ಚಂದ್ರಗ್ರಹಣ ಹಿನ್ನೆಲೆಯಲ್ಲಿ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

Recommended Video

      ಚಂದ್ರಗ್ರಹಣ ಹತ್ತಿರವಿರುವಾಗ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯವೇನು ? | Oneindia Kannada

      ಹಾಸನ, ಜುಲೈ 25: 'ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

      "ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ, ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು...' ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀಗಳು ಒಗಟಿನ ಭವಿಷ್ಯ ನುಡಿದಿದ್ದಾರೆ.

      ಇದರರ್ಥ: ಗ್ರಹಣದ ಪರಿಣಾಮದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದ್ದು, ಪ್ರಾಕೃತಿಕ ಸಂಪನ್ಮೂಲ ನಾಶ, ಭೂಕಂಪ, ಅತಿವೃಷ್ಟಿಯಾಗಲಿದೆ. ಈ ಬಾರಿ ವಿಶೇಷವಾಗಿ ಸೂರ್ಯ ಮತ್ತು ಚಂದ್ರ ಗ್ರಹಣಗಳು ಒಟ್ಟಿಗೇ ಬಂದಿವೆ. ವಿಶೇಷವಾಗಿ ಬರುವ ದಿನಗಳು ಕಷ್ಟ ತರಲಿವೆ ಎಂದು ಅರ್ಥೈಸಲಾಗಿದೆ.

      ಭ್ರಾತೃ ಬೆಂಕಿ ಹಿಡಿಯುತ್ತಾನೆ ಎಂಬುದಕ್ಕೆ ಎಚ್​.ಡಿ.ಕುಮಾರಸ್ವಾಮಿಯವರ ಸಹೋದರ ರೇವಣ್ಣ ಬಂಡಾಯ ಏಳುತ್ತಾರೆ ಎಂದೂ ಕೆಲವರು ವಿಶ್ಲೇಷಿಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಸಂಕಷ್ಟದಲ್ಲಿ ಸಿಲುಕಿದರೆ ಸೋದರನಾಗಿ ಬೆಳಕು ತೋರಿಸಿ ರಕ್ಷಿಸುತ್ತಾರೆ ಎಂಬ ಅರ್ಥವನ್ನು ಹೇಳಿದ್ದಾರೆ.

      ನಿಜವಾದ ಭವಿಷ್ಯ: "ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಶ್ರೀಗಳು ಹೇಳಿದ್ದರು. ಅದರಂತೇ, ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ ಎಂದು ಶ್ರೀಗಳು ಹೇಳಿದ್ದರು. ಇದರಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬೆಳೆದ ಬೆಳೆಯನ್ನು ಪರರು(ಜೆಡಿಎಸ್) ಕೊಯ್ದುಕೊಂಡಿದ್ದಾರೆ ಎಂದು ಅರ್ಥೈಸಬಹುದು.

      ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸ

      ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸ

      ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ, ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸನಾಗಲಿದ್ದಾನೆಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಅದರಂತೇ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರದ ಬಾಗಿಲಲ್ಲಿ ಎಡವಿತ್ತು. ಕಾಂಗ್ರೆಸ್ 78 ಸ್ಥಾನ ಪಡೆದು, ಬಿಜೆಪಿಯನ್ನು ದೂರವಿಡಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಅವರು ಸರ್ಕಾರ ರಚಿಸಿದ್ದರು.

      ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರ ಭವಿಷ್ಯ

      ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರ ಭವಿಷ್ಯ

      ಈ ಸಲದ ಚಂದ್ರ ಗ್ರಹಣ(ಜುಲೈ 27) 107 ನಿಮಿಷಗಳಷ್ಟು ಸುದೀರ್ಘ ಕಾಲದವರೆಗೆ ಸಂಭವಿಸುವಂಥದ್ದು, ಮಕರ ರಾಶಿಯಲ್ಲಿ ಸಂಭವಿಸುವ ಚಂದ್ರ ಗ್ರಹಣವು ಒಟ್ಟಾರೆ ಚಂದ್ರ ಗ್ರಹಣವೇ ಮನಸಿನ ಮೇಲೆ ಪ್ರಭಾವ ಬೀರುವಂಥದ್ದು

