ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ- ಮಾರನಹಳ್ಳಿ ರಸ್ತೆ ವಿಸ್ತರಣೆಗೆ 3 ಸಾವಿರ ಮರಕ್ಕೆ ಕೊಡಲಿ

|
Google Oneindia Kannada News

ಹಾಸನ, ಸೆಪ್ಟೆಂಬರ್ 03 : ಹಾಸನ-ಮಾರನಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಈ ರಸ್ತೆ ಅಗಲೀಕರಣ ಕಾಮಗಾರಿಗೆ 3000ರ ಮರಗಳನ್ನು ಕಡಿಯಲಾಗುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆ ಈಗಾಗಲೇ ಒಪ್ಪಿಗೆ ಕೊಟ್ಟಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಸನ-ಮಾರನಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ 75ನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಲಿದೆ. ಅರಣ್ಯ ಇಲಾಖೆ ಒಪ್ಪಿಗೆ ಪಡೆದಿರುವ ಪ್ರಾಧಿಕಾರ, ಮರಗಳನ್ನ ಕತ್ತರಿಸಲು ಈಗಾಗಲೇ ಟೆಂಡರ್ ಆಹ್ವಾನಿಸಿದೆ.[ಬೆಂ-ಮೈಸೂರು 6 ಪಥದ ರಸ್ತೆ ಕಾಮಗಾರಿ ನವೆಂಬರಿನಲ್ಲಿ ಆರಂಭ]

roads

ಹಾಸನದಿಂದ ಬಂಟ್ವಾಳ ಕ್ರಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿ 75ನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತನೆ ಮಾಡಲಾಗುತ್ತದೆ. ಈ ರಸ್ತೆ ವಿಸ್ತರಣೆಗಾಗಿ 3,070 ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದ್ದು, ಈ ಮರಗಳ ಮೌಲ್ಯ ಸುಮಾರು 1.4 ಕೋಟಿಯಾಗಿದೆ.[ಗೋವಾಕ್ಕೆ ಹೆದ್ದಾರಿ, 37 ಸಾವಿರ ಮರ ಕಾಪಾಡೋರು ಯಾರ್ರಿ?]

ಅರಣ್ಯ ಇಲಾಖೆ ಮರಗಳನ್ನು ಕತ್ತರಿಸಲು ಅನುಮತಿ ಮಾಡಿದೆ. ನಿಯಮಾವಳಿಗಳ ಪ್ರಕಾರ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ 1 ಮರದ ಬದಲಿಗೆ 10 ಗಿಡಗಳನ್ನು ನೆಡಬೇಕು ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ. ಗಿಡಗಳನ್ನು ಅರಣ್ಯ ಇಲಾಖೆಯೇ ಒದಗಿಸಲಿದೆ.[ನಾವು ಎಲ್ಲಿ ಹೋಗಿ ಬಿದ್ದು ಸಾಯಬೇಕು ? ದಯವಿಟ್ಟು ತಿಳಿಸಿ]

English summary
The National Highways Authority of India (NHAI) invites tenders to bring down trees along the Hassan-Maranahalli stretch. NHAI which has taken up widening of NH-17 from Hassan to Bantwal Cross Road, will soon cut over 3,000 trees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X