ಕೋಡಿ ಮಠಕ್ಕೆ ಸಚಿವ ಚಲುವರಾಯಸ್ವಾಮಿ ದಿಢೀರ್‌ ಭೇಟಿ, ಶ್ರೀಗಳ ಜೊತೆ ಗುಪ್ತ ಮಾತುಕತೆ

ಹಾಸನ, ಆಗಸ್ಟ್‌, 16: ರಾಜಕೀಯ ನಾಯಕರ ಭವಿಷ್ಯ ನುಡಿಯುವುದರಲ್ಲಿ ಕೋಡಿ ಮಠದ ಶ್ರೀಗಳು ಪ್ರಸಿದ್ಧಿಯಾಗಿದ್ದಾರೆ. ಅಲ್ಲದೆ ರಾಜಕಾರಣಿಗಳು ಶ್ರೀಗಳನ್ನು ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಇಂದು (ಆಗಸ್ಟ್‌ 16) ಕೃಷಿ ಸಚಿವ ಚಲುವರಾಯಸ್ವಾಮಿ ಇಂದು ಕೋಡಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

N.Chaluvaraya Swamy visits Kodi Mutt

ಸಚಿವ ಚಲುವರಾಯಸ್ವಾಮಿ ಅವರು ಪತ್ನಿ ಧನಲಕ್ಷ್ಮಿ ಜೊತೆ ಹಾಸನ‌‌ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿ ಮಠಕ್ಕೆ ಭೇಟಿ ನೀಡಿ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅವರ ಆಶೀರ್ವಾದ ಪಡೆದರು. ಇನ್ನು ಸಚಿವರು ರಾಜಕೀಯದಲ್ಲಿ ತಮ್ಮ ಮೇಲಿನ ಹಲವು ಆರೋಪಗಳ ನಡುವೆ ಕೋಡಿ ಮಠಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕೋಡಿ ಮಠದ ಶ್ರೀಗಳ ಜೊತೆ ಚಲುವರಾಯಸ್ವಾಮಿ ಚರ್ಚೆ

ಅರಸೀಕೆರೆ ತಾಲೂಕಿನ, ಹಾರನಹಳ್ಳಿ ಗ್ರಾಮದಲ್ಲಿನ ಕೋಡಿ ಮಠದ ಶ್ರೀಗಳನ್ನು ಭೇಟಿ ಬಳಿಕ ಮಾತನಾಡಿದ ಅವರು, ನಾನು ಶಾಸಕನಾಗಿ, ಮಂತ್ರಿಯಾಗಿ ಬರಬೇಕು ಎಂದು ಬಂದಿದ್ದೇನೆ ಎಂದು ಸ್ವಾಮೀಜಿಗೆ ಹೇಳಿದರು. ಇನ್ನು ಇದೇ ವೇಳೆ ಗೌಡ್ರನ್ನೂ ನಿಮ್ಮ ಜೊತೆ ಸೇರಿಸಿಕೊಳ್ಳಿ ಎಂದು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಚಿವರಿಗೆ ಸೂಚನೆ ನೀಡಿದರು.

ಗೌಡನನ್ನು ನಮ್ಮ ಜೊತೆ ಸೇರಿಸಿಕೊಂಡು ಮಂತ್ರಿನೇ ಮಾಡೋಣ ಅಂತಾ ಆಗಿತ್ತು. ಅದೇನೋ ಅದೃಷ್ಟ ನೀವು ಸರಿಯಾಗಿ ಆಶೀರ್ವಾದ ಮಾಡಿಲ್ಲ ಎಂದು ಚೆಲುವರಾಯಸ್ವಾಮಿ ಮಠದ ಶ್ರೀಗಳಿಗೆ ಹೇಳಿದರು.

ಸಿದ್ದರಾಮಯ್ಯ ಅವರು ಫೋನ್ ಮಾಡಿದರೂ ನಿಮ್ಮ ಕಡೆ ಮಾತಾನಾಡಲ್ಲ ಅಂದೆ. ಯಾಕೆ ಗುರುಗಳೇ ಅಂದರು. ಆಗ ಕೊಟ್ಟ ಮಾತಿಗೆ ತಪ್ಪಿದ್ದೀಯಾ, ಇನ್ ಏನಪ್ಪ ಮಾತನಾಡೋದು ಅಂದೆ. ನಾನು ಅವನನ್ನೇ ಕರೆದುಕೊಂಡು ಬರುತ್ತೇನೆ ಅಂದಿದ್ದೆ. ಹೀಗೆ ಇಬ್ಬರು ಒಂದು ಗಂಟೆ ಮಾತನಾಡಿದ್ದೀವಿ. ಆಗ ಶಿವಲಿಂಗೇಗೌಡರನ್ನು ಮಂತ್ರಿ ಮಾಡೋಣ ಅಂದಿದ್ದರು ಎಂದು ಕೋಡಿಮಠ ಶ್ರೀ ಹೇಳಿದರು.

ಈ ವೇಳೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ಇಲ್ಲ ಶಿವಲಿಂಗೇಗೌಡರನ್ನು ಮಂತ್ರಿ ಮಾಡಬೇಕು ಅಂದುಕೊಂಡಿದ್ದೆವು. ಆದರೆ ಲಿಂಗಾಯಿತರು ಹಾಗೂ ಡಾ.ಸುಧಾಕರ್‌ ಹೆಸರು ಬಂದಿದ್ದರಿಂದ ಕೈಬಿಟ್ಟೋಯಿತು. ನಮ್ಮ ಪಕ್ಷದಲ್ಲು ಎಲ್ಲಾ ಸೀನಿಯರ್ ಇದ್ದಾರೆ. ಡಾ.ಸುಧಾಕರ್‌ ಅವರು ಇರಲಿಲ್ಲ ಅಂದಿದ್ದರೆ ಕ್ಲಿಯರ್ ಆಗಿ ಆಗಿರೋದು ಎಂದರು.

Agriculture minister N.Chaluvaraya Swamy visits arasikere taluk's Kodi mutt today,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+