      ನಂಬಿದವರಿಂದ ವಿಶ್ವಾಸ ದ್ರೋಹ

      ನಂಬಿದವರಿಂದ ವಿಶ್ವಾಸ ದ್ರೋಹ

      ಬಂಧು-ಮಿತ್ರರಲ್ಲಿ ವಿರಸ, ಸಾಮಾಜಿಕವಾಗಿ ಇವರಿಗಿಂತ ಕೆಳ ಸ್ಥಾನದಲ್ಲಿ ಇರುವವರಿಂದ ಅವಮಾನ, ಅನಾರೋಗ್ಯ ಸಮಸ್ಯೆ, ನಂಬಿದವರಿಂದಲೇ ವಿಶ್ವಾಸ ದ್ರೋಹ ಈ ಎಲ್ಲವೂ ಕಾಣುತ್ತಿದೆ. ಅದಕ್ಕೆ ಕಾರಣ ಆರನೇ ಮನೆಗೆ ಪ್ರವೇಶಿಸುವ ಗುರು ಹಾಗೂ ಚಂದ್ರನಿಗೆ ಏಳನೇ ಸ್ಥಾನ ಹಾಗೂ ಲಗ್ನಕ್ಕೆ ಎಂಟನೇ ಸ್ಥಾನದ ಶನಿಯ ಪ್ರಭಾವ. ಜತೆಗೆ ವಿಪತ್ ತಾರೆಯ ನಕ್ಷತ್ರದಲ್ಲಿ ನಡೆಯುತ್ತಿರುವ ಬುಧ ದಶೆ ಹಾಗೂ ರಾಹು ಭುಕ್ತಿಯ ಪ್ರಭಾವದಿಂದ ಇಷ್ಟೆಲ್ಲ ಅನುಭವಿಸಬೇಕಾಗುತ್ತದೆ. ಇನ್ನು ಇವರು ಒತ್ತಡಗಳಿಂದ ಸರಕಾರ ವಿಸರ್ಜಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ತನಗೆ ಲಭಿಸದಿದ್ದರೆ ಇನ್ನೊಬ್ಬರಿಗೂ ಸಿಗಬಾರದು ಎಂಬ ಕಾರಣಕ್ಕೆ ಹಾಗೆ ಮಾಡುವ ಸಾಧ್ಯತೆ ಇದೆ. ಬಾಧಕಾಧಿಪತಿ ಶನಿಯು ರವಿಯ ಜತೆ ಇರುವುದು ಇದಕ್ಕೆ ಕಾರಣ.

      ರೇವಣ್ಣ ಅವರಿಗೆ ಅಕ್ಟೋಬರ್ ನಂತರ ಗುರು ಬಲ

      ರೇವಣ್ಣ ಅವರಿಗೆ ಅಕ್ಟೋಬರ್ ನಂತರ ಗುರು ಬಲ

      ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವುದು ಐದನೇ ಮನೆಯಲ್ಲಿ ಗುರು ಇರುವಾಗಲೇ. ಅಕ್ಟೋಬರ್ ನಂತರ ಕುಮಾರಸ್ವಾಮಿ ಅವರಿಗೆ ಗುರು ಆರನೇ ಮನೆಗೆ ಹೋಗುತ್ತದೆ. ಆಗ ಅವರಿಗೆ ಆರೋಗ್ಯ ಬಾಧೆ ಹಾಗೂ ಅಧಿಕಾರ ನಾಶದ ಸನ್ನಿವೇಶಗಳು ಕಾಣಿಸಿಕೊಳ್ಳುತ್ತದೆ. ಅಂಥ ಸ್ಥಿತಿಯಲ್ಲಿ ರೇವಣ್ಣ ಅವರಿಗೆ ಗುರು ಬಲ ಬರುವುದರಿಂದ ಹೆಚ್ಚಿನ ಅಧಿಕಾರ ಪ್ರಾಪ್ತಿ ಯೋಗ ಇದೆ.

      ಗುರು ಬಲ ಬಂದಾಗ ರೇವಣ್ಣ ಅವರಿಗೆ ಹೇಗೆ ಅಧಿಕಾರ ಸಿಗಬಹುದು ಎಂಬ ವಿಶ್ಲೇಷಣೆ ಮಾಡಿದಾಗ, ಈ ಹಿಂದೆ ಕುಮಾರಸ್ವಾಮಿ ಅವರು ಹೇಗೆ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಜತೆ ಸಖ್ಯ ಬೆಳೆಸಿ, ಹೇಗೆ ಮುಖ್ಯಮಂತ್ರಿ ಆದರೋ ಅದೇ ಮಾದರಿಯಲ್ಲಿ ರೇವಣ್ಣ ಅವರು ಬಿಜೆಪಿ ಜತೆಗೆ ಕೈ ಜೋಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪಂಡಿತ್ ವಿಠಲ್ ಭಟ್ ಅವ್ರು ವಿಶ್ಲೇಷಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+