ಹಾಸನ: ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರ
ಹಾಸನ, ಅಕ್ಟೋಬರ್ 10 : ಅಪ್ರಾಪ್ತ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
#BIGNEWS: Minor girl allegedly raped by a juvenile at Sakaleshpura in Hassan district, accused has been arrested#Karnataka pic.twitter.com/OlzEkh3sc3
— NEWS9 (@NEWS9TWEETS) October 10, 2017
ಸೋಮವಾರ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಮೂವರು ಬಾಲಕರು ಟಾಯ್ಲೆಟ್ ಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ಇಂದು ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿ, ಬಾಲಾಮಂದಿರಕ್ಕೆ ಸ್ಥಳಾಂತರಿಸಿದರು.

ನಾಪತ್ತೆಯಾಗಿರುವ ಇನ್ನೊಬ್ಬ ಬಾಲಾಪರಾಧಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಪ್ರಾಪ್ತ ಬಾಲಕರೇ ಇಂತಹ ನೀಚ ಕೃತ್ಯ ಎಸಗಿರುವುದು ವಿಷಾದನೀಯ ಸಂಗತಿ.












Click it and Unblock the Notifications