ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
ಹಾಸನ, ಜೂನ್ 09:ಪುಲಿಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಹಾಸನ ಸಮೀಪ ಅಪಘಾತಕ್ಕೆ ಈಡಾಗಿದ್ದು ಅದೃಷ್ಟವಷಾತ್ ಯಾವುದೇ ಅಪಾಯವಿಲ್ಲ ಶಾಸಕರು ಪಾರಾಗಿದ್ದಾರೆ.
ಧರ್ಮಸ್ಥಳಕ್ಕೆ ತೆರಳಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಇನ್ನೋವಾ ಕಾರು ಹಾಸನ ಹೊರವಲಯದ ಬೈಪಾಸ್ ಬಳಿಯ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಅಪಘಾತಕ್ಕೆ ಈಡಾಗಿದೆ.
ಪುನೀತ್ ಸೇಫ್, ಅಭಿಮಾನಿಗಳೇ ಗಾಬರಿಯಾಗ್ಬೇಡಿ!
ವೇಗವಾಗಿ ಎದುರಿನಿಂದ ಬಂದ ಸ್ವಿಫ್ಟ್ ಕಾರಿಗೆ ಶಾಸಕರ ಕಾರು ಡಿಕ್ಕಿ ಹೊಡೆದಿದ್ದು, ಎರಡೂ ಕಾರುಗಳು ಭಾಗಷಃ ಜಖಂಗೊಂಡಿವೆ. ಎರಡೂ ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳು ಮಾತ್ರವೇ ಆಗಿದೆ. ಶಾಸಕರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ.
ಅಪಘಾತದ ನಂತರ ಬೇರೆ ಕಾರೊಂದರಲ್ಲಿ ಶಾಸಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಅವರು ಆಸ್ಪತ್ರೆಗೆ ಕೂಡ ದಾಖಲಾಗಿಲ್ಲ.
ಜೆಡಿಎಸ್‌ನಲ್ಲಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ ಪಕ್ಷ ಸೇರಿ ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !