಕುಸಿದಿತ್ತು. ಆದರೆ, ಸ್ಲ್ಯಾಬ್ ನಾವೇ ತೆಗೆದಿದ್ದೇವೆ ಎಂದು ಹೇಳಿ ಇಂಜಿನಿಯರ್‌ಗಳು ಹೇಳಿದ್ದರು.












Click it and Unblock the Notifications